ಹದಿಹರೆಯವು ವಿದ್ಯಾರ್ಥಿ ಜೀವನದ ಮಹತ್ವದ ತಿರುವು: ಗಂಗಾಧರ ಗುಮ್ಮಗೋಳಮಠ
Adolescence is a turning point in a student's life: Gangadhar Gummagolmath
ಈ ಅವಧಿಯು ತಮ್ಮ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಪರ್ವಕಾಲವಾಗಿದೆ ಎಂದು ಗುಡಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಗಂಗಾಧರ ಗುಮ್ಮಗೋಳಮಠ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು, ಕುಂದಗೋಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ 'ಹದಿಹರೆಯದ ಸಮಸ್ಯೆಗಳು ಹಾಗೂ ಪರಿಹಾರೊಪಾಯ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹದಿಹರೆಯವು ವಿದ್ಯಾರ್ಥಿಗಳ ದೈ"ಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಬದಲಾವಣೆಯ ವೇಗದ ಅವಧಿಯಾಗಿದೆ. ಇದು ವಿದ್ಯಾರ್ಥಿ ಜೀವನದ ರೋಮಾಂಚನಕಾರಿ ಹಾಗೂ ಸವಾಲಿನ ಅವಧಿಯಾಗಿದೆ.
ಅತಿಯಾದ ಆತ್ಮ ವಿಶ್ವಾಸ, ಶೈಕ್ಷಣಿಕ ಒತ್ತಡಗಳಿಂದ ವಿದ್ಯಾರ್ಥಿಗಳು ದಾರಿತಪ್ಪುವ ಸಂದರ್ಭಗಳೇ ಹೆಚ್ಚು. ಈ ಅವಧಿಯಲ್ಲಿ ವಿದ್ಯಾರ್ಥಿಗಳು ನಕಾರಾತ್ಮಕ ಭಾವನೆಗಳಿಗೆ ಒಳಗಾಗದೇ ಸಕಾರಾತ್ಮಕ ಚಿಂತನೆ, ಒಳ್ಳೆಯ ಹವ್ಯಾಸ ಬೆಳಸಿಕೊಳ್ಳಬೇಕೆಂದು ಹೇಳಿದರು.
ಕುಂದಗೋಳದ ಕ್ಷೇತ್ರ ಸಮನ್ವಯಾಧಿಕಾರಿ ಸಂಜೀವಕುಮಾರ ಬೆಳವಟಗಿ ಉಪನ್ಯಾಸ ನೀಡಿ, ಹದಿಹರೆಯವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಭದ್ರಬುನಾದಿ ಹಾಕುವ ಸಮಯ. "ದ್ಯಾರ್ಥಿಗಳು ಖಿನ್ನತೆ, ಆತಂಕ ಕೀಳರಿಮೆಗೆ ಒಳಗಾಗಬಾರದು . ಹದಿಹರೆಯದಲ್ಲಿ
"ದ್ಯಾರ್ಥಿಗಳು ದಾರಿ ತಪ್ಪುವ ಅಪಾಯ ಹೆಚ್ಚಾಗಿದೆ.
ಈ ವಯಸ್ಸಿನಲ್ಲಿ ಸಹಜವಾಗಿ ಲೈಂಗಿಕ ಆಕರ್ಷಣೆ ಉಂಟಾಗಿ ಅನೈತಿಕ ಮಾರ್ಗ "ಡಿಯುವ ಸಂದರ್ಭಗಳು ಬರಬಹುದು. ಈ ಸಮಯದಲ್ಲಿ ಪಾಲಕರು ಮಕ್ಕಳೊಂದಿಗೆ ಸ್ನೇಹಪರವಾಗಿ ಮಾತನಾಡಿ ಅವರ ಸಮಸ್ಯೆ ಆಲಿಸಬೇಕು. ಶಿಕ್ಷಕರೂ ಸಹ ಸೂಕ್ತ ಮಾರ್ಗದರ್ಶನ ನೀಡಬೇಕೆಂದರು.
ಅಧ್ಯಕ್ಷತೆ ವ"ಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಬಿ. ಎಸ್. ಶಿರಿಯಪ್ಪಗೌಡರ್
ಮಾತನಾಡಿ, ಹದಿಹರೆಯವು ಒಂದು ರೀತಿ "ವಿದ್ಯಾರ್ಥಿ ಜೀವನದ ವಸಂತಕಾಲ ಮಾತ್ರವಲ್ಲ, ಪ್ರಕ್ಷುಬ್ದ ಅವಧಿಯೂ ಹೌದು. ಈ ಸಮಯದಲ್ಲಿ ಮಕ್ಕಳು ಆರೋಗ್ಯಕರ ಜೀವನಶೈಲಿ ಹಾಗೂ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು.
ಕಿರಣ ಕಳಸಣ್ಣವರ ಪ್ರಾರ್ಥಿಸಿದರು. ಡಾ. ಸುರೇಶ ಸಂಕಣ್ಣವರ ಸ್ವಾಗತಿಸಿದರು. ಕ.".ವ ಸಂಘದ ಶಿಕ್ಷಣ ಮಂಟಪ ಸಂಚಾಲಕರಾದ ವಿರಣ್ಣ ಒಡ್ಡೀನ ಪ್ರಾಸ್ತಾ"ಕವಾಗಿ ಮಾತನಾಡಿದರು. "ಜಯಕುಮಾರ ಮಲ್ಲಿಕಾರ್ಜುನಮಠ ನಿರ್ವ"ಸಿದರು. ಕೃಷ್ಣಪ್ಪ ಲಮಾಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಅಮರೇಶ ಪಿಳ್ಳಿ, "ವಿಜಯಲಕ್ಷ್ಮಿ ಗೋವಣ್ಣವರ, ಲಕ್ಷ್ಮೀ, ರಶ್ಮಿ ಜಿ.ಎಂ. "ಜಯ ಸೂಗಣ್ಣವರ, ಕವಿರಾಜ ಚಿಪ್ಪಲಕಟ್ಟಿ ಸೇರಿದಂತೆ ಅನೇಕರು ಭಾಗವ"ಸಿದ್ದರು.
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ 