ಜಿ ಬಿ ಚೌಗುಲೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ರಾಯಬಾಗ 13: ತಾಲೂಕಿನ ದಿಗ್ಗೇವಾಡಿ ಗ್ರಾಮದ ಜಿ ಬಿ ಚೌಗುಲೆ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ನಿತಿನ್ ಕಾಂಬಳೆ (ಶೇ.92) ಪ್ರಥಮ ಸ್ಥಾನ, ಚಂದ್ರಿಕಾ ಕಾಂಬಳೆ (ಶೇ.90) ದ್ವಿತೀಯ ಸ್ಥಾನ ಹಾಗೂ ಲಕ್ಷ್ಮಿ ನಾಯಿಕವಾಡಿ (ಶೇ.87) ತೃತೀಯ ಸ್ಥಾನ ಗಳಿಸುವುದರ ಮೂಲಕ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ  ಸಂಸ್ಥೆಯ ಅಧ್ಯಕ್ಷ ಎಲ್ ಬಿ ಚೌಗುಲೆ, ಕಾರ್ಯದರ್ಶಿ ವಿನಯ ಚೌಗುಲೆ, ಪ್ರಾಚಾರ್ಯರು ಎಸ್ ಎ ನಾಂದನೆ , ಉಪನ್ಯಾಸಕರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.