ಎಂ.ಎ.ಸುಬ್ರಹ್ಮಣ್ಯ ಅವರ ಸಾಧನೆ

ಹುಬ್ಬಳ್ಳಿ, 27: ಸಾಹಿತ್ಯ ಭಂಡಾರ ಕನ್ನಡ ಪುಸ್ತಕ ಪ್ರೇಮಿಗಳಿಗೆ ಸಮೃದ್ಧವಾಗಿ, ಅರ್ಥಪೂರ್ಣವಾಗಿ, ವಿಶಾಲವಾಗಿ ನವೀಕರಣಗೊಂಡು ಓದುಗ ಅತಿಥಿಗಳಿಗೆ ಸಜ್ಜಾಗಿ ನಿಂತಿರುವ ತೊಂಬತ್ತು ಮೀರಿದ ಸಂಭ್ರಮದಲ್ಲಿ ಸಾಹಿತ್ಯ ಭಂಡಾರ, ಸಾಹಿತ್ಯ ಪ್ರಕಾಶನದ ಮುಖ್ಯಸ್ಥ ಎಂ.ಎ.ಸುಬ್ರಹ್ಮಣ್ಯ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು, ಗ್ರಂಥ ನೀಡಿ, ಮಾಲಾರ್ಪಣೆ ಮಾಡಿ ಪ್ರೀತಿ, ಆತ್ಮೀಯತೆಯಿಂದ ಹೃದಯಪೂರ್ವಕವಾಗಿ ಗೌರವಿಸಲಾಯಿತು. ಅಭಿನಂದನೆಗಳನ್ನು ಸಲ್ಲಿಸಿದರು. ಶುಭಕೋರಿದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ,  ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ಸಾಹಿತಿ ಪ್ರೊ ಎಸ್‌.ಎಂ.ಸಾತ್ಮಾರ,  ಎಂ.ಎಸ್‌.ಋತ್ವಿಕ್, ದೀಲೀಪ ಕುಲಕರ್ಣಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಉಪಾಧ್ಯಕ್ಷ ಚನಬಸಪ್ಪ ಧಾರವಾಡಶೆಟ್ಟರ, ನಾಗರಾಜ, ಮುಂತಾದವರು ಇದ್ದರು.  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಮಾತನಾಡಿ ಸಾಹಿತ್ಯ ಪ್ರಕಾಶನದ ಮುಖ್ಯಸ್ಥ ಎಂ.ಎ.ಸುಬ್ರಹ್ಮಣ್ಯ ಅವರು ಮುದ್ರಣ ಕ್ಷೇತ್ರದಲ್ಲಿ ಅಮೋಘ ಸೇವೆ ಮಾಡುತ್ತಿದ್ದಾರೆ. ಸಾಹಿತ್ಯ ಪ್ರಸರಣ ಕಾರ್ಯವು ಅದ್ಭುತವಾಗಿ ನಡೆದಿದೆ. ಸಾಹಿತ್ಯ ಭಂಡಾರ ಉತ್ತರ ಕರ್ನಾಟಕದಲ್ಲಿಯೇ ಒಂದು ಬೃಹತ್ ಪುಸ್ತಕ ಮಳಿಗೆಯಾಗಿದೆ. ಕಳೆದ ತೊಂಬತ್ತು ವರ್ಷಗಳಿಂದ ಓದುಗರ ಜ್ಞಾನದಾಹ ನೀಗಿಸುತ್ತಾ ಬಂದಿದೆ. ಕೊಪ್ಪಿಕರ ರಸ್ತೆಯ ಅಂಚಿನಲ್ಲಿರುವ ಸಾಹಿತ್ಯ ಪ್ರಕಾಶನದ  ಎಂ.ಎ.ಸುಬ್ರಹ್ಮಣ್ಯ ಅವರು 700ಕ್ಕೂ ಹೆಚ್ಚು ಸದಭಿರುಚಿಯ ಸಾಹಿತ್ಯ ಕೃತಿಗಳನ್ನು ಓದುಗರ ಕೈಗೆ ನೀಡಿ ಮನೆಮಾತಾಗಿದ್ದಾರೆ.  

ಪುಸ್ತಕ ಪ್ರಕಟನೆ ಹಾಗೂ ಮಾರಾಟ ಅಷ್ಟೇನು ಲಾಭದಾಯಕವಾಗಿಲ್ಲ ಕಷ್ಟ, ನಷ್ಟ ಆದರೂ ಹಿರಿಯರು ಮಾಡಿದ ಕಾರ್ಯವನ್ನು ಶ್ರದ್ಧೆ ಹಾಗೂಪ್ರಾಮಾಣಿಕತೆಯಿಂದ ಎಂ.ಎ.ಸುಬ್ರಹ್ಮಣ್ಯ ಅವರು ಮುಂದುವರೆಸಿಕೊಂಡು ಬಂದಿದ್ದಾರೆ. ಹಲವಾರು ಪ್ರಶಸ್ತಿ, ಸನ್ಮಾನಗಳು ಅರಿಸಿಕೊಂಡು ಬಂದಿವೆ. ಕನ್ನಡ ಪ್ರಕಾಶನ ಲೋಕದ ಎರಡು ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳಾದ ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯುತ್ತಮ ಪ್ರಕಾಶನ ಬಹುಮಾನವನ್ನು, ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶನ ಸಂಸ್ಥೆ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ.  

 ಎಂ.ಎ.ಸುಬ್ರಹ್ಮಣ್ಯ ಅವರು ಮುಂದೆಯು ಇದೇ ರೀತಿಯ ಸಾಧನೆ ಮುಂದುವರೆಯಲಿ ಎಂದು ಶುಭಕೋರಿದರು. ಡಾ. ಎಂ.ಎ.ಸುಬ್ರಹ್ಮಣ್ಯ ಅವರು  ನವೀಕರಣಗೊಂಡ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗೆ ಹೋದ ನಮಗೆಲ್ಲರಿಗೂ ಕಾರ್ಕಳ, ಕಾಂತಾವರ, ಕನ್ನಡ ಸಂಘ ಕಾಂತಾವರ ಅವರ ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಖೃತಿ ಚಿಂತನ ಗ್ರಂಥಮಾಲೆ ಕುಸುಮ:345,  ಲೇಖಕಿ ಡಾ. ಸರ್ವಮಂಗಳಾ ಪಿ.ಆರ್ ಅವರು ರಚಿಸಿದ ಶ್ರೇಷ್ಠ ಸಾಹಿತ್ಯ ಪ್ರಕಾಶನ ಸಂಸ್ಥೆ ಸಾಹಿತ್ಯ ಭಂಡಾರ ಎಂಬ ಉತ್ತಮ ಕೃತಿಯ ಜೊತೆಗೆ ಸಿಹಿ ಪದಾರ್ಥ ನೀಡಿ ಗೌರವ ಆದರಾದಿತ್ಯ ನೀಡಿದ್ದು ಬಹಳ ಸಂತೋಷ ತಂದಿತು.