ಶಿಕ್ಷಣಕ್ಕೆ ಕೊಡುವ ಮಹತ್ವವನ್ನು ದೈಹಿಕ ಶಿಕ್ಷಣ ನೀಡಿ - ಶಿವರಾಜ ಸೀಮಿಕೇರಿ
Accord the same importance to physical education as is given to academics – Shivaraj Seemikeri
ಶಿರಹಟ್ಟಿ 17: ಪಾಲಕರು ಹಾಗೂ ಶಿಕ್ಷಕರು ಇಂದು ಶಿಕ್ಷಣಕ್ಕೆ ನೀಡುವಷ್ಟೇ ಮಹತ್ವವನ್ನು ದೈಹಿಕ ಶಿಕ್ಷಣ ಮತ್ತು ಕ್ರೀಡೆಗೂ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯಾದ ಬಸವರಾಜ ಸೀಮಿಕೇರಿ ಮಾರ್ಮಿಕವಾಗಿ ಹೇಳಿದರುಗುರುವಾರ ಶ್ರೀಮತಿ ಎನ್ ವಿ ಅಂಗಡಿ ಸರಕಾರಿ ಪ್ರೌಢ ಶಾಲೆ ಮಾಗಡಿಯಲ್ಲಿ ಶಿರಹಟ್ಟಿ ಎ ಗ್ರೂಪ್ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ, ಕ್ರೀಡೆಯಲ್ಲಿ ಗೆಲುವು-ಸೋಲು ಸಹಜ, ಪ್ರತಿಯೊಂದು ಪಂದ್ಯವೂ ವಿದ್ಯಾರ್ಥಿಗಳಿಗೆ ಹೊಸ ಅನುಭವ ಹಾಗೂ ಕಲಿಕೆಯನ್ನು ನೀಡುತ್ತದೆ. ಗೆಲುವನ್ನು ವಿನಯದಿಂದ ಸ್ವೀಕರಿಸುವುದು, ಸೋಲಿನಿಂದ ಪಾಠ ಕಲಿತು ಮತ್ತೆ ಪ್ರಯತ್ನಿಸುವುದು ಹಾಗೂ ತಂಡದ ಸಹ ಆಟಗಾರರೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವ ಗುಣಗಳನ್ನು ಕ್ರೀಡೆ ಬೆಳೆಸುತ್ತದೆ.
ಈ ಗುಣಗಳು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿಜೀವನದಲ್ಲಿಯೂ ಸಹಕಾರಿಯಾಗುತ್ತವೆ ಎಂದರು.ನಂತರ ಕೆಡಿಪಿ ಸದಸ್ಯರಾದ ಫಕ್ಕೀರೇಶ ನಡುವಿನಕೇರಿ ಹಾಗೂ ಪವನ ಇಳಿಗೇರ ಇನ್ನಿತರರು ಸೇರಿಕೊಂಡು ಬಾಲಕರ ಖೋ ಖೋ ಪಂದ್ಯಾವಳಿಯ ಟಾಸ್ ಮಾಡಿ ಪಂದ್ಯಾವಳಿಗೆ ಅಧಿಕೃತ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ವೀರಯ್ಯ ಮಠಪತಿ ತಾಲೂಕು ಪಂಚ ಗ್ಯಾರಂಟಿ ಅಧ್ಯಕ್ಷರು, ಅಶೋಕ ಪಲ್ಲೆದ ಮಾಜಿ ತಾಲೂಕು ಪಂಚಾಯತಿ ಸದಸ್ಯರು, ವಿ ಕೆ ಅಂಗಡಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಫಕ್ಕೀರೇಶ ನಡುವಿನಕೇರಿ ಕೆಡಿಪಿ ಸದಸ್ಯರು,ಪವನ ಇಳಿಗೆರ್ ಕೆಡಿಪಿ ಸದಸ್ಯರು, ಪ್ರಕಾಶ ಹೋರಿ, ಶಿವರಾಜಗೌಡ ಪಾಟೀಲ್, ಪ್ರಕಾಶ ಕುಂಡಿ ಶೇಕಣ್ಣ ಬದ್ನಿ, ಚನ್ನಪ್ಪ ಕೊಡಿ, ಮುತ್ತು ರಾಠೋಡ, ಬಿ ಡಿ ಪಲ್ಲೆದ, ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 