ಮಹಲಿಂಗಪುರ

ಎಎಸ್‌ಐ ಮಹಾಂತಯ್ಯ ಮಠ ಹೃದಯಾಘಾತದಿಂದ ನಿಧನ

ಎಎಸ್‌ಐ ಮಹಾಂತಯ್ಯ ಮಠ ಹೃದಯಾಘಾತದಿಂದ ನಿಧನ

ಮಹಾಲಿಂಗಪುರ 13: ಸ್ಥಳೀಯ ಪೊಲೀಸ್ ಠಾಣೆಯ ಎಎಸ್‌ಐ  ಮಹಾಂತಯ್ಯ ಮಹಾದೇವಯ್ಯ ಮಠ(52) ಮಂಗಳವಾರ ಕರ್ತವ್ಯ ವೇಳೆ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವಿದೆ. 

ಸಂತಾಪ: ಬಾಗಲಕೋಟೆಯ ಎಸ್ಪಿ ಸಿದ್ಧಾರ್ಥ ಗೋಯಲ್, ಕ್ರೈಂ ವಿಭಾಗದ ಮಹಾಂತೇಶ ಜಿದ್ದಿ, ಜಮಖಂಡಿಯ ಡಿಎಸ್ಪಿ ಜಮೀರ್ ರೋಷನ್, ಬನಹಟ್ಟಿಯ ಸಿಪಿಐ ಸಂಜೀವ ಬಳಗಾರ, ಮಹಾಲಿಂಗಪುರ ಠಾಣಾಧಿಕಾರಿಗಳಾದ ಕಿರಣ ಸತ್ತಿಗೇರಿ, ಮಧು ಎಲ್ ಸೇರಿದಂತೆ ನಗರ ಠಾಣೆಯ ಪೊಲೀಸ್ ಸಿಬ್ಬಂದಿಯವರು ಸಂತಾಪ ಸೂಚಿಸಿದ್ದಾರೆ. 


ಸುದ್ದಿ ಓದಿ