ಸ್ವಯಂ ಜನಗಣತಿಯ ಬೈಕ್ ರಾ್ಯಲಿಗೆ ಎಸಿ, ಶ್ವೇತಾ ಬೀಡಿಕರ ಚಾಲನೆ
AC, Shweta Bidika drive the bike rally for self-census
ಲೋಕದರ್ಶನ ವರದಿ,
ಜಮಖಂಡಿ 09 : ಸರಕಾರದ ಸುತ್ತೋಲೆ ಪ್ರಕಾರ ಸ್ವಯಂ ಜನಗಣತಿಯನ್ನು ಜಾರಿಗೆ ತಂದಿರುತ್ತದೆ. 2027ರ ಪ್ರಕಾರ ಸ್ವಯಂ ಗಣನೆ ಪ್ರಕ್ರಿಯೆಯನ್ನು 2026ರ ಏಪ್ರಿಲ್ 1ರಿಂದ ಏಪ್ರಿಲ್ 15 ರವರೆಗೆ ನಡೆಸಲಾಗುತ್ತದೆ. ಈ ಸಮಯದಲ್ಲಿ ಸರ್ಕಾರದ ಅಂತರ್ಜಾಲದಲ್ಲಿ ಸ್ವಯಂ ಆಗಿ ಸಾರ್ವಜನಿಕರು ತಮ್ಮ ವಿವರವನ್ನು ನೀಡಬಹುದು ಎಂದು ಉಪವಿಭಾಗಾಕಾರಿ ಶ್ವೇತಾ ಬೀಡಿಕರ ತಿಳಿಸಿದರು.
ನಗರದ ತಾಲೂಕಾಡಳಿತ ಸೌಧದ ಮುಂಭಾದಲ್ಲಿ ಬೈಕ್ ರಾ್ಯಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಂದು ಕುಟುಂಬವು ತಮ್ಮ ಮನೆಯ ಮಾಹಿತಿಯನ್ನು ನಿಖರವಾಗಿ ಮತ್ತು ಸಂಪೂರ್ಣವಾಗಿ ಸ್ವಯಂ ಗಣನೆ ವ್ಯವಸ್ಥೆಯ ಮೂಲಕ ಸಲ್ಲಿಸಬೇಕು. ಈ ಪ್ರಕ್ರಿಯೆ ಸರಿಯಾದ, ಪಾರದರ್ಶಕ ಹಾಗೂ ಸಮಯೋಚಿತ ಮಾಹಿತಿಯನ್ನು ಸಂಗ್ರಹಿಸಲು ಸಹಕಾರಿಯಾಗುತ್ತದೆ, ಇದು ಭವಿಷ್ಯದ ಯೋಜನೆ ಮತ್ತು ಅಭಿವೃದ್ಧಿಗೆ ಬಹಳ ಮುಖ್ಯವಾಗಿದೆ. ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ ಎಂದರು.
ತಹಶೀಲ್ದಾರ ಅನೀಲ ಬಡಿಗೇರ, ನಗರಸಭೆ ಪೌರಾಯುಕ್ತ ಜೋತಿ ಗೀರೀಶ ಸ್ವಯಂ ಜನಗಣತಿಯ ಕುರಿತು ಮಾತನಾಡಿದರು.
ವಿಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ ಅನೀಲ ಬಡಿಗೇರ, ನಗರಸಭೆ ಪೌರಾಯುಕ್ತ ಜೋತಿ ಗೀರಿಶ ಅವರು ಎಲ್ಲ ಸಿಬಂಧಿಗಳ ಜೊತೆಗೆ ಬೈಕ್ ರಾ್ಯಲಿ ಓಡಿಸುವ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸ್ವಯಂ ಜನಗಣತಿಯ ಕುರಿತು ಜನಜಾಗೃತಿ ಮೂಡಿಸಿದರು. ನಂತರ ಎ,ಜಿ, ದೇಸಾಯಿ ಸರ್ಕಲ್‌ನಲ್ಲಿ ಜಮಾಯಿಸಿ. ಕೆಲಕಾಲ ರಸ್ತೆ ತಡೆಯನ್ನು ನಡೆಸಿ ಮಾನವ ಸರಪಳಿಯಿಂದ ಘೋಷಣೆಯನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಿದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 