ಗ್ರಾಮೀಣ ಸೊಗಡು ನೆನಪಿಸಿದ ಹಳ್ಳಿ ಹಬ್ಬ

ಗಂಗಾವತಿ.03: ಗಂಗಾವತಿಯ ಆನೆಗೊಂದಿ ರಸ್ತೆಯಲ್ಲಿರುವ  ವಿಕಾಸ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ’ಹಳ್ಳಿಹಬ್ಬ’ ಕಾರ್ಯಕ್ರಮ ಗ್ರಾಮೀಣ ಸೊಗಡನ್ನು ಅನಾವರಣಗೊಳಿಸಿತು. ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಹಳ್ಳಿ ಆಟಗಳ ಬಗ್ಗೆ ಇಂದಿನ ಮಕ್ಕಳಿಗೆ ಅರಿವು ಇಲ್ಲದಂತಾಗಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕ್ರೀಡೆಗಳನ್ನು ನೆನಪಿಸಿ, ಉಳಿಸಿ, ಉತ್ತೇಜನ ನೀಡಲು ಹಳ್ಳಿ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಅಧ್ಯಕ್ಷತೆ ವಹಿಸಿದ ಹೈಮಾವತಿರವರು ಹೇಳಿದರು. 

ಪಾಲಕರಿಂದ ರಂಗೋಲಿ ಸ್ಪರ್ಧೆ, ಧಾನ್ಯ ವಿಂಗಡನೆ, ಮಾಡಲಾಯಿತು ನಂತರ ವಿಧ್ಯಾರ್ಥಿಗಳಿಗೆ ಸೋಬಾನೆ ಪದ, ಜಾನಪದ ಗೀತೆಗಳ ಗಾಯನ ಸ್ಪರ್ಧೆಗಳಲ್ಲಿ ವಿದ್ಯಾರ್ಥಿನಿಯರು ಅತ್ಯುತ್ಸಾಹದಿಂದ ಭಾಗವಹಿಸಿದರೆ ಉಳಿದವರು ಪಾಲಕರ ಮೂಲಕ ಸ್ಪರ್ಧಿಗಳನ್ನುಹುರಿದುಂಬಿಸಿದರು. ಪ್ರಸ್ತುತ ನಗರ​ಪ್ರದೇಶದ ವಿದ್ಯಾರ್ಥಿಗಳಿಗೆ ಬಿಂದಿಗೆಯಲ್ಲಿ ನೀರು ಹೊರುವುದುಅಭ್ಯಾಸವಿರುವುದಿಲ್ಲ. ಆದರೆ ಹಳ್ಳಿಹಬ್ಬದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳು, ಗ್ರಾಮೀಣ ಭಾಗದ ವಿದ್ಯಾರ್ಥಿಗಳೊಂದಿಗೆ ನೀರು ತುಂಬಿದ ಎರಡು ಬಿಂದಿಗೆಗಳನ್ನು ಹೊತ್ತು ಗುರಿ ತಲುಪಲು ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದರೆ, ಕೆಲವರು ಬಿಂದಿಗೆ ಹೊರಲಾರದೆ ಬೀಳಿಸಿ ಮಧ್ಯದಲ್ಲೇ ಹೊರ ನಡೆದರು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಗಂಗರಾಜು, ಶಿಕ್ಷಕಿಯಾರದ ದೀಪಾ, ವೀಣಾ, ಗಾಯತ್ರಿ, ಗೀತಾ, ಮೌಲಾನಬಿ, ಜ್ಯೋತಿ, ಶಿಲ್ಪ, ಮೇಘನಾ, ಮತ್ತು ಪಾಲಕರು ಸೇರಿದಂತೆ ಇತರರು ಇದ್ದರು