ಬಾಲ್ಯಕಾಲದ ಗೆಳೆಯರ ಬಳಗದಿಂದ ಗುರುನಮನ
A tribute to the teacher from a group of childhood friends
ಲೋಕದರ್ಶನ ವರದಿ
ಸವದತ್ತಿ: ಪಟ್ಟಣದ ರಾಮಾಪೂರ ಸೈಟ್ನಲ್ಲಿ ಇತ್ತೀಚೆಗೆ ಬಾಲ್ಯಕಾಲದ ಗೆಳೆಯರ ಬಳಗದಿಂದ ಗುರುನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗುರ್ಲಹೊಸೂರಿನ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಮೂರು ವರ್ಷಗಳ ಕಾಲ ಕಲಿಸಿದ ಶಿಕ್ಷಕರಾದ ಬಿ. ಕೆ. ಮಲಗೌಡ್ರ ಅವರನ್ನು ಅವರ ಸ್ವಗೃಹದಲ್ಲಿ ಎಲ್ಲ ಶಿಷ್ಯಬಳಗ ಪ್ರೀತಿಯಿಂದ ಸತ್ಕರಿಸಿ ಗೌರವಿಸಿದರು. ಶಿಷ್ಯಂದಿರ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ. ಕೆ. ಮಲಗೌಡ್ರ ಸರ್, “ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಒಂದಲ್ಲ ಒಂದು ದಿನ ಫಲ ಕೊಟ್ಟೇ ಕೊಡುತ್ತದೆ ಎಂಬುದಕ್ಕೆ ನೀವೆಲ್ಲ ಸಾಕ್ಷಿಯಾಗಿ ನಿಂತಿದ್ದೀರಿ. ಕಲಿತ ಅಕ್ಷರವನ್ನು ಮರೆಯದೆ ಗುರುವನ್ನು ಹುಡುಕಿಕೊಂಡು ಬಂದು ಸಮ್ಮಾನಿಸುವುದಿದೆಯಲ್ಲ ಅದು ಕಲಿಸಿದವನಿಗೆ ನೀಡುವ ನಿಜವಾದ ಗೌರವ.
ಈ ವೃತ್ತಿ ನನಗೆ ನಿಜಕ್ಕೂ ಧನ್ಯತೆ, ಅಭಿಮಾನ ಮೂಡಿಸಿದೆ” ಎಂದು ಮಾತನಾಡಿ ಕಲಿಸಿದ ದಿನಗಳನ್ನು ಮೆಲುಕು ಹಾಕಿದರು. ಬೇರೆ ಬೇರೆ ವೃತ್ತಿಯಲ್ಲಿ ತಮ್ಮ ಬದುಕನ್ನು ಕಂಡುಕೊಂಡ ಶಿಷ್ಯರು ಬಾಲ್ಯಕಾಲದ ದಿನಗಳ ಕಲಿಕೆಯ ನೆನಪುಗಳನ್ನು ಹಂಚಿಕೊಂಡು ಗುರುವಿನ ಕಾಲಿಗೆರಗಿ ಕೃತಜ್ಞತೆ ಸಮರ್ಿಸಿದರು. ಈ ಸಂದರ್ಭದಲ್ಲಿ ಝಕೀರ್ ನದಾಫ, ಪ್ರಕಾಶ್ ಸುತಗಟ್ಟಿ, ಸುರೇಶ ಬನಹಟ್ಟಿ, ಮಾರುತಿ ಲಿಂಗದಾಳ, ರಾಮು ಸಬಕಾಳೆ, ಹುಸೇನ್ ಗಡಾದ, ರಜಾಕ್ ಮೊಖಾಶಿ, ವೀರಭದ್ರ ಕರೀಕಟ್ಟಿ, ಮಹಮ್ಮದ್ ದೊಡವಾಡ, ಧರ್ಮೇಂದ್ರ ಪಂಢರಿ, ಈರಯ್ಯ ಹಿರೇಮಠ, ಉದಯ ಫಡಿ, ಮಹಬೂಬ ಯಡೊಳ್ಳಿ, ಸುಭಾಷ ಕಕರಂಬಿ, ನಾಗೇಶ್ ನಾಯಕ ಹಾಗೂ ಮಲಗೌಡ್ರ ಸರ್ ಕುಟುಂಬದವರು ಉಪಸ್ಥಿತರಿದ್ದರು
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ 