ಶರೀಫ ನದಾಫ
ಬೈಲಹೊಂಗಲ 30: ಸುಕ್ಷೇತ್ರ ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಡಾ. ಶಿವಾನಂದ ಭಾರತಿ ಸ್ವಾಮಿಗಳವರ 80 ನೇ ವರ್ಷದ ಜಯಂತ್ಸೋತ್ಸವ ( ಸಹಸ್ರ ಚಂದ್ರ ದರ್ಶನ ಮಹೋತ್ಸವ) 50 ನೇ ವರ್ಷದ ಪೀಠಾರೋಹಣ ಹಾಗೂ 50 ನೇ ಅಖಿಲ ಭಾರತ ವೇದಾಂತ ಪರಿಷತ್ತಿನ ಸುವರ್ಣ ಮಹೋತ್ಸವ ಮತ್ತು ನೂತನವಾಗಿ ಅಮೃತಶಿಲೆಯಲ್ಲಿ ನಿಮರ್ಿಸಿದ ಅಂಬಾ ಪರಮೇಶ್ವರಿ ನವದುಗರ್ಾ ದೇವಿಯವರ ಮೂತರ್ಿ ಪ್ರಾಣಪ್ರತಿಷ್ಠಾಪನೆ, ರಜತ ರಥೋತ್ಸವ ಮತ್ತು ಶಿವಯೋಗೀಶ್ವರರ ಮಹಾರಥೋತ್ಸವಕ್ಕೆ ಬರುವ ಭಕ್ತಾಧಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಅದರಂತೆ ಬಂದ ಭಕ್ತಾಧಿಗಳಿಗೆ ನಿರಂತರ ಮಹಾದಾಸೋಹದ ವ್ಯವಸ್ಥೆಯು ಕೂಡ ಅಷ್ಟೆ ಅಚ್ಚುಕಟ್ಟಾಗಿ, ಸಮರ್ಪಕವಾಗಿ ನಡೆಯುತ್ತಿದೆ. ದಿನಾಲು ಬೆಳಿಗ್ಗೆ ಉಪ್ಪಿಟ್ಟು, ಸ್ವೀಟ, ಮದ್ಯಾಹ್ನ ಸಜ್ಜಕ, ಅನ್ನ ಸಾರು, ರೊಟ್ಟಿ, ಕಾಯಪಲ್ಲೆ ಪ್ರಸಾದ ಸವಿಯುತ್ತಿದ್ದಾರೆ.
ಅದರಂತೆ ಸುಮಾರು 100 ಕ್ಕೂ ಹೆಚ್ಚು ಬಾಣಸಿಗರು ಅಡುಗೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಾರೂಗೇರಿ, ಶಂಕ್ರಟ್ಟಿ, ಧರ್ಮಟ್ಟಿ, ಮಾವನೂರು, ಮತ್ತಿತರರ ಗ್ರಾಮದ 1 ಸಾವಿರಕ್ಕಿಂತ ಹೆಚ್ಚು ಸೇವಾದಳದ ಕಾರ್ಯಕರ್ತರು ಪ್ರಸಾದ ಸಿದ್ದಪಡಿಸುವ ಕಾರ್ಯ, ಬಡಿಸುವ ಕಾರ್ಯದಲ್ಲಿ ತಮ್ಮ ಸೇವಾ ಮನೋಭಾವ ತೋರುತ್ತಿದ್ದಾರೆ.
ಇಂದು ಗುರುವಾರ ಇಂಚಲ ಸೇರಿದಂತೆ ಸುತ್ತಲಿನ ಗ್ರಾಮಗಳಾದ ಮುತವಾಡ, ಗೊಂತಮಾರ, ಮುಕರ್ಿಭಾವಿ ಸದ್ಭಕ್ತರು ಅಂಬಾ ಪರಮೇಶ್ವರಿ ನವದುಗರ್ಾದೇವಿಗೆ ಕರಿಕಡಬು ಮಾಡಿಕೊಂಡು ನೈವಧ್ಯೆ ಮಾಡಿ ಬಂದಂತಹ ಲಕ್ಷಾಂತರ ಭಕ್ತಾಧಿಗಳಿಗೆ ಪ್ರಸಾದ ನೀಡಿದ್ದು ವಿಶೇಷವಾಗಿತ್ತು.
ದಾಸೋಹ ವೈವಿಧ್ಯ : ಇಂಚಲ ಗ್ರಾಮದ ತಾಜುದ್ದಿನ ಮಿರ್ಜನ್ನವರ ಹಾಗೂ ಕುಟುಂಬ ವರ್ಗದವರು 50 ಕೆ.ಜಿ ತುಪ್ಪವನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡಿದರು. ಇಂಚಲ ಗ್ರಾಮದ ಸಕಲ ಸಧ್ಭಕ್ತರು ಕೂಡ 50 ಕೆ.ಜಿ. ತುಪ್ಪವನ್ನು ಪ್ರಸಾದ ಮಾಡಲು ನೀಡಿ ದೇವಿ ಆಶೀವರ್ಾದಕ್ಕೆ ಪಾತ್ರರಾಗಿದ್ದಾರೆ. ಪ್ರತಿನಿತ್ಯ ಶ್ರೀಮಠದ ವತಿಯಿಂದ ಹಾಗೂ ಮಹಾ ದಾನಿಗಳಿಂದ ವಿವಿಧ ಬಗೆಯ ಪ್ರಸಾದದ ವ್ಯವಸ್ಥೆ ದಿನದ ಪೂತರ್ಿ ನಿರಂತರವಾಗಿ ನಡೆಯುತ್ತಿರುತ್ತದೆ.
ನಿರಂತರ ದಾಸೋಹದಲ್ಲಿ ಸುಮಾರು ಒಂದು ಲಕ್ಷಕ್ಕಿಂತ ಹೆಚ್ಚು ಭಕ್ತಾಧಿಗಳು ಪ್ರಸಾದ ಸವಿದು ಬಂದ ಭಕ್ತರು ಡಾ.ಶಿವಾನಂದ ಭಾರತಿ ಸ್ವಾಮಿಜಿಗಳ ಮಹಾಕಾರ್ಯವನ್ನು ಶ್ಲಾಘಿಸುತ್ತಾ ಕೃತಾರ್ಥರಾಗಿ ಧನ್ಯತಾ ಭಾವದಿಂದ ಹೊರಬರುತ್ತಿರುವದು ವಿಶೇಷವಾಗಿದೆ