ಲೋಕದರ್ಶನ ವರದಿ
ಬೆಳಗಾವಿ 03: ಯುವ ಗಾಯನ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿ ಕೊಡಲು ನಗರದ ಯುವ ಕರ್ನಾಟಕ ಅಭಿವೃದ್ಧಿ ಸಂಘದ ಯುವ ಗಂಧರ್ವ ಗಾಯನ ಸ್ಪರ್ದೇಯನ್ನು ಆಯೋಜಿಸಿತ್ತು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಮೊದಲ ಹಂತದ ವಯಕ್ತಿಕ ಸ್ಪರ್ದೇ ಆಯೊಜಿಸಲಾಗಿತ್ತು. ವಿಜೇತರಿಗೆ ಪ್ರಥಮ 10000 ದ್ವಿತೀಯ 5000 ಮತ್ತು ತೃತೀಯ 2000 ಸೇರಿದಂತೆ ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಚಿತ್ರಗೀತೆಗಳನ್ನು, ಸುಗಮ ಸಂಗೀತ, ಭಾವ ಗೀತೆ, ಭಕ್ತಿಗೀತೆ, ವಚನ ಗಾಯನ, ಜಾನಪದ ಗೀತೆಗಳು, ದಾಸರ ಪದಗಳು ಮತ್ತು ನಾಡಗೀತೆಗಳಿಗೆ ಅವಕಾಶ ಕಲ್ಪಿಸುಲಾಗಿತ್ತು. ಸ್ಪಧರ್ೆ ಯ ನಿರ್ನಾಯಕರಾಗಿ ನಯನಾ ಗಿರಿಗೌಡರ ವಿಶಾಖಾ ದೇಶಪಾಂಡೆ ಹಾಗೂ ಇಸ್ಮಾಯಿಲ್ ಆಗಮಿಸಿದರು. ಈ ಸ್ಪರ್ಧೆಯ ಫೈನಲ್ ನ. 9 ರಂದು ಶನಿವಾರ ಶಾಹುನಗರದ ಬಸವಮಾರ್ಗದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಬಸವರಾಜ ಪರವಿನಾಯ್ಕರ ಸವನೂರ ಸತೀಶ ಪಾಟೀಲ ಎನ್ ಬಿ ಪಾಟೀಲ್ ಗುನಪಾಲ ಹೆಗಡೆ. ಮೊದಲಾದವರು ಉಪಸ್ಥಿತರಿದ್ದರು.