ಧಾರವಾಡ 02: ಧಾರವಾಡ ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ಮತ್ತು ಜಲ್ಲಾ ಪಂಚಾಯತ ಸಿಇಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ನೋಡೆಲ್ ಅಧಿಕಾರಿ ಡಾ.ಬಿ.ಸಿ. ಸತೀಶ ಅವರು ಮತದಾರ ಜಾಗೃತಿ ಕುರಿತು ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಶುಕ್ರವಾರದಂದು ವಿಶೇಷ ಸಂದರ್ಶನ ನೀಡಿದ್ದಾರೆ.
ಈ ಸಂದರ್ಶನವು ಧಾರವಾಡ ಆಕಾಶವಾಣಿ ಕೇಂದ್ರದಿಂದ ರವಿವಾರ, ಫೆ.03ರಂದು ಬೆಳಿಗ್ಗೆ 8-30 ರಿಂದ 9 ಗಂಟೆ ವರೆಗೆ ಪ್ರಸಾರವಾಗಲಿದೆ.
ಮತದಾರ ನೋಂದಣಿ, ಯುವ ಮತದಾರರ ನೋಂದಣಿ, ವೀಕಲಚೆತನರಿಗೆ ಮಾಡಿರುವ ಸೌಲಭ್ಯ, ನೀತಿ ಸಂಹಿತೆ ಉಲ್ಲಂಘನೆ ಮಾಡುವ ಅಭ್ಯಥರ್ಿ, ಇತರ ವ್ಯಕ್ತಿ, ಪಕ್ಷಗಳ ವಿರುದ್ಧ ನಾಗರಿಕರೇ ನೇರವಾಗಿ ಆನ್ಲೈನ್ ಮೂಲಕ ದೂರು ಸಲ್ಲಿಸಲು ಅವಕಾಶ ಮಾಡಿರುವ ಸಿ-ವಿಜಿನ್ ಆ್ಯಪ್ ಬಳಕೆ ಮತ್ತು ನೋಟಾ ಮತದಾನ ಕುರಿತು ಈ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ನಾಗರಿಕರು, ಮತದಾರರು ಸಂದರ್ಶನ ಕೇಳುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬೇಕೆಂದು ಮತ್ತು ಇತರರು ಈ ಸಂದರ್ಶನ ಕೇಳಲು ಮಾಹಿತಿ ನೀಡಿಬೇಕೆಂದು ವಾತರ್ಾ ಇಲಾಖೆಯ ಪ್ರಕಟಣೆ ತಿಳಿಸಿದೆ.