ಶಿಕ್ಷಣ ಕ್ಷೇತ್ರದ ಹಿರಿಯ ಸಾಧಕರಿಗೆ ಗೌರವ ನಮನ

ಶಿಕ್ಷಣ ಕ್ಷೇತ್ರದ ಹಿರಿಯ ಸಾಧಕರಿಗೆ ಗೌರವ ನಮನ  A respectful tribute to distinguished achievers in the field of education

ಹುಬ್ಬಳ್ಳಿ  14:  ಹೆಮ್ಮೆಯ ಶಿಕ್ಷಣ ತಜ್ಞರು ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ  ಬೆಳಕಾದ   ದಾರೀದೀಪ ಹಾಗು ಕೆ.ಎಲ್ ಇ ಸಂಸ್ಥೆಯ ಪಿ ಸಿ ಜಾಬಿನ್ ವಿಜ್ಞಾನ ಕಾಲೇಜಿನ ನಿವೃತ್ ಪ್ರಾಧ್ಯಾಪಕರು ಹಾಗೂ ಏನ್‌. ಸಿ. ಸಿ ಮೇಜರ್ ಆಗಿದ್ದ ಪ್ರೊ ಗುರುರಾಜ ಬಿ. ಕಲಕೋಟಿ ಅವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನುಸ್ಮರಿಸುತ್ತಾ ಅವರಿಗೆ ಗೌರವ ಪೂರ್ವಕ ಶ್ರಧಾಂಜಲಿ ಸಲ್ಲಿಸುವ ನುಡಿ ನಮನ್ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ, 

ಹಗಲಿರುಳು ಸಮಾಜಕ್ಕೆ ಸೇವೆಯನ್ನು ಸಲ್ಲಿಸುತ್ತಿರುವ ಹಾಗೂ ಸಧೃಡ ಸಮಾಜ ನಿರ್ಮಾಣಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿರುವ ಅಂತಃಕರಣವುಳ್ಳ ಪರಮಪೂಜ್ಯರು, ಸದಾ ಸಂತೋಷ್ ದಿಂದ  ಭಕ್ತರನ್ನು ಮಾತನಾಡಿಸುವ, ಹಾವೇರಿ ಜಿಲ್ಲೆಯ ನೆಗಳೂರು  ಸಂಸ್ಥಾನ ಹಿರೇಮಠದ  ಷಟಸ್ಥಲ ಬ್ರಹ್ಮ ಗುರುಶಾಂತೇಶ್ವರ ಮಹಾಸ್ವಾಮಿಗಳು ಅವರನ್ನು ಭೇಟಿ ಮಾಡಿದ  ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು  ಗೌರವ ಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ  ನಮನಗಳನ್ನು ಸಲ್ಲಿಸಿದರು.

ಭಕ್ತಿಯಿಂದ ಶ್ರೀಗಳ ದರ್ಶನ ಆಶೀರ್ವಾದ ಪಡೆದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಉಪನ್ಯಾಸಕ ವೀರೇಶ ಚಂದ್ರಕಾಂತ್ ಬಳಿಗಾರ್,   ಡಾ. ಲಿಂಗರಾಜ  ಡಿ. ಹೊರಕೇರಿ, ಡಾ. ಮಹೇಶ  ಡಿ. ಹೊರಕೇರಿ, ಡಾ. ಲಿಂಗರಾಜ ಅಂಗಡಿ,   ಸಿ ಜಿ ಧಾರವಾಡಶೆಟ್ಟರ,  ಪ್ರೊ ಕೆ.ಎಸ್‌.ಕೌಜಲಗಿ,  ಮುಂತಾದವರು ಇದ್ದರು.