ಸಡಗರ-ಸಂಭ್ರಮದಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ

ಬೈಲಹೊಂಗಲ 23: ತಾಲೂಕಿನ ಯರಡಾಲ ಗ್ರಾಮದಲ್ಲಿ ನಡೆದಿರುವ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ರವಿವಾರ ಗ್ರಾಮಸ್ಥರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಸಡಗರ-ಸಂಭ್ರಮದಿಂದ ಜರುಗಿತು.  

ಸುಮಂಗಲೆಯರು ದೇವಿಗೆ ಆರತಿ ಎತ್ತಿ, ದೇವರಿಗೆ ನಮಿಸಿದರು. ಮುಂಜಾನೆ ದೇವಿಗೆ ಕುಂಕುಮಾರ್ಚನೆ, ವಿಶೇಷ ಅಭಿಷೇಕ ಜರುಗಿದವು. ಗ್ರಾಮವನ್ನು ತಳಿರು, ತೋರಣ ರಂಗೋಲಿಯಿಂದ ಶೃಂಗರಿಸಲಾಗಿತ್ತು. ಮಹಾಪ್ರಸಾದ ಜರುಗಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು ಜರುಗಿದವು. 

ಉಡಿ ತುಂಬುವ ಕಾರ್ಯಕ್ರಮ ಶುಕ್ರವಾರದವರೆಗೂ ಮುಂದುವರೆಯಲಿದೆ. ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ಧಾರ್ಮಿಕ ಸಭೆ ಜರುಗಲಿವೆ. 

ಜಾತ್ರಾ ಮಹೋತ್ಸವ ಕಮೀಟಿಯ ಅಧ್ಯಕ್ಷ ಸಿ.ಆರ್‌. ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಈರಣ್ಣ ವಾರದ, ಶಂಕರ ಮುರಗೋಡ, ನಾಗಪ್ಪ ಬೈಲಪ್ಪನವರ, ನಿಂಗಪ್ಪ ರಾಜಗೋಳಿ, ಎಂ.ಬಿ. ಪಾಟೀಲ, ಬಸನಗೌಡ ಪಾಟೀಲ, ಶ್ರೀಶೈಲಗೌಡ ಪಾಟೀಲ, ಸುರೇಶ ಹೂಗಾರ, ಶಿವಪ್ಪ ಗೋಣಿ, ಉದಯ ಪಾಟೀಲ, ನಾಗರಾಜ ಪಾಟೀಲ, ಮಲ್ಲಿಕಾರ್ಜುನ ಮುದಿನಾಯ್ಕರ, ಪ್ರವೀಣ ಪಾಟೀಲ, ಬಸವರಾಜ ಮುತ್ನಾಳ, ಮಂಜುಳಾ ಬನಶೆಟ್ಟಿ, ರಮೇಶ ಪೂಜೇರ, ಸೋಮಶೇಖರ ಮರಾಠೆ, ಮಹೇಶ ತಿಗಡಿ, ಮಂಜುನಾಥ ಪಾಟೀಲ ಹಾಗೂ ಗ್ರಾಮಸ್ಥರು, ಭಕ್ತಾಧಿಗಳು ಪಾಲ್ಗೊಂಡಿದ್ದರು.