ಕವಿತೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬಹುದು: ಮಾನ್ವಿ ಪಾಷಾ
A positive message can be conveyed to society through poetry: Manvi Pasha
ಕೊಪ್ಪಳ 10: ಕವಿತೆಯ ಮೂಲಕ ಕವಿ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಸಾಧ್ಯ. ಕವಿತೆಯಲ್ಲಿ ಉತ್ತಮ ಸಂದೇಶ ಅಡಗಿರುತ್ತದೆ ಎಂದು ನಗರಸಭೆಯ ಮಾಜಿ ಸದಸ್ಯ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಮಾನ್ವಿ ಪಾಷಾ ಹೇಳಿದರು.
ನಗರದಲ್ಲಿ ಶನಿವಾರ ಸಂಜೆ ಆಲ್ ಇಂಡಿಯಾ ಮುಷಾಯಿರಾ ಸಮಿತಿ ವತಿಯಿಂದ ಆಯೋಜಿಸಿದ್ದ ಸ್ಥಳೀಯ ಕವಿಗಳ ಕವಿಗೋಷ್ಠಿ ಹಾಗೂ ಮುಷಾಯಿರಾ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಅವರು ಮಾತನಾಡಿದರು.
ಕವಿಗಳು ತಮ್ಮ ಕವಿತೆಗಳ ಮೂಲಕ ಅಪಾರವಾದ ವಿಚಾರಶಕ್ತಿಯನ್ನು ಸಮಾಜಕ್ಕೆ ನೀಡುತ್ತಿದ್ದಾರೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಕವಿತೆಯೂ ಸಹಕಾರಿಯಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಮಾನ್ವಿ ಪಾಷಾ ಹೇಳಿದರು.
ನಗರ ಆಶ್ರಯ ಸಮಿತಿ ಸದಸ್ಯ ಹಾಗೂ ಅಲ್ಪಸಂಖ್ಯಾತರ ಸಮಾಜದ ಮುಖಂಡ ಹುಸೇನ್ ಪಿರಾ ಮುಜಾವರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕವಿಗಳು ರಚಿಸಿರುವ ಪ್ರತಿಯೊಂದು ಸಾಲಿನಲ್ಲೂ ಉತ್ತಮ ಸಂದೇಶ ಅಡಗಿರುತ್ತದೆ. ಆ ಸಂದೇಶವನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜೀವನ ನಡೆಸಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಹಾಗೂ ಉರ್ದು ಸಾಹಿತ್ಯ ಕವಿ ಅನ್ವರ್ ಹುಸೇನ್, ಹಿರಿಯ ಸಮಾಜ ಸೇವಕ ಹಾಗೂ ಸಾಹಿತಿ ಸಮದ್ ಸಿದ್ದಿಕಿ, ಉರ್ದು ಕವಿ ಎಂ. ವಿಜಾರತ್ ಅಲಿ, ಯುವ ಕವಿ ಅಫಾನ್ ಸಿದ್ದಿಕಿ ಅವರು ಉರ್ದು ಕವನ ವಾಚನದ ಮೂಲಕ ಜನಮನ ಸೆಳೆದರು.
ಮೊಹಮ್ಮದ್ ಗೌಸ್ ಗೇಟಿನ್ ಅವರು ಕನ್ನಡ ಕವನ ವಾಚನ ಮಾಡಿದರು. ದಾವೂದ್ ಹುನುಗುಂದ, ಸೈಯದ್ ಇಮಾಮ್ ಹುಸೇನ್ ಸಿಂದೋಗಿ ಹಾಗೂ ಸಿದ್ದೀಕ್ ಹುಸೇನ್ ಕಕ್ಕಿಹಳ್ಳಿ ಅವರು ಕವನ, ಗಜಲ್ ಮತ್ತು ಹಾಸ್ಯ ಕವನಗಳನ್ನು ವಾಚಿಸಿ ಪ್ರೇಕ್ಷಕರನ್ನು ರಂಜಿಸಿದರು.
ಎಂ. ಬದಿಯುದ್ದೀನ್ ಅಹ್ಮದ್ ನವೀದ್ ಅವರು ಆಕರ್ಷಕವಾಗಿ ಕಾರ್ಯಕ್ರಮ ನಿರೂಪಿಸಿ ಕವಿಗೋಷ್ಠಿಗೆ ಮೆರುಗು ತಂದರು. ಹಿರಿಯ ಪತ್ರಕರ್ತ ಸಾಧಿಕ್ ಅಲಿ, ಖಲೀಫಾ ಸಾಹೇಬ್ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಪಾರ ಸಂಖ್ಯೆಯ ಪ್ರೇಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕವಿಗಳ ಕವನ ವಾಚನವನ್ನು ಆಲಿಸಿದರು. ಸಮಾಜದ ಮುಖಂಡ ಅಬ್ದುಲ್ ಅಜೀಜ್ ಮಾನ್ವಿ ಕರ್, ಯುವ ನಾಯಕ ಸಿರಾಜ್ ಲಾಟಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 