ಹೂವಿನ ಹಡಗಲಿ

ಕವಿಗೋಷ್ಠಿ ಸಾಹಿತ್ಯದ ಶ್ರೀಮಂತಿಕೆಯ ಪ್ರತೀಕ

ಕವಿಗೋಷ್ಠಿ ಸಾಹಿತ್ಯದ ಶ್ರೀಮಂತಿಕೆಯ ಪ್ರತೀಕ

ಹೂವಿನಹಡಗಲಿ 19:  ಕವಿ ಸಮಯವಲ್ಲದ ಸಂದರ್ಭದಲ್ಲಿಯೂ ಕವಿಗೋಷ್ಠಿ ನಡೆಯುತ್ತಿರುವುದು ಸಾಹಿತ್ಯದ ಶ್ರೀಮಂತಿಕೆಯ ಪ್ರತೀಕವಾಗಿದೆ ಎಂದು ವಿಶ್ರಾಂತ ಪ್ರಾಚಾರ್ಯ ಫ್ರೊ.ಶಾಂತಮೂರ್ತಿ  ಬಿ ಕುಲಕರ್ಣಿ ಹೇಳಿದರು.ಪಟ್ಟಣದ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ  ಭಾಷಾ  ಸಂಘದ  ವತಿಯಿಂದ ಆಯೋಜಿಸಿದ್ದ ಕೃತಿಕಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕವನ-ಕವಿತೆಗಳ  ಭಾವನೆಗಳ ರೂಪದಲ್ಲಿ ಹೊರಹೊಮ್ಮುತ್ತದೆ ಎಂದರು. ಪತ್ರಕರ್ತರ ಸಂಘದ ಅಧ್ಯಕ್ಷ ಎಂ ಪಿ.ಎಂ. ಶಿವಪ್ರಕಾಶ್  ಮಾತನಾಡಿ,“ಕವಿಗಳು ಮರಣ ಹೊಂದಿದರೂ ಕಾವ್ಯಗಳು ಎಂದಿಗೂ ಸಾಯುವುದಿಲ್ಲ" ಕಾವ್ಯವೆಂಬುದು ಮಾನವ ಜೀವನದ ಭಾವನೆಗಳಿಗೆ ಕನ್ನಡಿ ಹಿಡಿಯುವ ಮಹತ್ವದ ಸಾಹಿತ್ಯ ಪ್ರಕಾರವಾಗಿದೆ.

ಸಮಾಜದ ನೋವು, ನಲಿವು, ಸಂಸ್ಕೃತಿ, ಪ್ರೀತಿ, ಮಾನವೀಯತೆ ಹಾಗೂ ಬದುಕಿನ ಮೌಲ್ಯಗಳನ್ನು ಕವಿತೆಗಳು ತಲೆ ತಲೆಮಾರುಗಳಿಂದ ಜೀವಂತವಾಗಿರಿಸುತ್ತಾ ಬಂದಿವೆ ಎಂದರು. ಪ್ರಾಸ್ತಾವಿಕವಾಗಿ ಸಹಾಯಕ ಪ್ರಾಧ್ಯಾಪಕಡಾ. ಅಶೋಕ ಈಡಿಗರ್ ಮಾತನಾಡಿದರು. ಕಸಾಪ  ನಿಕಟಪೂರ್ವ ಅಧ್ಯಕ್ಷಡಾ.ಎಂ.ಪಿ.ಎಂ. ಮಂಜುನಾಥಸ್ವಾಮಿ ಮತ್ತು ಸಹಾಯಕ ಪ್ರಾಧ್ಯಾಪಕ ಎ.ಕೆ. ನಾಗರಾಜ್ ಇದ್ದರು.  ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದಡಾ.ಹೆಚ್‌.ಪಿ. ರಮೇಶ ವಹಿಸಿದ್ದರು.ಕವಿಗಳು ಕವಿತೆ ವಾಚಿಸಿದರು.ಶಿಕ್ಷಕ  ವಿದ್ಯಾರ್ಥಿಗಳಾದ ಕಡ್ಲಬಾಳ ಅನಿತ, ಶಿವಲೀಲಾ ಬಡಿಗೇರ್, ಎಸ್‌.ಚೈತ್ರ ಸಂಗಡಿಗರು,ಎಸ್‌.ಪಿ.ಅರ​‍್ಿತ  ಮತ್ತು ರಕ್ಷಿತಾ ತಂಬೂರಿ ಕಾರ್ಯಕ್ರಮವನ್ನು ನಿರ್ವಹಿಸಿದರು 


ಸುದ್ದಿ ಓದಿ