ಕಾರಟಗಿ ಕಾನಿಪ ಸಂಘದ ಪದಾಧಿಕಾರಿಗಳ ಸಭೆ

ಪತ್ರಿಕಾ ಭವನ ನವೀಕರಣದ ಖರ್ಚುಗಳ ಮಾಹಿತಿ

ಕಾರಟಗಿ 14: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರಟಗಿ ತಾಲೂಕು ಘಟಕದ ಪದಾಧಿಕಾರ ಸಭೆ ಬುಧವಾರ ನಡೆಯಿತು. ಸಭೆಯಲ್ಲಿ ಪಟ್ಟಣದಲ್ಲಿ ನವೀಕರಿಸಲಾಗಿರುವ ಪತ್ರಿಕ ಭವನದ ಖರ್ಚುಗಳ ಲೆಕ್ಕ ಪತ್ರದ ವಿವರ ಜಿಲ್ಲಾ ಘಟಕಕ್ಕೆ ಸಲ್ಲಿಸಲಾಯಿತು ಮತ್ತು ಪತ್ರಿಕಾ ಭವನದ ಇನ್ನಿತರ ಕಾಮಗಾರಿ ಮತ್ತು ಪಿಠೋಪಕರಣಗಳಿಗಾಗಿ ಸಂಸದ ಸಂಗಣ್ಣ ಕರಡಿ ಅವರು ರೂ.5 ಲಕ್ಷ ಅನುದಾನ ಮಂಜೂರು ಮಾಡಿರುವುದಕ್ಕೆ ಸಂಸದರಿಗೆ ಸರ್ವ ಸದಸ್ಯರು ಅಭಿನಂದಿಸಿ ಶೀಘ್ರ ಸಂಸದರ ಅನುದಾನದಲ್ಲಿ ಕಾರ್ಯ ಕೈಗೊಳ್ಳಲು ನಿರ್ಣಯಿಸಲಾಯಿತು.   

ಕಾರ್ಯನಿರತ ಪತ್ರಕರ್ತರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಗುಡ್ಲಾನೂರು ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಪಟ್ಟಣದ ನಿಯೋಜಿತ ಪತ್ರಿಕಾ ಭವನದಲ್ಲಿ ಸಭೆ ನಡೆಸಲಾಯಿತು. ಪತ್ರಿಕಾ ಭವನದ ಮೂಲ ಸೌಕರ್ಯಗಳಿಗಾಗಿ ಸಂಸದರು ಅನುದಾನ ಮಂಜೂರು ಮಾಡಿರುವುದಕ್ಕೆ ಸರ್ವ ಸದಸ್ಯರು ಸಂತಸ ವ್ಯಕ್ತಪಡಿಸಿ ಸಂಸದರನ್ನು ಅಭಿನಂದಿಸಿದರು ಮತ್ತು ಈ ಹಿಂದೆ ಮಾಜಿ ಶಾಸಕ ಬಸವರಾಜ ದಢೇಸೂಗೂರು ನೀಡಿದ್ದ ಅನುದಾನದ ಬಳಕೆ ಕುರಿತು ಲೆಕ್ಕಾಪತ್ರವನ್ನು ಜಿಲ್ಲಾ ಪದಾಧಿಕಾರಿಗಳಿಗೆ ನೀಡಲಾಯಿತು. ಮತ್ತು ಸಂಸದರ ಅನುದಾನದಲ್ಲಿ ಅವಶ್ಯವಿರುವ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪದಾಧಿಕಾರಿಗಳು ತಾಲೂಕು ಘಟಕದ ಪದಾಧಿಕಾರಿಗಳಿಗೆ ತಿಳಿಸಿದರು. ಸಂಸದರ ಅನುದಾನದಲ್ಲಿ ಪತ್ರಿಕಾ ಭವನಕ್ಕೆ ಅವಶ್ಯವಿರುವ ಖರ್ಚುಗಳು, ಪಿಠೋಪಕರಗಳು ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಕೈಗೊಂಡು ಶೀಘ್ರ ಪೂರ್ಣಗೊಳಿಸಬೇಕು ಮತ್ತು ಪತ್ರಿಕಾ ಭವನದಲ್ಲಿ ವಿವಿಧ ಚಟುವಟಿಕೆ ನಡೆಸುವಂತೆ ಮತ್ತು ಸಾರ್ವಜನಿಕರ ಸುದ್ದಿಗೋಷ್ಠಿ ಆಯೋಜಿಸಲು ಅನುಕೂಲ ಕಲ್ಪಿಸಿಕೊಡುವ ಕುರಿತು ಚರ್ಚಿಸಲಾಯಿತು.    

 ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ಸಾಧಿಕ್ ಅಲಿ, ಜಿಲ್ಲಾ ಪ್ರ.ಕಾರ್ಯದರ್ಶಿ ನಾಗರಾಜ, ಜಿಲ್ಲಾ ಕಾರ್ಯದರ್ಶಿ ಎಚ್‌.ಚಾಂದಸಿಂಗ್ ರಜಪೂತ್,  

ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ವೃಷುಬೇಂದ್ರಯ್ಯ ಸ್ವಾಮಿ ನವಲಿ ಹಿರೇಮಠ, ದಿಗಂಬರ ಎನ್ ಕುರ್ಡೆಕರ್, ತಾಲೂಕು ಅಧ್ಯಕ್ಷ ಸಿದ್ದನಗೌಡ ಹೊಸಮನಿ, ಕಾರ್ಯದರ್ಶಿ ಕುಮಾರ ಹಾಸನ ಸೇರಿದಂತೆ ಟಿ.ಉಮೇಶ್ ಮರ್ಲಾನಹಳ್ಳಿ, ಶರಣಪ್ಪ ಕೂಟ್ಯಾಳ, ರಮೇಶತೊಂಡಿಹಾಳ್, ರಮೇಶ ಸಂಗಟಿ, ನಾಗರಾಜ ಹಾಲಸಮುದ್ರ ಮತ್ತಿತರು ಇದ್ದರು.