ಫೇ. 17 ರಂದು ಬೀದಿ ಬದಿಯ ವ್ಯಾಪಾರಿಗಳ ಬೃಹತ್ ಸಮಾವೇಶ
A huge gathering of street vendors
ಲೋಕದರ್ಶನ ವರದಿ
ಜಮಖಂಡಿ 15: ನಗರದಲ್ಲಿನ ಬೀದಿ ಬದಿಯ ವ್ಯಾಪಾರಿಗಳ ಸಂಘಟನೆಯಿಂದ ಬೃಹತ್ ಸಮಾವೇಶ ಫೇ. 18 ರಂದು ಮುಂಜಾನೆ 11 ಗಂಟೆಗೆ ಬಸವ ಭವನದಲ್ಲಿ ಜರುಗಿಲಿದೆ ಎಂದು ರಾಜ್ಯ ಸಂಚಾಲಕ ಡಾ. ಶಶಾಂಕ ವಳವಾಡೆ ತಿಳಿಸಿದರು.
ನಗರದ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೇ. 17 ರಂದು ಬೃಹತ್ ಬೈಕ್ ರಾ್ಯಲಿ ಟೀಪು ಸುಲ್ತಾನ್ ಸರ್ಕಲದಿಂದ ಮಾರ್ಕೆಟ್ ಮಾರ್ಗವಾಗಿ ಎ.ಜಿ. ದೇಸಾಯಿ ಸರ್ಕಲ್‌ದಿಂದ ಬಸವ ಭವನ ತಲುಪುವುದು ಫೇ. 18 ರಂದು ಮುಂಜಾನೆ 11 ಗಂಟೆಗೆ ಬೀದಿ ಬದಿಯ ವ್ಯಾಪಾರಿಗಳ ಬೃಹತ್ ಸಮಾವೇಶ ಜರುಗತ್ತದೆ. ಸಂಸ್ಥಾಪಕರಾದ ಅರವಿಂದಸಿಂಗ್ ಜಿ, ರಾಜ್ಯಾಧ್ಯಕ್ಷರಾದ ಡಾ, ಸಿ.ಇ.ರಂಗಸ್ವಾಮಿಯವರು, ಕಾವ್ಯಾಶ್ರೀ ಕೆ.ಎಸ್. ಅನಿಸಾ ಫಾತಿಮಾ ಶೇಖ ಸಲ್ಮಾ, ಗುರು ಸಾವಂತ ಆಗಮಿಸಲಿದ್ದು. ರಾಜಕಾರಣಿಗಳು ಹಾಗೂ ರಾಜಕೀಯ ಧುರೀಣರು ಸಹ ಆಗಮಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷ ನಬೀಸಾಬ ಮುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಮನಪ್ಪ ಘಾಟಗೆ, ಜಿಲ್ಲಾ ಸಹ ಕಾರ್ಯದರ್ಶಿ ಯಲ್ಲಪ್ಪ ಬಜಂತ್ರಿ, ಅಸ್ಲಂ ಗಲಗಲಿ, ಮೈಬೂಬ ತಿಕೋಟಾ ಇದ್ದರು. ಬೀದಿ ಬದಿಯ ವ್ಯಾಪಾರಿಗಳ ಸಂಘಟನೆಯ ಬೃಹತ್ ಸಮಾವೇಶದ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿದರು.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 