ದಿ,23ರಂದು ನೇಹಾ ಹಿರೇಮಠ ಯುವತಿಗೆ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮ

ಮುದ್ದೇಬಿಹಾಳ 22: ಹುಬ್ಬಳ್ಳಿಯ ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೇಸ್ ಕಾರ್ಫೋರೇಟರ್ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಎನ್ನುವ ಯುವತಿಯನ್ನು  ಫಯಾಜ ಎನ್ನುವ ಆರೋಪಿ  ಚಾಕುವಿನಿಂದ ತಿವಿದು ಬರ್ಬರವಾಗಿ  ಕೊಲೆ ಮಾಡಿರುವ ಘಟನೆ ಹಿನ್ನೇಲೆಯಲ್ಲಿ ದಿ,23 ಮಂಗಳವಾರದಂದು ಮುದ್ದೇಬಿಹಾಳ ಪಟ್ಟಣದ ಎಲ್ಲ ವ್ಯಾಪಾರಸ್ಥರು, ನಾಗರೀಕ ಬಂಧುಗಳು  ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬೆಳಿಗ್ಗೆಯಿಂದ ಮದ್ಯಾಹ್ನ 12 ಗಂಟೆಯವರೆಗೂ ಅರ್ಧ ದಿನ ಸ್ವಯಂಪ್ರೇರಿತವಾಗಿ ಬಂದ ಮಾಡಿ ವಿವಿಧ ಸಂಘ ಸಂಸ್ಥೆಗಳ, ಸಂಘಟನೆಗಳ ನೇತೃತ್ವದಲ್ಲಿ ರಾಘವೇಂದ್ರ ಮಂಗಲಭವನದಲ್ಲಿ ನೇಹಾ ಹಿರೇಮಠ ಯುವತಿಗೆ ಭಾವಪೂರ್ಣ ಶೃದ್ದಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಹೇಳಿದರು. 

ಪಟ್ಟಣದ ಹಳೇ ತರಕಾರಿ ಮಾರುಕಟ್ಟೆಯಲ್ಲಿರುವ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಮಂಗಳವಾರ ಪಟ್ಟಣದ ವಿವಿಧ ವ್ಯಾಪಾರಸ್ಥರ ಮುಖಂಡರ, ರಾಜಕೀಯ ಗಣ್ಯರ, ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಯುವತಿ ನೇಹಾ ಕೊಲೆಯಾಗಿರುವುದು ಇಡಿ ಮನುಕುಲವೇ ತಲೆ ತಗ್ಗಿಸುವಂತಾಗಿದೆ ಮಾತ್ರವಲ್ಲದೇ ಎಲ್ಲ ಹಿಂದೂಗಳು ಖಂಡಿಸುತ್ತವೇ. ಐಎಸ್‌ಐಎಸ್ ಎನ್ನುವ ಭಯೋತ್ಪಾದಕ ಸಂಘಟನೆಯೊಂದು ಇಂತಹ ಹಲವಾರು ಹಿಂದೂಗಳನ್ನು ಕೊಲೆ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟು ದೇಶದ ಹಾಗೂ ರಾಜ್ಯದ ಅಮಾಯಕ ಜನರಿಗೆ ಭಯ ಹುಟ್ಟಿಸುವಂತೆ ಮಾಡುತ್ತಿತ್ತು ಅದೇ ಮಾದರಿಯಲ್ಲಿ ಸಧ್ಯ ಹುಬ್ಬಳಿಯ ಹಿಂದೂ ಯುವತಿ ನೇಹಾ ಹಿರೇಮಠ ಕೊಲೆ  ನಡೆದಿರುವುದು ನೋವಿನ ಸಂಗತಿಯಾಗಿದೆ.ಈ ಘಟನೆಯನ್ನು ಖಂಡಿಸಿ ಎಬಿವಿಪಿ ಸೇರಿದಂತೆ ವಿವಿಧ ಸಂಘಟನೆಗಳು ರಾಜ್ಯದಾದ್ಯಂತ ಹೋರಾಟ ನಡೆಸಿ ಆರೋಪಿ ಫಯಾಜನಿಗೆ ಗಲ್ಲು ಶಿಕ್ಷಗೊಳಪಡಿಸಬೇಕು ಎಂದು ನ್ಯಾಯಕ್ಕಾಗಿ ಹೋರಾಟಗಳು ನಡೆಯುತ್ತಿದ್ದರೂ ಸಧ್ಯ ರಾಜ್ಯ ಸರಕಾರದ ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳು ನೇಹಾಳ ಕೊಲೆ ಇದೋಂದು ಲವ್ ಫೆಲಿವೇರದಿಂದ ಈ ಘಟನೆ ನಡೆದಿದೆ ಅದು ವ್ಯಯಕ್ತಿಕ ವಿಚಾರ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದು ಅವರ ಕುಟುಂಭಕ್ಕೆ ಹಾಗೂ ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದೆ.   

ಸಧ್ಯ ಆರೋಪಿ ಫಯಾಜ ನೇಹಾಳ ಕುತ್ತಿಗೆ ಹಾಗೂ ಹೃದಯಭಾಗ ಸೇರಿದಂತೆ ವಿವಿಧ ಭಾಗಗಳಿಗೆ 14 ಬಾರಿ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದು ವಿಧಿವಿಜ್ಞಾನ ಪ್ರಯೋಗಾಲಯದ ತನಿಖೆಯು ಸಾಬೀತು ಪಡಿಸಿವೆ ಎಂದು ಮಾದ್ಯಮಗಳಿಂದ ಗೊತ್ತಾಗಿದೆ. ಈ  ಪ್ರಕರಣ ಇದೋಂದು ಲವ್ ಜಿಹಾದ್ ಸಂಘಟನೆಗಳ ಹಾಗೂ ಪಾಕಿಸ್ಥಾನ ಭಯೋತ್ಪಾದಕರ ನಂಟು ವ್ಯಾಪಕವಾಗಿ ಇಂತಹ ಕೃತ್ಯಗಳನ್ನು ನಡೆಸುತ್ತಿರುವ ಘಟನೆಗಳು ಮಾತ್ರ ರಾಜ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ.  ಈ ಕೊಲೆ ಘಟನೆಯನ್ನು ರಾಜ್ಯ ಸರಕಾರ ಗಂಭಿರವಾಗಿ ಪರಿಗಣಿಸಿ ಕುಲಕಂಕುಶವಾಗಿ ತನಿಖೆ ನಡೆಸಿ ಆರೋಪಿ ಫಯಾಜನಿಗೆ ಗಲ್ಲು ಶಿಕ್ಷೆಗೊಳಪಡಿಸಬೇಕು ಎಂದು ಕೊಲೆಗಿಡಾದ ನೇಹಾಳ ತಂದೆ ನಿರಂಜನ ಹಿರೇಮಠ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜನರು  ಸರಕಾರಕ್ಕೆ ಒತ್ತಾಯಿಸಿದ್ದಾರೆ. 

ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ ಪ್ರಾರಂಭದಲ್ಲಿ ಬೆಳಗಾಂವಿಯಲ್ಲಿ ಜೈನಮುನಿಗಳ ಹತ್ಯೆಯಾಗಿತ್ತು ಬಳಿಕ ಬೆಂಗಳೂರಿನ ರಾಮೇಶ್ವರ ಹೋಟೆಲ್ ಒಂದರಲ್ಲಿ ಬಾಂಬ್ ಸ್ಪೋಟಗೊಳಿಸಿದ ಆರೋಪಿಯನ್ನು ಕೇಂದ್ರದ ತನಿಖಾ ಏಜಿನ್ಸಿಯು ಬಂಧಿಸಿ ಹೆಡಮುರಿಕಟ್ಟಲಾಗಿದೆ. ಅದರಂತೆ ಮಂಗಳೂರನಲ್ಲಾದ ಕುಕ್ಕರ ಬ್ಲಾಸ್ಟ್‌ ಪ್ರಕರಣಕ್ಕೂ  ಪಾಕಿಸ್ಥಾನದ ಕರ್ನಲ್ ನೊಂದಿಗೆ ನಂಟು ಇತ್ತು ಎಂಬುದನ್ನು ಎಲ್ಲ ಮಾಧ್ಯಮಗಳು ಬಿತ್ತರಿಸಿವೆ. 

ಅದರಂತೆ  ರಾಜ್ಯದ ಆಡಳಿತ ಸರಕಾರ ಯಾವೋಬ್ಬ ಶಾಸಕರು ನೇಹಾಳ ಕೊಲೆ ಘಟನೆ ಖಂಡಿಸಿ ಹೇಳಿಕೆ ನೀಡುವುದಾಗಲಿ ಅಥವಾ ಸರಕಾರಕ್ಕೆ ನ್ಯಾಯ ನೀಡುವ ಭರವಸೆಯಾಗಲಿ ನೀಡದಿರುವುದು ದುರ್ಧೈವದ ಸಂಗತಿಯಾಗಿದೆ. ಆದರೇ ಸರಕಾರ ಈ ಘಟನೆಯನ್ನು ಕೂಡಲೇ ತನಿಖೆಗೊಳಪಡಿಸಿ ಸತ್ಯವರದಿ ಪಡೆದು ಕೊಲೆ ಮಾಡಿದ ಆರೋಪಿ ಫಯಾಜನಿಗೆ ಉಗ್ರ ಹಾಗೂ ಕ್ರೂರ ಶಿಕ್ಷೆ ವಿಧಿಸುವ ಮೂಲಕ ನೇಹಾಳ ಆತ್ಮಕ್ಕೆ ಮತ್ತು ಅವಳ ಕುಟುಂಭಕ್ಕೆ ನ್ಯಾಯವನ್ನು ಒದಗಿಸಬೇಕು ಒಂದುವೇಳೆ ರಾಜ್ಯಸರಕಾರದಿಂದ ತನಿಖೆ ಮಾಡಲು ಸಾಧ್ಯವಾಗಲಿಲ್ಲವೆಂದರೇ ಸಂಪೂರ್ಣ ತನಿಖೆ ಜವಾಬ್ದಾರಿಯನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಬಿಜಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಜಿಯವರು ಸರಕಾರಕ್ಕೆ ನಾನು ಒತ್ತಾಯಿಸಿದ್ದಾರೆ.  ಈ ಹಿನ್ನೇಲೆಯಲ್ಲಿ ಸದ್ಯ ರಾಜ್ಯದಲ್ಲಿ ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂಬ ಉದ್ದೇಶದಿಂದ ಲವ್ ಜಿಹಾದ ಎಂದರೇನು ಇದರ ಹಿಂದೆ ಯಾರಾ​‍್ಯರು ಇದ್ದಾರೆ ಹಿಂದುಳಗಳ ರಕ್ಷಣೆ ಹೇಗೆ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದರು. 

ಈ ವೇಳೆ ಕಪಡಾ ವ್ಯಾಪಾರಸ್ಥರ ಸಂಘದ ಮುಖಂಡ ವಾಸುದೇವ ಶಾಸ್ತ್ರೀ ಅವರು ಮಾತನಾಡಿ ನೇಹಾಳ ಕೊಲೆ ಪ್ರಕರಣವೂ ಇಡೀ ರಾಜ್ಯದ ಜನರ ಮನಸ್ಸಿಗೆ ನೋವನ್ನುಂಟುಮಾಡಿದೆ ಮಾತ್ರವಲ್ಲದೆ ಎಲ್ಲ ವ್ಯಾಪಾರಸ್ತರು ಖಂಡಿಸುತ್ತೇವೆ ಅವಳೊಬ್ಬ ಅಮಾಯಕ ಯುವತಿ ಅವಳ ಆತ್ಮಕ್ಕೆ ಮತ್ತು ಅವಳ ಕುಟುಂಭಕ್ಕೆ ನ್ಯಾಯ ಕೊಡಿಸುವುದು ಎಲ್ಲರ ಕರ್ತವ್ಯ ಕಾರಣ ಪಟ್ಟಣದ ಎಲ್ಲ ವ್ಯಾಪಾರಸ್ಥರು ನಮ್ಮೇಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದು ಮಾಡಿ ಶೃದ್ಧಾಂಜಲಿ ಸಭೆಯಲ್ಲಿ ಭಾಗಿಯಾಗೋಣ ಎಂದರು. 

ಈ ವೇಳೆ ಗಣ್ಯ ಉದ್ಯಮಿಗಳಾದ ಶರಣು ದೇಗಿನಾಳ, ಬಾಬು ಗೋಗಿ, ವಿಕ್ರಮ ಓಸ್ವಾಲ್, ನಿಂಗಣ್ಣ ಚೆಟ್ಟೆರ, ದಲಿತ ಮುಖಂಡ ಹರೀಷ ನಾಟಿಕಾರ, ಗಣ್ಯರಾದ ಡಾ, ವಿರೇಶ ಪಾಟೀಲ,  ವಿರೇಶ ಕಲ್ಯಾಣಮಠ, ಸಿದ್ದರಾಜ ಹೊಳಿ,  ಸಿ ಎಲ್ ಬಿರಾದಾರ, ಅಶೋಕ ಚಿನಿವಾರ, ರಾಜು ಬಳ್ಳೋಳಿ, ಡಿ ಎಸ್ ಅಂಗಡಿ, ರಾಜಶೇಖರ ಹೊಳಿ, ಪ್ರೀತಿ ಕಂಬಾರ, ಸಂಗಮ್ಮ ದೇವರಳ್ಳಿ, ಕಾವೇರಿ ಕಂಬಾರ, ಗೌರಮ್ಮ ಹುನಗುಂದ, ಎಂ ಎ ಹಡಲಗೇರಿ, ಗಿರಿಶಗೌಡ ಪಾಟೀಲ, ರವೀಂದ್ರ ಬಿರಾದಾರ, ಶ್ರೀಶೈಲ ದೊಡಮನಿ, ಪ್ರಭುಗೌಡ ಪಾಟೀಲ, ಸಂತೋಷ ಪಾಟೀಲ, ಬಸಲಿಂಗಪ್ಪ ರಕ್ಕಸಗಿ, ಮಲ್ಲನಗೌಡ ಬಿರಾದಾರ, ಶಿವಯೋಗೆಪ್ಪ ರಾಂಪೂರ, ಪರುಶುರಾಮ ನಾಲತವಾಡ, ಲಕ್ಷ್ಮೀಚಂದ ಓಸ್ವಾಲ್,  ಶಶಿ ನಾಗಠಾಣ,ಅಶೋಕ ರಾಠೋಡ, ಪುನಿತ ಹಿಪ್ಪರಗಿ, ಸೇರಿದಂತೆ ಕಿರಾಣ ಮರ್ಚಂಟ ಅಸೋಶಿಯೇಷನ್, ಸ್ಟೇಷನರಿ ವ್ಯಾಪಾರಸ್ಥರ, ಸಂಘ, ಬುಕ್ ಸ್ಟಾಲ್ ಅಸೋಸಿಯೇಷನ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಮುಕಂಡರು ಕಾರ್ಯಕರ್ತರು ಇದ್ದರು.