ಮನೆಯೊಳಗೆ ನುಗ್ಗಿದ್ದ ಕೊಳಕುಮಂಡಲ ಹಾವು ಸುರಕ್ಷಿತ ರಕ್ಷಣೆ

ಮನೆಯೊಳಗೆ ನುಗ್ಗಿದ್ದ ಕೊಳಕುಮಂಡಲ ಹಾವು ಸುರಕ್ಷಿತ ರಕ್ಷಣೆ  A Russell's viper that had entered the house was safely rescued

ಲೋಕದರ್ಶನ ವರದಿ  

ಮುಂಡಗೋಡ 01 : ತಾಲೂಕಿನ ಪಾಳಾ ಗ್ರಾಮದ ಸಂತೋಷ ಕಾಕಟಿಕರ್ ಅವರ ಮನೆಯಲ್ಲಿ ದೊಡ್ಡ ಗಾತ್ರದ ಕೊಳಕುಮಂಡಲ   ಹಾವು ಕಾಣಿಸಿಕೊಂಡು ಮನೆಯವರು ಆತಂಕಕ್ಕೊಳಗಾದ ಘಟನೆ ಶನಿವಾರ ನಡೆದಿದೆ. ತಕ್ಷಣವೇ   ಮುತ್ತುರಾಜ ಹಳ್ಳಿ, ಗಸ್ತು ಅರಣ್ಯ ಪಾಲಕರಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಆಗಮಿಸಿ ಹಾವನ್ನು ಸುರಕ್ಷಿತವಾಗಿ ರಕ್ಷಿಸಿ, ಅದರ ಸೂಕ್ತ ನೈಸರ್ಗಿಕ ಆವಾಸ ಸ್ಥಾನದಲ್ಲಿ ಬಿಟ್ಟಿದ್ದಾರೆ.  ಇದೇ ವೇಳೆ ಮನೆಯವರಿಗೆ ಹಾವುಗಳ ಬಗ್ಗೆ ಜಾಗೃತಿ ಮೂಡಿಸಿ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ.