ಲೋಕದರ್ಶನ ವರದಿ
ಕೊಪ್ಪಳ 18: ಅಕ್ಟೋಬರ್ 6ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ 10ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ.
ಸಮ್ಮೇಳನದ ಅಧ್ಯಕ್ಷರನ್ನಾಗಿ ಚುಟುಕು ಕವಿ, ಕಲಾವಿದ ಹಾಗೂ ಕುಕನೂರಿನ ರಮಾಬಾಯಿ ಅಂಬೇಡ್ಕರ್ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕರಾದ ಶಾಂತವೀರ ಬನ್ನಿಕೊಪ್ಪ ಆಯ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಕುಕನೂರು ತಾಲೂಕಿನ ಬನ್ನಿಕೊಪ್ಪದವರಾದ ಶಾಂತವೀರ ಬನ್ನಿಕೊಪ್ಪ ಅವರು 'ತುಂತುರು' ಕವನ ಸಂಕಲನ ಹೊರತರುವುದರ ಮೂಲಕ ಸಾಹಿತ್ಯ ಕ್ಷೇತ್ರ ಪ್ರವೇಶ ಮಾಡಿದರು. 'ಆಸರೆ' ಹನಿಗವನ ಸಂಕಲನ, 'ಕಲಾಸಿರಿ ಕವನಗಳ ಗರಿ' ಕವನ ಸಂಕಲನವನ್ನು ಹೊರತಂದಿದ್ದಾರೆ. ತಾವೇ ಸ್ವತಃ 'ಗವಿಗಂಗಾ ಪ್ರಕಾಶನ' ವನ್ನು ಹುಟ್ಟು ಹಾಕಿ ಅದರ ಮೂಲಕ ತಮ್ಮ ವಿದ್ಯಾಥರ್ಿಗಳು ಬರೆದ 'ಚಿಲಿಪಿಲಿ', 'ಮೌನ ಗೊಂಬೆಯ ಮಾತು', 'ಸಿಂಚನ' ಹನಿಗವನ ಸಂಕಲನಗಳನ್ನು ಮುದ್ರಿಸಿಕೊಟ್ಟಿದ್ದಾರೆ. ಹಾಗೆಯೇ ಇದೇ ಪ್ರಕಾಶನದಿಂದ 'ಹೊನಲಸಿರಿ', 'ಮೊದಲ ಹೆಜ್ಜೆ', 'ಸಂಚಲನ' ಹೊರತಂದಿದ್ದಾರೆ. ಇವರ ಸೇವೆಯನ್ನು ಗಮನಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯು 'ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ' ನೀಡಿ ಗೌರವಿಸಿದೆ.
ಸಮ್ಮೇಳನದಲ್ಲಿ ಭಾಗವಹಿಸುವ ಕವಿಗಳು ಸೆಪ್ಟಂಬರ್ 25ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ವಿಳಾಸ: ಹನುಮಂತಪ್ಪ ಅಂಡಗಿ ಚಿಲವಾಡಗಿ, ಅಧ್ಯಕ್ಷರು, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಅಂಚೆ ಪೆಟ್ಟಿಗೆ ಸಂಖ್ಯೆ-30, ಕೊಪ್ಪಳ-583231. ಸನಿಹವಾಣಿ: 9008944290.