ಗೆಳೆಯರ ಬಳಗದ 8ನೇ ವಾರ್ಷಿಕೊತ್ಸವ

ಲೋಕದರ್ಶನ ವರದಿ

ಬೈಲಹೊಂಗಲ 03: ಈಗಿನ ಸಂಘಗಳು ಮೋಜು ಮಸ್ತಿ ಮಾಡದೇ ಗ್ರಾಮದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂದು ಶಾಖಾ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಹೇಳಿದರು.

ತಾಲೂಕಿನ ಚಿವಟಗುಂಡಿ ಗೆಳೆಯರ  ಬಳಗದ  8ನೇ  ವಾರ್ಷಿಕೊತ್ಸವದ ಅಂಗವಾಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ ಸೋಮವಾರ ಸ್ವಚ್ಛತಾ ಕಾರ್ಯಕ್ರಮ, ಉಚಿತ  ಆರೋಗ್ಯ  ತಪಾಸಣೆ  ಶಿಬಿರ ಉದ್ಘಾಟಿಸಿ ಅವರು ಮಾತನಾಡಿ, ಸತತ 8 ವರ್ಷಗಳಿಂದ ಗೆಳೆಯರ ಬಳಗವು ಹಲವಾರು ಜನಪರ    ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು  ನಮ್ಮ ನಾಡಿನಲ್ಲಿ ತಮ್ಮದೇ ಆದ ಹೆಸರುಗಳಿಸಿದ್ದಾರೆ ಎಂದರು.

  ಚಿತ್ರನಟ  ಶಿವರಂಜನ  ಬೊಳನ್ನವರ ಮಾತನಾಡಿ, ಇಂದಿನ ಯುಗದಲ್ಲಿ  ಸಂಘ ಸಸ್ಥೆಗಳು ಈ  ಗೆಳೆಯರ  ಬಳಗದಂತೆ ಒಳ್ಳೆಯ  ಜನ  ಪರ  ಕಾರ್ಯಗಳನ್ನು  ಮಾಡ್ಬೇಕು. ಯೋಧ ವೀರು ದೊಡವೀರಪ್ಪನವರ  ರಂತಹ ಅನೇಕ  ಗೆಳೆಯರನ್ನು  ಒಳಗೊಂಡ  ಈ  ಗೆಳೆಯರ  ಬಳಗದ  ಕಾರ್ಯ  ಶ್ಲಾಘನೀಯ  ಎಂದರು. ತಾಲೂಕಾ  ವ್ಯದ್ಯಾಧಿಕಾರಿ ಡಾ. ಎಸ್.ಎಸ್.ಸಿದ್ಧಣ್ಣವರ  ಮಾತನಾಡಿ,  ಈ  ಗೆಳೆಯರ  ಬಳಗದಿಂದ ಅನೇಕ  ಆರೋಗ್ಯ ಪರ  ಕಾರ್ಯಕ್ರಮ ಹಮ್ಮಿ ಕೊಂಡು ಗ್ರಾಮದ   ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದರೆ ಎಂದರು.

300ಕ್ಕೂ  ಹೆಚ್ಚು ಮಕ್ಕಳಿಗೆ ಡಾ. ಶರಣ  ಕುಮಾರ  ಅಂಗಡಿ, ಡಾ. ತೌಶಿಪ್ ಸಂಗೊಳ್ಳಿ, ಡಾ. ಮಿಷಭಾ ಸಂಗೊಳ್ಳಿ ಇವರಿಂದ  ಉಚಿತ  ಆರೋಗ್ಯ  ತಪಾಸಣೆ  ಮಾಡಿಸಲಾಯಿತು.

ಊರಿನ ವಿದಾರ್ಥಿಗಳನ್ನು ಓದಿನಲ್ಲಿ  ಪ್ರೋತ್ಸಾಹಿಸಲು  ಉತ್ತಮ  ಅಂಕ ಗಳಿಸಿದ  ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.  ಜಿ.ಯು.ಪಾಟೀಲ  ಓ.ಓ.ಮಲ್ಲೂರ,  ಜಿ.ಕ.  ಪರ್ವತಗೌಡ್ರ,  ಕೆ.ಕೆ. ಚಂದನ್ನವರ, ಗ್ರಾಮ ಪಂಚಾಯತ  ಅಧ್ಯಕ್ಷೆ ಮಾಲಾತಾಯಿ  ಮಲ್ಲೂರ, ಉಪಾಧ್ಯಕ್ಷ ಗಿರೀಶ  ಸಂಗನಗೌಡ್ರ, ಲಲಿತಾ  ಕೆಂಚನಗೌಡ್ರ, ಗೆಳೆಯರ  ಬಳಗದ  ಗೌರವಾಧ್ಯಕ್ಷ ವೀರು ದೋಡವೀರಪ್ಪನ್ನವರ, ಶಿವಾನಂದ  ಕೆಂಚನಗೌಡ್ರ, ಡಾ  ಬಸವರಾಜ  ದೋಡವೀರಪ್ಪನ್ನವರ,  ಗುರು ಮಲ್ಲೂರ, ವಿಶಾಲ  ಬೊಗುರ್,  ಪಾಲ್ಗೊಡಿದ್ದರು. ಮಹಾದೇವಿ ಕಿತ್ತೂರ   ನಿರೂಪಿಸಿ, ವಂದಿಸಿದರು.