ಶೇಡಬಾಳ ಅರ್ಬನ್ ಬ್ಯಾಂಕಗೆ ಸುಮಾರು 78 ಲಕ್ಷ ಲಾಭ

ಶೇಡಬಾಳ 28 ಪಟ್ಟಣದ ಶೇಡಬಾಳ ಅರ್ಬನ್ ಕೋ-ಆಪರೇಟಿವ್ಹ್‌ ಬ್ಯಾಂಕ ಪ್ರಸಕ್ತ ಸಾಲಿನಲ್ಲಿ 77 ಲಕ್ಷ 92 ಸಾವಿರ 503 ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಮ್ಯಾನೇಜಿಂಗ್ ಡಾಯರೆಕ್ಟರ್ ಎಚ್‌.ಬಿ.ನರಸಗೌಡರ ಹೇಳಿದರು.  

ಅವರು ರವಿವಾರ ದಿ. 27ರಂದು ಬ್ಯಾಂಕಿನ ಸಭಾಂಗಣದಲ್ಲಿ ಜರುಗಿದ 59ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.  

ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ 77 ಲಕ್ಷ 92 ಸಾವಿರ 503 ರೂ. ನಿವ್ವಳ ಲಾಭ ಗಳಿಸಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಸಂಘದ ಏಳಿಗೆಗಾಗಿ ಸದಸ್ಯರು ಸರಿಯಾದ ಸಮಯದಲ್ಲಿ ಸಾಲ ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಸಹಕರಿಸುತ್ತಿರುವುದು ಅಭಿನಂದನೆಯ. ಅವರ ಸಹಾಯ ಸಹಕಾರ, ಪ್ರೋತ್ಸಾಹ ಇದೇ ರೀತಿ ಇರಲಿ ಎಂದು ವಿನಂತಿಸಿಕೊಂಡರು.  

ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಡಾ. ವ್ಹಿ.ಜಿ.ಲೋಕುರ ವಹಿಸಿದ್ದರು.  

ಬ್ಯಾಂಕಿನ ಅಧ್ಯಕ್ಷ ಡಾ. ವಿಜಯಕುಮಾರ ಲೋಕುರ, ಆಡಳಿತ ಮಂಡಳಿ ಸದಸ್ಯರಾದ ಲಖಮಗೌಡ (ಭರತೇಶ) ಪಾಟೀಲ, ಭರತೇಶ ಪಾಟೀಲ, ರಾಜಗೌಡ ನಾಂದ್ರೆ, ಸುನಂದಾ ಯಂದಗೌಡರ, ಡಾ. ಬಾಪುಗೌಡ ಪಾಟೀಲ, ರಾಜೇಂದ್ರ ಪಾಟೀಲ, ಸವಿತಾ ಪಾಟೀಲ, ಲಕ್ಷ್ಮಣ ಕಾಂಬಳೆ, ಎಸ್‌. ಎ. ಮುಕುಂದ, ರಾಜು ಕಾತ್ರಾಳೆ, ವಿಜಯ ಶಿಂಧೆ ಸೇರಿದಂತೆ ಸದಸ್ಯರು, ಸಿಬ್ಬಂದಿವರ್ಗ, ಗ್ರಾಮಸ್ಥರು ಇದ್ದರು.  

ಎಚ್‌.ಬಿ. ನರಸಗೌಡರ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.