73ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ

ಸವಣೂರ : ತಾಲೂಕಿನ ಕಳಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 73ನೇ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮವನ್ನು ಸರಳವಾಗಿ  ಕರೊನಾ ನಿಯಮಗಳು ಅನುಸರಿಸಿ ಆಚರಣೆ ಮಾಡಲಾಗಿತು. ಮುಖ್ಯೋಪಾಧ್ಯಾಯರಾದ ಶಾರದಾ ಗಾಯಕವಾಡ  ಮಾತನಾಡಿ  ಮಾತನಾಡಿಸ್ವತಂತ್ರ ಭಾರತದ ಪಾಲಿನ ಮಹತ್ವದ ದಿನ. ಪ್ರತಿಯೊಬ್ಬ ಭಾರತೀಯರೂ ನೆನಪಿನಲ್ಲಿಟ್ಟುಕೊಳ್ಳುವ, ಭಾರತದ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದ ದಿನ ಇದು. ನಮ್ಮ ಸಂವಿಧಾನ ಜಗತ್ತಿನಲ್ಲಿ ಶ್ರೇಷ್ಠವಾದದ್ದು ಪ್ರತಿಯೊಬ್ಬರಿಗೂ ಹಕ್ಕನ್ನು ನೀಡಿದೆ.    

 ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ  ಮೌಲ್ಯಗಳನ್ನು ಎತ್ತಿ ಹಿಡಿಯೋಣ. ಈ ಮೂಲಕ ಸದೃಢ ದೇಶ ನಿರ್ಮಿಸಲು ಕಾರ್ಯೋನ್ಮುಖರಾಗೋಣ  ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ   ಪಾಲಕರಿಗೆ ಮಕ್ಕಳ ವೇಷ ಭೂಷಣ ನೋಡುವುದು ಒಂದು ದೊಡ್ಡ ಕುಷಿ ಆಗಿತ್ತು. ಈ ಕಾರ್ಯಕ್ರಮದಲ್ಲಿ  ಎಸ್ ಡಿ ಎಂಅಧ್ಯಕ್ಷರಾದ  ಹೊನ್ನಪ್ಪ ಜೋಗಣ್ಣನವರ. ಉಪಾಧ್ಯಕ್ಷರಾದ ಗದಿಗೆಪ್ಪ ಎಮ್ಮಿ.ಸದಸ್ಯರಾದ  ರಾಘವೇಂದ್ರ ಬಡಿಗೇರ. ವೀರುಪಾಕ್ಷಪ್ಪ ಬಳ್ಳಾರಿ, ನೇತ್ರಾವತಿ ಹಾವೇರಿ, ಲಲಿತಾ ತಾರಿಕೋಪ. ಶಿಕ್ಷಕರಾದ  ಸಿ ಎಸ್ ಆರ್ ರಾಠೋಡ. ಪ್ರಕಾಶ್ ಕೋರಿ.ಉಮೇಶ್ ಕೊರಕ್ಕನವರ. ಜ್ಯೋತಿ ಚಿಕ್ಕಂಶಿ, ಶಾಂತ ಹೊಸಮನಿ. ನಿವೃತ್ತ  ಶಿಕ್ಷಕರಾದ ಬಾಬು ಗಾಯಕವಾಡ.ಹಾಗೂ ಊರಿನ ಗಣ್ಯರು ಮತ್ತು ಪಾಲಕರು ಯುವಕರು ಮುಂತಾದವರ ಭಾಗವಹಿದ್ದರು.