6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್‌ಗಳ ವಶ: ಓರ್ವ ಆರೋಪಿ ಬಂಧನ

6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್‌ಗಳ ವಶ: ಓರ್ವ ಆರೋಪಿ ಬಂಧನ 6.85 kg of ganja-laced chocolate packets seized; one accused arrested.

ಬೆಳಗಾವಿ : ನಗರದ ಉದ್ಯಮಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಿಶ್ರಿತ ಮಾದಕ ವಸ್ತುವಿನ ಚಾಕೊಲೇಟ್ ಪ್ಯಾಕೆಟ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ಬಂಧಿತನಿಂದ ಒಟ್ಟು 94,600 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

   ದಿ. 7ರಂದು, ಬೆಳಗಾವಿ ನಗರದ ಇಂಜಿನಿಯರಿಂಗ್ ಕಾಲೇಜು ಒಂದರ ಮುಂಭಾಗದ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಗಾಂಜಾ ಮಿಶ್ರಿತ ಮಾದಕ ವಸ್ತುವಿನ ಚಾಕೊಲೇಟ್ ಪ್ಯಾಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಭೋಲು ತಂದೆ ಜಿತ್ತಾಲ ಪ್ರಜಾಪತಿ (39) ಎಂಬಾತನನ್ನು ಉದ್ಯಮಬಾಗ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬೆಳಗಾವಿಯ ಹನುಮಾನ ನಗರದಲ್ಲಿ ವಾಸವಾಗಿದ್ದು, ಮೂಲತಃ ಉತ್ತರ ಪ್ರದೇಶದ ಪ್ರತಾಪಘಟ್ ಜಿಲ್ಲೆಯ ಚಮ್ರುಪೂರ್ ಗ್ರಾಮದ ನಿವಾಸಿಯಾಗಿದ್ದಾನೆ.

    ಸಹಾಯಕ ಪೊಲೀಸ್ ಆಯುಕ್ತ ಶೇಖರಪ್ಪ ಹೆಚ್., ಖಡೇಬಜಾರ ಇವರ ಮಾರ್ಗದರ್ಶನದಲ್ಲಿ, ಉದ್ಯಮಬಾಗ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮಹಾಂತೇಶ ವಿ. ಹೊಸಪೇಟೆ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಯ ವಶದಲ್ಲಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

   ವಶಪಡಿಸಿಕೊಂಡ ವಸ್ತುಗಳಲ್ಲಿ 54,000 ಮೌಲ್ಯದ 6 ಕೆ.ಜಿ. 858 ಗ್ರಾಂ ತೂಕದ ಗಾಂಜಾ ಮಿಶ್ರಿತ ಮಾದಕ ವಸ್ತುವಿನ 27 ಚಾಕೊಲೇಟ್ ಪ್ಯಾಕೆಟ್‌ಗಳು 10,000 ಮೌಲ್ಯದ ಸ್ಯಾಮ್‌ಸಂಗ್ ಕಂಪನಿಯ ಮೊಬೈಲ್ ಫೋನ್ 600 ನಗದು ಹಣ 30,000 ಮೌಲ್ಯದ ದ್ವಿಚಕ್ರ ವಾಹನ ಹೀಗೆ ಒಟ್ಟು 94,600 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

     ಈ ಸಂಬಂಧ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 77/2026, ಎನ್‌ಡಿಪಿಎಸ್ ಕಾಯ್ದೆ-1985ರ ಕಲಂ 20(b)(ii)(B) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

   ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮಹಾಂತೇಶ ವಿ. ಹೊಸಪೇಟೆ, ಪಿಎಸ್‌ಐ ಪ್ರವೀಣ ಬಿರಾದರ, ಪಿಎಸ್‌ಐ ಯು.ಬಿ. ಕಟ್ಟಿಕರ, ಸಿಎಚ್‌ 1148 ಕೆ.ಕೆ. ಸವದತ್ತಿ, ಸಿಪಿಸಿ 1707 ಉಯದಕಾಂತ ಮಾಸನ್ನವರ, ಸಿಪಿಸಿ 1595 ಮಹೇಶ ಸಿದ್ದಪ್ಪ ವಡೇರ, ಸಿಪಿಸಿ 1781 ಈರಣ್ಣ ಚವಲಗಿ, ಸಿಪಿಸಿ 1812 ಹಣಮಂತ ಸೀತಿಮನಿ, ಸಿಪಿಸಿ 1800 ರಾಜಶೇಖರ ಭೀ. ಮದಿಹಳ್ಳಿ ಹಾಗೂ ಸಿಪಿಸಿ 1869 ದೀಪಾ ಅನಂತಪೂರ ಅವರು ಭಾಗವಹಿಸಿದ್ದರು.

   ಈ ಕಾರ್ಯಾಚರಣೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಪೊಲೀಸ್ ಆಯುಕ್ತ ಭೂಬೋರಸೆ ಹಾಗೂ ಉಪ ಪೊಲೀಸ್ ಆಯುಕ್ತ ನಾರಾಯಣ ಭರಮನಿ (ಕಾ&ಸು) ಹಾಗೂ ಉಪ ಪೊಲೀಸ್ ಆಯುಕ್ತರು (ಅವಿ) ಅವರು ಶ್ಲಾಘಿಸಿದ್ದಾರೆ.