53ನೇ ಹುಟ್ಟುಹಬ್ಬ: ಶ್ರೀಗಳ ಆಶೀರ್ವಾದ ಪಡೆದ ಮಹಾಂತೇಶ ದೊಡ್ಡಗೌಡರ

53ನೇ ಹುಟ್ಟುಹಬ್ಬ: ಶ್ರೀಗಳ ಆಶೀರ್ವಾದ ಪಡೆದ ಮಹಾಂತೇಶ ದೊಡ್ಡಗೌಡರ  53rd Birthday: Mahantesh Doddagoudar Receives Seer's Blessings


ನೇಸರಗಿ 02 : ಚನ್ನಮ್ಮನ ಕಿತ್ತೂರು ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಅವರು ತಮ್ಮ 53ನೇ ಹುಟ್ಟುಹಬ್ಬದ ಪ್ರಯುಕ್ತ ಇಂಚಲ ಸಾಧು ಸಂಸ್ಥಾನ ಮಠದ ಪರಮಪೂಜ್ಯ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ಹಾಗೂ ನಿರ್ಮಲಾನಂದ ಮಹಾಸ್ವಾಮಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಗಳು ಮಹಾಂತೇಶ ದೊಡ್ಡಗೌಡರ ಹಾಗೂ ಅವರ ಪತ್ನಿ ಮಂಜುಳಾ ದೊಡ್ಡಗೌಡರ ಅವರನ್ನು ಸತ್ಕರಿಸಿದರು. ಪುತ್ರ ಮುರಘೇಂದ್ರ ದೊಡ್ಡಗೌಡರ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.