ಐರಾವತ ಕ್ಷೇತ್ರದಲ್ಲಿ ಮುಪ್ಪಿನಾರ್ಯ ಮಹಾತ್ಮಜಿಯವರ 42ನೇ ಪುಣ್ಯಾರಾಧನೆ
ರಾಣೆಬೆನ್ನೂರು : ತಾಲೂಕಿನ ಇತಿಹಾಸ ಪ್ರಸಿದ್ಧ ಐರಾವತ ಕ್ಷೇತ್ರ ಮುಪ್ಪಿನಾರ್ಯರ ಮಹಾಕ್ಷೇತ್ರ ಐರಣಿ ಹೊಳೆಮಠದಲ್ಲಿ ಮುಪ್ಪಿನಾರ್ಯ ಮಹಾತ್ಮಾಜಿಯವರ 42ನೇ ವರ್ಷದ ಪುಣ್ಯಾರಾಧನೆ ಆಧ್ಯಾತ್ಮಿಕ ಕಾರ್ಯಕ್ರಮ ಜರುಗಲಿದೆ ಎಂದು ಜೋಡಕುರಳಿ ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠದ ಶ್ರೀ ಚಿದ್ಘನಾನಂದ ಮಹಾಸ್ವಾಮಿಗಳವರು ಹೇಳಿದರು.
ಅವರು ಮಂಗಳವಾರ ಐರಣಿ ಉಪ್ಪಿನಾರ್ಯ ಮಠದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಜಾತ್ರೆ ಕುರಿತು ಮಾತನಾಡಿದರು. ಇತಿಹಾಸದಲ್ಲಿ ಶ್ರೀ ಸಿದ್ಧಾರೂಢರು ಹುಬ್ಬಳ್ಳಿ( ಹೂಬಳ್ಳಿ ) ಮೂಲ ಸ್ಥಾನವಾಗಿ ನೆಲೆ ನಿಂತವರು . ಮುಪ್ಪಿನಾರ್ಯ ಮಹಾತ್ಮಜಿಯವರು ಸಿದ್ಧಾರೂಢರ ಆಶಯದಂತೆ ಕಳೆದ 42 ವರ್ಷಗಳ ಹಿಂದೆ ಐರಣಿ ಕ್ಷೇತ್ರದಲ್ಲಿ ಭಕ್ತರ ಉದ್ಧಾರಕ್ಕಾಗಿ ನೆಲೆ ನಿಂತಿದ್ದಾರೆ. ಇಂದಿಗೆ 42 ವರ್ಷಗಳು ಸಾಗಿ ಬಂದಿವೆ.
ಆಧ್ಯಾತ್ಮಿಕ ಪರಂಪರೆಯಂತೆ ಇಂದಿನ ಸದ್ಗುರು ಶ್ರೀ ಗುರು ಬಸವರಾಜ ದೇಶ ಕೇಂದ್ರ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಜುಲೈ 16, 2026 ರಂದು ತೆಪ್ಪೋತ್ಸವ ಮತ್ತು ವಿಶೇಷವಾಗಿ ತುಂಗಭದ್ರಾ ನದಿಯಲ್ಲಿ ಈ ಬಾರಿ ತುಂಗಾರತಿ ಅದ್ದೂರಿಯಾಗಿ ಜರುಗಲಿದೆ ಎಂದರು.
ದಿವ್ಯ ಸಾನಿಧ್ಯವನ್ನು ಕುಳ್ಳೂರು ಶ್ರೀ ಬಸವರಾಜ ಮಹಾಸ್ವಾಮಿಗಳು ದಾವಣಗೆರೆ ಜಡೆ ಸಿದ್ದೇಶ್ವರ ಆಶ್ರಮದ ಶ್ರೀ ಶಿವಾನಂದ ಮಹಾಸ್ವಾಮಿಗಳು, ಖಂಡೆರಾಯನಹಳ್ಳಿ ಶ್ರೀ ಗುರು ನಾಗರಾಜಾನಂದ ಸ್ವಾಮಿಗಳು, ಹದಡಿ ಚಂದ್ರಗಿರಿ ಮಠದ ಶ್ರೀ ಮುರಳಿಧರ ಮಹಾಸ್ವಾಮಿಗಳು ಮತ್ತು ತೆಲ ಶ್ರೀ ಗುರು ಶಂಭುಲಿಂಗಾಶ್ರಮದ ಶ್ರೀ ಪೂರ್ಣಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು.
ನೂತನ ಪಟ್ಟಾಧಿಕಾರಿ ಶ್ರೀ ಸದ್ಗುರು ಸಿದ್ಧಾರೂಢ ಭಾರತಿ ಸ್ವಾಮಿಗಳು ದಿವ್ಯ ನೇತೃತ್ವದಲ್ಲಿ ಪ್ರತಿ ನಿತ್ಯವೂ 8 ಗಂಟೆಗೆ ಕೈಲಾಸ ಮಂಟಪ ಮಹಾಪೂಜೆ ಜರುಗಲಿದೆ ಎಂದರು. ಶ್ರೀ ಮಠದಲ್ಲಿ (15-16- ಮತ್ತು17) ಒಟ್ಟು 3 ದಿವಸಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದರು. ಈ ನಿಮಿತ್ತ ಪ್ರತಿ ವರ್ಷದ ಸಂಪ್ರದಾಯದಂತೆ ಸಾಮೂಹಿಕ ವಿವಾಹ, ಧರ್ಮಸಭೆ, ತುಲಾಭಾರ ಅಂಬಾರಿ ಉತ್ಸವ ಹಾಗೂ ರಥೋತ್ಸವ ಜರುಗಲಿದೆ ಎಂದು ಶ್ರೀಗಳು ತಿಳಿಸಿದರು.
ದಿನಾಂಕ 17ರಂದು ವಿಧಾನಸಭೆ ಸಭಾಧ್ಯಕ್ಷ ರುದ್ರ್ಪ ಲಮಾಣಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಪ್ರಕಾಶ್ ಕೋಳಿವಾಡ, ಮಾಜಿ ಶಾಸಕ ಅರುಣ ಕುಮಾರ ಪೂಜಾರ, ಮಾಜಿ ಸಚಿವ ಆರ್.ಶಂಕರ, ನಗರ ಯೋ. ಪ್ರಾ. ಅಧ್ಯಕ್ಷ ರಾಜಣ್ಣ ಮೋಟಗಿ, ಜಿ.ಪಂ. ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ ಸೇರಿದಂತೆ ಮತ್ತಿತರ ಗಣ್ಯರು, ರಾಜಕೀಯ ಮುಖಂಡರು ಉದ್ಯಮಿಗಳು ವರ್ತಕರು ಪಾಲ್ಗೊಳ್ಳುವರು ಎಂದರು.
ಮಾಧ್ಯಮಗೋಸ್ತಿಯಲ್ಲಿ ಶ್ರೀ ಗುರುಬಸವರಾಜ ದೇಸಿ ಕೇಂದ್ರ ಮಹಾಸ್ವಾಮಿಗಳು, ಪಟ್ಟಾಧ್ಯಕ್ಷರಾದ ಶ್ರೀ ಸಿದ್ದಾರೋಡ ಭಾರತಿ ಸ್ವಾಮಿಗಳು, ಸೇವಾಕರ್ತರಾದ ಬಾಬಣ್ಣ ಐರಣಿ ಶೆಟ್ಟರ ಮಲ್ಲನಗೌಡ, ಸೇರಿದಂತೆ ಮತ್ತಿತರ ಭಕ್ತರು ಗಣ್ಯರು ಉಪಸ್ಥಿತರಿದ್ದರು.