4.03 ಲಕ್ಷಗಳ ಉಳಿತಾಯ ಬಜೆಟ್‌ಗೆ ಅನುಮೋದನೆ

ಜಮಖಂಡಿ 01: ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಒಟ್ಟು 2848.37 ಲಕ್ಷ ರೂ. ಅಂದಾಜು ಆದಾಯ ನೀರೀಕ್ಷಿಸಲಾಗಿದ್ದು, ಅದರಂತೆ 2844.34 ಲಕ್ಷ ರೂ.ಗಳ ವೆಚ್ಚ ಮತ್ತು 4.03 ಲಕ್ಷಗಳ ಉಳಿತಾಯ ಬಜೆಟ್‌ಗೆ ಅನುಮೋದನೆ ನೀಡಿ ಠರಾವು ಅಂಗೀಕರಿಸಿ ನಗರಸಭೆಯ 2024-25ನೇ ಸಾಲಿನ ಅಂದಾಜು ಆಯ-ವ್ಯಯಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅನುಮೋದನೆ ನೀಡಿದರು.  

ನಗರಸಭೆಗೆ ವಿವಿಧ ಮೂಲಗಳಿಂದ ಬರುವ ಸಂಪನ್ಮೂಲ ಹಾಗೂ ಸರ್ಕಾರದಿಂದ ಬರುವ ಅನುದಾನ ತೆಗೆದುಕೊಂಡು ನಗರದ ನಾಗರೀಕರಿಗೆ ಮೂಲಭೂತ ಸೌಕರ್ಯಗಳನ್ನು ಸಮರ​‍್ಕವಾಗಿ ಕಲ್ಪಿಸುವ ಹಿತದೃಷ್ಟಿಯಿಂದ ಆಯ-ವ್ಯಯದಲ್ಲಿ 2848.37 ಲಕ್ಷ ರೂ.ಗಳನ್ನು ಅನುಮೋದನೆಗೆ ನೀಡಲಾಗಿತ್ತುಯ. ನಗರದ ಜನಸಂಖ್ಯೆಗೆ ಅನುಗುಣವಾಗಿ ಶೌಚಾಲಯಗಳ ನಿರ್ಮಾಣ, ಬಸ್ ನಿಲ್ದಾಣಗಳು, ರಸ್ತೆಗಳು, ಚರಂಡಿಗಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪಗಳ ನಿರ್ವಹಣೆ, ನಗರದ ಉದ್ಯಾನವನಗಳ ಅಭಿವೃದ್ಧಿ, ಸರ್ವತೋಮುಖ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಒಟ್ಟು ರೂ. 2844.34 ಲಕ್ಷಗಳ ವೆಚ್ಚ ಅಂದಾಜಿಸಲಾಗಿದೆ.  

ಎರಡನೇ ಸುತ್ತಿನ ಸಾರ್ವಜನಿಕ ಸಭೆ ಕರೆದು ಸಾರ್ವಜನಿಕರು ಸಂಘ-ಸಂಸ್ಥೆಗಳಿಂದ ನಗರಕ್ಕೆ ಅವಶ್ಯವಿರುವ ಸಲಹೆ-ಸೂಚನೆಗಳನ್ನು ಪರಿಗಣನೆಗೆ ತೆಗೆದುಕೊಂಡು ಎಸ್‌.ಎಫ್‌.ಸಿ. ಯೋಜನೆಯಡಿ ಬಿಡುಗಡೆ ಆಗಬಹುದಾದ ಅನುದಾನಕ್ಕೆ ನಿಯಮಾನುಸಾರ ಪ.ಜಾತಿ ಮತ್ತು ಪ.ಪಂ ಜನಾಂಗದ ಕಲ್ಯಾಣಕ್ಕಾಗಿ ನಿಗಪಡಿಸಿದ ಶೇ.24.10, ಇತರೇ ಕಡುಬಡಜನರ ಕಲ್ಯಾಣಕ್ಕಾಗಿ ರೂ. 7.25, ವಿಕಲಚೇತನರಿಗಾಗಿ ಶೇ. 5 ರಷ್ಟು ಮೊತ್ತ ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.