ನರೇಗಾ ಕಾರ್ಮಿಕರಿಗೆ 349 ಕೂಲಿ: ವೀರಣ್ಣ ನಾಯ್ಕ

ಹೂವಿನ ಹಡಗಲಿ 07: ತಾಲ್ಲೂಕಿನ ಮಾಗಳ ಗ್ರಾಮದಲ್ಲಿ ಬುಧವಾರ ನಾಲಾ ಪುನಶ್ಚೇತನ ಕಾಮಗಾರಿ ಸ್ಥಳಕ್ಕೆ ವೀರಣ್ಣ ನಾಯ್ಕ ಭೇಟಿ ನೀಡಿ, ಕಾರ್ಮಿಕರೊಂದಿಗೆ ಸಮಾಲೋಚಿಸಿದರು. ನಿಗದಿತ ಅಳತೆಯ ಕೆಲಸ ನಿರ್ವಹಿಸುವ ಕೂಲಿಕಾರರಿಗೆ 349 ಪೂರ್ಣ ಕೂಲಿ ದೊರೆಯಲಿದೆ. ನರೇಗಾ ಕಾರ್ಮಿಕರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಮೇ 7 ರಂದು ಜರುಗಲಿರುವ ಲೋಕಸಭೆ ಚುನಾವಣೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಬೇಕು. ಕಾರ್ಮಿಕರು ತಪ್ಪದೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು ಎಂದು ಹೇಳಿದರು.