ದ್ವಿತೀಯ ಪಿಯುಸಿ ಫಲಿತಾಂಶ, ಸಾಧಕ ವಿದ್ಯಾರ್ಥಿಗಳ ಸನ್ಮಾನ

ರಾಣೇಬೆನ್ನೂರು 21:  ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ 2023-24ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಖನ್ನೂರ ವಿದ್ಯಾ  ನಿಕೇತನ ಕಾಲೇಜಿನ ಶೈಕ್ಷಣಿಕ  ಸಾಧಕ ವಿದ್ಯಾರ್ಥಿಗಳಿಗೆ, ಅಭಿನಂದಿಸಿ ಗೌರವಿಸಲಾಯಿತು.        

ಕಾಲೇಜಿನ ಆಡಳಿತ ಮಂಡಳಿಯ  ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ, ಶೇ.80ಕ್ಕೂ ಹೆಚ್ಚು ಅಂಕ ಗಳಿಸಿದ (ವಿಜ್ಞಾನ - 80,ಹಾಗೂ ವಾಣಿಜ್ಯ 90,) ವಿದ್ಯಾರ್ಥಿಗಳಾದ ಶ್ರೇಯಾ ಪಿ. ಗರಡಿಮನಿ, ಶೇ,96, ಪ್ರಕೃತಿ ಎನ್ ಮಜ್ಜಿಗಿ 95,7, ಇಬ್ಬರು ವಿದ್ಯಾರ್ಥಿಗಳು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಎಂದು ಸಂಸ್ಥೆಯ ಅಧ್ಯಕ್ಷ ಡಾ. ಪ್ರವೀಣ್  ಖನ್ನೂರ ತಿಳಿಸಿದರು. ಶ್ರೇಯಾ ಗರಡಿಮನಿ ಅವರು ಪಿಸಿ ಎಂಬಿ ಯಲ್ಲಿ,ಶೇ,98.25, ಅಂಕ ಗಳಿಸಿ ಹಾವೇರಿ ಜಿಲ್ಲೆಗೆ ದ್ವಿತೀಯ ಸ್ಥಾನದಲ್ಲಿದ್ದಾರೆ ಎಂದು ತಮ್ಮ ಹರ್ಷ್‌ ವ್ಯಕ್ತಪಡಿಸಿದ ಡಾ: ಪ್ರವೀಣ  ಖನ್ನೂರ ಅವರು ವಾಣಿಜ್ಯ ವಿಭಾಗದಲ್ಲಿ ಹರ್ಷಿತಾ ಆರ್ ಎಸ್, ಶೇ,95.5. ಗಳಿಸಿ ಅವರು ಸಹ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಇಂದು ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಸಿಇಓ, ಡಾ:ಶೈಲಶ್ರೀ ಪಿ ಖನ್ನೂರ, ನಾಗೇಶ್ ಮುರಡಣ್ಣವರ್, ಆಡಳಿತಾಧಿಕಾರಿಗಳು , ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು.