ಸಂಗೀತ ಎಲ್ಲರಿಗೂ ಒಲಿಯುವುದಿಲ್ಲ, ಸಾಧಕರನ್ನು ಮಾತ್ರ ಬಿಡುವುದಿಲ್ಲ: ಸುರೇಶ ಚಿಕ್ಕಣ್ಣ

2nd Gayana Milanotsava Music Competition Program

ಯರಗಟ್ಟಿ, 09 :  ಸಂಗೀತ ಎಲ್ಲರಿಗೂ ಒಲಿಯುವುದಿಲ್ಲ ಸಾಧಕರನ್ನು ಮಾತ್ರ ಬಿಡುವುದಿಲ್ಲ, ಸತತ ಪ್ರಯತ್ನ, ಶ್ರದ್ಧೆ ಭಕ್ತಿಯಿಂದ ಸಂಗೀತ ಕಲಿತರೆ ಸರಸ್ವತಿ ಒಲಿಯುತ್ತಾಳೆ, ಗಾಯನ ಸುಲಭವಾಗಿ ಸುಲಲಿತವಾಗಿ ಹೊರಹೊಮ್ಮುತ್ತದೆ ಎಂದು ಸಿರಿ ಮ್ಯುಸಿಕ್, ಸಿರಿಕನ್ನಡ ಚಾನಲ್‌ನ ಮುಖ್ಯಸ್ಥ ಸುರೇಶ ಚಿಕ್ಕಣ್ಣ ಹೇಳಿದರು.  

ಅವರು ಬೆಂಗಳೂರಿನ ಶುಕ್ರ ಆಡಿಟೋರಿಯಮ್ಸನಲ್ಲಿ ಕನ್ನಡ ಕರೋಕೆ ಸಂಗೀತಕ್ಕೆ ಪ್ರಸಿದ್ಧಿಯಾದ ಹೆಮ್ಮೆಯ ಕನ್ನಡಿಗ ಕುಟುಂಬ ಆಯೋಜಿಸಿದ 2ನೇ ಗಾಯನ ಮಿಲನೋತ್ಸವ ಸಂಗೀತ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.  

ಕಾರ್ಯಕ್ರಮದಲ್ಲಿ ಗಾಯಕ ಪಂಚಮ ಹಳಬಂಡಿ, ಪ್ರಾಯೋಜಕರಾದ ಗಾಯಕ ಹರ್ಷ(ಶ್ರೀನಿವಾಸ್) ಪ್ರಾಸ್ತಾವಿಕವಾಗಿ ಮಾತನಾಡುತ್ತ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಸಂಗೀತ ಪ್ರತಿಭೆಗಳನ್ನು, ಗಾಯಕರನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿ ಉತ್ತಮ ಗಾಯಕರನ್ನಾಗಿ ಮಾಡುವಲ್ಲಿ ವಿಶೇಷ ಪ್ರಯತ್ನ ಮಾಡಲಾಗುತ್ತಿದೆ. ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡು ನಮ್ಮ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದರು.

ವಿದೂಷಿ ಮೋನಿಷಾ ಅವರಿಂದ ಭರತನಾಟ್ಯ ಪ್ರದರ್ಶನ ಜರುಗಿತು. ಅಶ್ವತ್ಥ, ಶ್ರೀನಿವಾಸ,  ಅದ್ದೂರಿಯಾಗಿ, ಸಂಭ್ರಮದಿಂದ ಆಯೋಜಿಸಲಾದ ಸಂಗೀತ ಕಾರ್ಯಕ್ರಮ 5 ಸುತ್ತಿನಲ್ಲಿ ಜರುಗಿತು. ಕಪ್ಪು ಬಿಳುಪು ಸುತ್ತಿನಲ್ಲಿ ನಿರ್ಮಲ, ಎಚ್‌.ಎಸ್‌.ಮರಿಗೌಡ್ರು, ರಾಜನ್ ನಾಗೇಂದ್ರ ಸುತ್ತಿನಲ್ಲಿ ಬಸವರಾಜ ಮತ್ತು ರೇಣು ಕಿರಣ, ಹಂಸಲೇಖ ಸುತ್ತಿನಲ್ಲಿ ಸಂಗೀತ ಮತ್ತು ರಮೇಶ, ಅರ್ಜುನಜನ್ಯ, ಹರಿಕೃಷ್ಣ ಸುತ್ತಿನಲ್ಲಿ ಶುಭಪಲ್ಲವಿ ಮತ್ತು ರವಿವೇದಿಕೆ ಬಹುಮಾನ ಪಡದುಕೊಂಡರು. ಅಶ್ವತ್ಥ ಬಿಡದಿ ಸ್ವಾಗತಿಸಿದರು. ಶಂಕರ, ಲಕ್ಷ್ಮಣ, ಜಲಜ ಕಾರ್ಯಕ್ರಮ ನಿರೂಪಿಸಿದರು. ಶಂಕರ ವಂದಿಸಿದರು.