ಡಾ. ಪ್ರಭಾಕರ ಕೋರೆ ಕೋ-ಆಫ್ ಸೊಸಾಯಿಟಿಗೆ 19.32 ಕೋಟಿ ಲಾಭ: ಡಾ.ಪ್ರೀತಿ ದೊಡವಾಡ

ಮಾಂಜರಿ ದಿ6:  ಅಂಕಲಿ ಗ್ರಾಮದ ಡಾ. ಪ್ರಭಾಕರ ಕೋರೆ ಕೋ-ಆಫ್ ಕ್ರೇಡಿಟ ಸೊಸಾಯಿಟಿಯು ಅಂಕಲಿ (ಬಹು ರಾಜ್ಯ) ರಾಜ್ಯಾದ್ಯಂತ 55 ಶಾಖೆಗಳನ್ನು ಹೊಂದಿದ್ದು. ಸನ್ 2023-24 ಸಾಲಿನಲ್ಲಿ ರೂ 19.32 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ನಿರ್ದೇಶಕಿ ಡಾ. ಪ್ರೀತಿ ದೊಡವಾಡ ಇವರು ತಿಳಿಸಿದರು. 

ಅವರು ಇಂದು ಅಂಕಲಿ ಗ್ರಾಮದ ಸಂಸ್ಥೆಯ ಆಡಳಿತ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸ್ಥೆಯ ಒಟ್ಟು 55 ಶಾಖೆಗಳು ಕಾರ್ಯನಿರವಹಿಸುತ್ತಿದ್ದು 83803 ಸದಸ್ಯರನ್ನು ಹೊಂದಿದೆ. 3.01 ಕೋಟಿ ರೂ ಶೇರು ಬಂಡವಾಳ ಹೊಂದಿ 112.12 ಕೋಟಿ ರೂ ನಿಧಿಗಳನ್ನು ಸಂಗ್ರಹಿಸಿ 1405.67 ಕೋಟಿ ರೂ  ಠೇವು ಸಂಗ್ರಹಿಸಿರುತ್ತದೆ. 967.80 ಕೋಟಿ ರೂ ಸಾಲ ವಿತರಿಸಿರುತ್ತದೆ. 1520.80 ಕೋಟಿ ದುಡಿಯುವ ಬಂಡವಾಳ ಹೊಂದಿ 20256.63 ಕೋಟಿ ವಾರ್ಷಿಕ ವಹಿವಾಟು ಮಾಡಿದೆ ಎಂದರು. 

ಸಾರ್ವಜನಿಕ ವಲಯದ ರಾಷ್ಟ್ರಿಕೃತ ಬ್ಯಾಂಕುಗಳ ಸಾಲ ಮತ್ತು ಠೇವಣಿಗಳ ಬಡ್ಡಿದರಗಳಿಗೆ ಸ್ಪರ್ದಾತ್ಮಕ ರಿತಿಯಲ್ಲಿ ಠೇವಣಿ ಮತ್ತು ಸಾಲದ ಬಡ್ಡಿದರಗಳನ್ನು ಸಂಸ್ಥೆಯು ಅಳವಡಿಸಿಕೊಂಡಿರುತ್ತದೆ. ಸುಮಾರು 800ಕ್ಕೂ ಅಧಿಕ ಕಬ್ಬು ಕಟಾವು ಮಕ್ತೆದಾರರಿಗೆ, 200 ಪವರ ಕಾರ್ಟಗಳಿಗೆ, 4 ಕಬ್ಬು ಕಟಾವು ಯಂತ್ರಗಳಿಗೆ, ಶಾಲಾ ಬಸ್ಸು ಮತ್ತು ನಾಲ್ಕು ಚಕ್ರ ವಾಹನ ಹಾಗೂ ಇತರೆ ವಾಹನಗಳಿಗೆ ಅತಿ  ಕಡಿಮೆ ಬಡ್ಡಿ ದರದಲ್ಲಿ ವಾಹನಸಾಲ, ಸದಸ್ಯರ ಅನೂಕುಲಕ್ಕಾಗಿ ಗೃಹ ಸಾಲ, ಅತ್ಯಂತ ಕಡಿಮೆ ಬಡ್ಡಿದರದಲಿ ಸೂಮಾರು 1200 ಎಕ್ಕರೆ ಬೂಮಿಗೆ 900 ಫಲಾನುಭವಿ ರೆತ ಸದಸ್ಯರಿಗೆ ಏತ ನೀರಾವರಿಸಾಲ ನೀಡಿದ್ದೆವೆ. ಅದೆರೀತಿ ಬಂಗಾರ ಸಾಲವನ್ನು ತ್ವರಿತವಾಗಿ ಅತಿ ಕಡಿಮೆ ಬಡ್ಡಿದರದಲ್ಲಿ ವಿತರಿಸುತ್ತಿದ್ದೆವೆ. ಸಂಸ್ಥೆಯು ವೆಸ್ಟರ್ಣ ಯೂನಿಯನ ಮನಿಟ್ರಾನ್ಸಪರ, ಮೊಬೈಲ ರಿಚಾರ್ಜ, ಪ್ಯಾನ ಕಾರ್ಡ, ಪಾಸಪೊರ್ಟ್‌, ಇ-ಸ್ಟಾ-್ಯಂಪ, ಆರ್ ಟಿ ಸಿ ಉತಾರ, ಬಸ್ ರೈಲು ಹಗೂ ವಿಮಾನ ಟಿಕೆಟ ಕಾಯ್ದಿರುಸುವಿಕ, ಇತರೆೆ ಬ್ಯಾಂಕುಗಳ ಸಹಯೊಗದೊಂದಿಗೆ ಆರ್ ಟಿ ಜಿ ಎಸ್ ಮತ್ತು ಎನ್ ಇ ಎಫ್ ಟಿ ಸೌಲಭ್ಯ. ಕಾರ್ಯನಿರ್ವಹಿಸುತ್ತಿರುವ 55 ಶಾಖೆಗಳು ಲಾಭದಲ್ಲಿದ್ದು ಸಂಸ್ಥೆಯ ಸಂಸ್ಥಾಪಕರಾದ ಸನ್ಮಾನ್ಯ ಡಾ. ಪ್ರಭಾಕರ ಕೋರೆಯವರ ಮಾರ್ಗದರ್ಶನ, ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ ಸಿಬ್ಬಂದಿ ವರ್ಗದವರ ಸತತ ಪ್ರಯತ್ನ, ಸಂಸ್ಥೆಯ ಸದಸ್ಯರ ಸಹಕಾರವೆ ಈ ಯಶಸ್ಸಿಗೆ ಕಾರಣ ಸಂಸ್ಥೆಯು ತನ್ನ ಸದಸ್ಯರನ್ನು ರೂ 1 ಲಕ್ಷದವರೆಗೆ ಅಫಘಾತ ವಿಮೆಗೆ ಒಳಪಡಿಸಿರುತ್ತದೆ.ಅದೆ ರೀತಿ ಸಂಸ್ಥೆಯು ಸಾಮನ್ಯ  ಆರೋಗ್ಯ ಮತ್ತು ಜೀವ ವಿಮೆ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸದಸ್ಯರಿಗೆ ಸೇವೆಯನ್ನು ನೀಡುತ್ತಿದೆ.ಅದೆ ರೀತಿ ಸಂಸ್ಥೆಯು ಸಾಮನ್ಯ ಮತ್ತು ಜೀವ ವಿಮೆ ಸೌಲಭ್ಯವನ್ನು ತನ್ನ ಸದಸ್ಯರಿಗೆ ನೀಡುತ್ತಿದೆ ಈ ಸೌಲಭ್ಯವನ್ನು ಸದಸ್ಯರು ಸದೂಪಯೋಗ ಪಡಿಸಿಕೊಳ್ಳಬೇಕು ಎಂದರು, 

ಅತಿ ಶೀಘ್ರದಲ್ಲಿ ಸಂಸ್ಥೆಯು ಗಡಿರಾಜ್ಯವಾದ ಮಾಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ  ತನ್ನ 20 ಶಾಖೆಗಳನ್ನು ಪ್ರಾರಂಭಿಸಲಿದೆ ಎಂದರು ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಾಹಾಂತೇಶ ಪಾಟೀಲ,ಉಪಾಧ್ಯಕ್ಷರಾದ ಸಿದ್ದಗೌಡಾ ಪಾಟೀಲ,ನಿರ್ದೇಶಕರಾದ ಮಲ್ಲಿಕಾರ್ಜುನ ಕೋರೆ,ಅಣ್ಣಾಸಾಬ ಸಂಕೇಶ್ವರಿ,ಬಸನಗೌಡಾ ಆಸಂಗಿ, ಸುಕುಮಾರ ಚೌಗಲೆ, ಪಿಂಟು ಹಿರೇಕುರಬರ, ಅಮಿತ ಜಾಧವ, ಪ್ರಫುಲ ಶೆಟ್ಟಿ, ಅಶೋಕ ಚೌಗಲಾ, ಬಾಳಪ್ಪಾ ಉಮರಾಣೆ, ಅನೀಲ ಪಾಟೀಲ,ಶೋಭಾ ಜಕಾತೆ, ಶೈಲಜಾ ಪಾಟೀಲ, ಪಾರ್ವತಿ ಧರನಾಯಕ, ಜಯಶ್ರೀ ಮೇದಾರ, ಶ್ರೀಕಾಂತ ಉಮರಾಣೆ, ವಿವೇಕಾನಂದ ಕಮತೆ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ದೇವೆಂದ್ರ ಕರೋಶಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.