11ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ
11th Annual Mahapooja of Lord Ayyappa
ಯರಗಟ್ಟಿ, 27 : ಶ್ರೀ ಅಯ್ಯಪ್ಪ ಭಕ್ತವೃಂದ 11ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯು ಮಹಾಂತ ದುಂರದುಡೇಶ್ವರ ಶ್ರೀಮಠದಲ್ಲಿ ಅಮ್ಮಿನಬಾವಿ ಕೆ. ನಾರಾಯಣ ಗುರುಸ್ವಾಮಿ ಪೌರೋಹಿತ್ಯದಲ್ಲಿ ಬಹು ವಿಜೃಂಭಣೆಯಿಂದ ಜರಗಿತು.ಸಂಜೆ 06.30ರಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪ ಸ್ವಾಮಿಯ ಭವ್ಯ ಜ್ಯೋತಿ ಮೆರವಣಿಗೆ ಜರುಗಿತು.ನಂತರ ಅಯ್ಯಪ್ಪ ಸ್ವಾಮಿಯ ಅಷ್ಟೋತ್ತರ ವಿಧಿವಿಧಾನಗಳು ನಡೆದವು. ಅಯ್ಯಪ್ಪ ಮಾಲಿದಾರಿಗಳಿಂದ ಭಜನ ಮತ್ತು ನೆರೆದ ಭಕ್ತರಿಂದ ಭಜನೆ, ಶ್ಲೋಕ ಪಠಣ ನಡೆಯಿತು. ನಂತರ ಅಯ್ಯಪ್ಪಸ್ವಾಮಿ ಮಾಹಾಭಿಷೇಕ ಜರುಗಿತು.ವಿಧಿವತ್ತಾಗಿ ಪುಡಿ ಪೂಜೆ ಮಾಡಿ, ಮಹಾ ಮಂಗಳಾರತಿ ಬೆಳಗಿದರು. ಹಾಗೂ ಮಹಾ ಅನ್ನಸಂತರೆ್ಣ ನಡೆಯಿತು.
ಈ ವೇಳೆ ಕಟಕೋಳ ಈರಣ್ಣಾ ಗುರುಸ್ವಾಮಿ, ಸತ್ತಿಗೇರಿ ಈರಣ್ಣಾ ಗುರುಸ್ವಾಮಿ, ಕೆ. ಚಂದರಗಿ ಬಸವರಾಜ ಗುರುಸ್ವಾಮಿ, ರೈನಾಪೂರ ಮಲ್ಲಪ್ಪ ಗುರುಸ್ವಾಮಿ, ಸಾಲಹಳ್ಳಿ ಅಶೋಕ ಗುರುಸ್ವಾಮಿ, ಕೊಡ್ಲಿವಾಡ ರಮೇಶ ಗುರುಸ್ವಾಮಿ, ಸ್ಥಳೀಯ ಮಾಲಾಧಾರಿಗಳಾದ ಆನಂದ ಗುರುಸ್ವಾಮಿ, ಈರಣ್ಣಾ ಗುರುಸ್ವಾಮಿ, ವಿಜಯ ಗುರುಸ್ವಾಮಿ, ಗದಿಗೆಪ್ಪ ಗುರುಸ್ವಾಮಿ, ಉದ್ದಪ್ಪ ಸ್ವಾಮಿ, ಮಹೇಶ ಸ್ವಾಮಿ, ಪ್ರವೀಣ ಸ್ವಾಮಿ, ರಾಮು ಸ್ವಾಮಿ, ವಿನಾಯಕ ಸ್ವಾಮಿ, ಶಿವಪುತ್ರ ಸ್ವಾಮಿ, ಪ್ರಕಾಶ ಸ್ವಾಮಿ, ರುದ್ರ್ಪ ಸ್ವಾಮಿ, ಕೃಷ್ಣಾ ಸ್ವಾಮಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 