ನಾಳೆ ‘ಮೌಢ್ಯಗಳ ಆರಾಧಕರು’ ಪುಸ್ತಕ ಬಿಡುಗಡೆ

ನಾಳೆ ‘ಮೌಢ್ಯಗಳ ಆರಾಧಕರು’ ಪುಸ್ತಕ ಬಿಡುಗಡೆ ‘Worshippers of Superstitions’ book to be released tomorrow


ಕೊಪ್ಪಳ  10: ವಿಶಾಲ ಪ್ರಕಾಶನ, ಮಾದಿನೂರು-ಕೊಪ್ಪಳ, ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ಹಾಗೂ ಸಿರಿಗನ್ನಡ ವೇದಿಕೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಸೆ. 12ರಂದು ವಿವಿಧ ನೂತನ ಕನ್ನಡ ದಿನಪತ್ರಿಕೆಗಳ ಬಿಡುಗಡೆ, ಪುಸ್ತಕ ಲೋಕಾರೆ​‍್ಣ ಹಾಗೂ ಸಾಧಕರಿಗೆ ‘ಕರುನಾಡ ಚೇತನ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.  

ಕೊಪ್ಪಳ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ನ್ಯಾಯವಾದಿ ವಿ.ಎಂ. ಭೂಸನೂರುಮಠ ಉದ್ಘಾಟಿಸಲಿದ್ದಾರೆ. ಹಿರಿಯ ಪತ್ರಕರ್ತ ಎಂ. ಸಾದಿಕ್ ಅಲಿ ಅಧ್ಯಕ್ಷತೆ ವಹಿಸಲಿದ್ದಾರೆ.  

ಗದುಗಿನ ಹಿರಿಯ ಸಾಹಿತಿ ಡಾ. ರಾಜೇಂದ್ರ ಎಸ್‌. ಗಡಾದ ಅವರು **‘ವೈಜ್ಞಾನಿಕ ಯುಗದಲ್ಲೂ ಮೌಢ್ಯಗಳ ಆರಾಧಕರು’** ಕೃತಿಯನ್ನು ಲೋಕಾರೆ​‍್ಣ ಮಾಡಲಿದ್ದಾರೆ. ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಜಿ.ಎಸ್‌. ಗೋನಾಳ ಸಂಪಾದಕತ್ವದ ‘ಕರುನಾಡ ಚೇತನ’ ಪತ್ರಿಕೆಯನ್ನು ಬಳ್ಳಾರಿ ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ.ಎಸ್‌. ಪಾಟೀಲ ಬಿಡುಗಡೆಗೊಳಿಸಲಿದ್ದಾರೆ.  

ಉದಯ ತೋಟದ ಸಂಪಾದಕತ್ವದ ‘ಸ್ಪೂರ್ತಿ ಧಾಮ’ ದಿನಪತ್ರಿಕೆಯನ್ನು ವಾರ್ತಾ ಮತ್ತು ಪ್ರಚಾರ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ, ಲೋಕೇಶ ಸಂಪಾದಕತ್ವದ ‘ಚಾಣಕ್ಯ ಪ್ರಭ’ ದಿನಪತ್ರಿಕೆಯನ್ನು ಕೊಪ್ಪಳ ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಹಾಗೂ ಜಿ.ಎಸ್‌. ಗೋನಾಳ ಸಂಪಾದಕತ್ವದ ‘ಈನಮ್ಮ ವಿಜಯ ಸೂರ್ಯೋದಯ’ ದಿನಪತ್ರಿಕೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ ಬಿಡುಗಡೆ ಮಾಡಲಿದ್ದಾರೆ.