ಅವ್ಯವಸ್ಥೆಯ ಆಗರವಾದ ಸಂಕಲ್ಪ ವಿಕಸಿತ ಯಾತ್ರೆ

ಕುಕನೂರು ೧೭:   ತಾಲೂಕಿನ ಮಂಡಲಗಿರಿ ಗ್ರಾಮದ ಶಿಶು ಪಾಲನಾ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ನಮ್ಮ ಸಂಕಲ್ಪ ವಿಕಸಿತ ಭಾರತ ಯಾತ್ರೆ ಕಾರ್ಯಕ್ರಮ ಆ ವ್ಯವಸ್ಥೆಯ ಆಗರವಾಗಿ ಕಂಡುಬಂದಿತು. ಕಾರ್ಯಕ್ರಮ ಪ್ರಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 9 ವರ್ಷದ ಸಾಧನೆಗೆ ಪೂರಕವಾದ ಯೋಜನೆಗಳ ಕುರಿತಂತೆ ಸಾಕ್ಷ ಚಿತ್ರವನ್ನು ಬೃಹತ್ ಪರದೆಯಲ್ಲಿ ಪ್ರದರ್ಶಿಸಲಾಯಿತು. ನಂತರ ಒಂದೊಂದೇ ಯೋಜನೆಗಳ ಕುರಿತಂತೆ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳು ಮಾಹಿತಿ ಹಾಗೂ ಸಂಪೂರ್ಣ ವಿವರವನ್ನು ತಿಳಿಸುತ್ತಾ ಮೊದಲಿಗೆ ಆರೋಗ್ಯ ಇಲಾಖೆ ಅಧಿಕಾರಿ ಮಾತನಾಡುತ್ತಾ ಪ್ರಧಾನ ಮಂತ್ರಿ ಆಯುಷ್ಮಾನ್ ಯೋಜನೆಯ ಅಡಿಯಲ್ಲಿ 5 ಲಕ್ಷಗಳವರೆಗೆ ಚಿಕಿತ್ಸೆ ಪಡೆಯಬಹುದಾಗಿದ್ದು ಅದಕ್ಕೆ ಅನುಸರಿಸಬೇಕಾದ ಕ್ರಮವನ್ನು ತಿಳಿಸಿದರು. ನಂತರ ಶಿಶು ಅಭಿವೃದ್ಧಿ ಇಲಾಖೆಗೆ ಸಂಬಂಧಪಟ್ಟಂತೆ ಅಂಗನವಾಡಿ ಕಾರ್ಯಕರ್ತೆ ಎಲ್ಲಾ ಮಾಹಿತಿಗಳನ್ನು ಒದಗಿಸಿದರು.     *ಗೊಂದಲ ಉಂಟು ಮಾಡಿದ ಉಜ್ವಲ ಯೋಜನೆ*

          ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಹು ಯಶಸ್ವಿಯಾಗು ಜನಪ್ರಿಯ ಯೋಜನೆಯಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಉಚಿತ ಗ್ಯಾಸ್ ಸಿಲೆಂಡರ್ ವಿತರಣೆಯ ಕುರಿತಂತೆ ಕುಕನೂರು ನಗರದ ಹೊಸಮನಿ ಭಾರತ್ ಗ್ರಾಮೀಣ ಏಜೆನ್ಸಿ ಯವರು ಉಜ್ವಲ ಯೋಜನೆ ಕುರಿತಂತೆ ಸಂಪೂರ್ಣ ವಿವರ ಹಾಗೂ ಫಲಾನುಭವಿಯಾಗಲು ಬೇಕಾದ ದಾಖಲಾತಗಳ ಕುರಿತಂತೆ ವಿವರ ನೀಡುತ್ತಿದ್ದಂತೆಯೇ ಗ್ರಾಮಸ್ಥರು ನಿಮ್ಮ ಏಜೆನ್ಸಿಯ ಕಾರ್ಯಾಲಯಕ್ಕೆ ಬಂದಾಗ ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿ ಮರಳಿ ಕಳುಹಿಸಿದ್ದೀರಿ ಆದರೆ ಅದೇ ದಾಖಲಾತಿಗಳನ್ನು ತೆಗೆದುಕೊಂಡು ಬೇರೆ ಏಜೆನ್ಸಿ ಅವರ ಹತ್ತಿರ ಹೋದಾಗ ಉಜ್ವಲ ಯೋಜನೆಯ ಅಡಿ ಗ್ಯಾಸ್ ಉಚಿತವಾಗಿ ವಿತರಣೆ ಮಾಡಿರುತ್ತಾರೆ. ಕಾಟಾಚಾರಕ್ಕೆ ಇಂತಹ ನಮ್ಮ ಸಂಕಲ್ಪ ವಿಕಸಿತ ಭಾರತ ದಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುವುದನ್ನು ಬಿಟ್ಟು ನಿಜವಾಗಿಯೂ ಉಚಿತ ಗ್ಯಾಸ್ ವಿತರಣೆ ಮಾಡುವ ಉದ್ದೇಶ ಇದ್ದರೆ ಮಾತ್ರ ಮಾತನಾಡಿ ಇಲ್ಲದಿದ್ದರೆ ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ಗ್ಯಾಸ್ ಏಜೆನ್ಸಿ ಅವರನ್ನು ಗ್ರಾಮಸ್ಥರು ಒತ್ತಾಯಿಸಿದರು.   

       ನಂತರ ಪರಿಸ್ಥಿತಿ ತಿಳಿಗೊಳ್ಳುತ್ತಿದ್ದಂತೆಯೇ ಪಡಿತರ ಚೀಟಿಯಲ್ಲಿ ಏಕ ಸದಸ್ಯರಿಂದ ಕುಟುಂಬಕ್ಕೆ ಗ್ಯಾಸ್ ಸಂಪರ್ಕ ಉಚಿತವಾಗಿ ಉಜ್ವಲ ಯೋಜನೆಯ ಅಡಿಯಲ್ಲಿ ವಿತರಣೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಹೊಸಮನಿ ಗ್ಯಾಸ್ ಏಜೆನ್ಸಿಯ ಪ್ರತಿನಿಧಿ ಮಾತನಾಡುತ್ತಾ ಏಕ ಸದಸ್ಯರಿರುವ ಪಡಿತರ ಚೀಟಿಗೆ ಗ್ಯಾಸ್ ವಿತರಣೆ ಮಾಡಲು ಸಾಧ್ಯವಿಲ್ಲ ಈಗಂತ ಕಂಪನಿಯ ನಿಯಮಗಳು ಇದೆ ಎಂದು ಹೇಳಿದಾಗ ಕಾರ್ಯಕ್ರಮ ಮತ್ತೆ ಗೊಂದಲದ ಗೂಡಾಗಿ ಪರಿಣಮಿಸಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಮಸ್ಥರು ಭಾರತ ಗ್ಯಾಸ್ ಕಂಪನಿಯ ಮಾರುಕಟ್ಟೆಯ ಪ್ರತಿನಿಧಿಯ ದೂರವಾಣಿ ಸಂಖ್ಯೆ ಕೊಡಿ ಎಂದಾಗ ಏಜೆನ್ಸಿಯ ಪ್ರತಿನಿಧಿ ಮೌನಕ್ಕೆ ಶರಣಾಗಿದ್ದು ಹಲವು ಅನುಮಾನಕ್ಕೆ ಕಾರಣವಾಯಿತು. ಸಲ್ಪ ಸಮಯದ ಬಳಿಕ ಭಾರತ್ ಗ್ಯಾಸ್ ಮಾರುಕಟ್ಟೆ ಪ್ರತಿನಿಧಿಯ ದೂರವಾಣಿ ಸಂಖ್ಯೆ ಕೊಡುತ್ತೇನೆ ತೆಗೆದುಕೊಳ್ಳಿ ಎಂದು ತಮ್ಮ ಏಜೆನ್ಸಿಯ ಮಾಲೀಕರ ದೂರವಾಣಿ ಸಂಖ್ಯೆ ನೀಡಿ ಮತ್ತೆ ಕಾರ್ಯಕ್ರಮದಲ್ಲಿ ಗೊಂದಲವನ್ನುಂಟು ಮಾಡಿದರು.            ಈ ಒಂದು ವಿಷಯಕ್ಕೆ ಕಾರ್ಯಕ್ರಮ ನಿಲ್ಲುವ ಸಂದರ್ಭ ಕಂಡು ಬಂದಾಗ ಗ್ರಾಮದ ಮುಖಂಡ ವೆಂಕಟೇಶ ಈಳಿಗೆರ ಮಧ್ಯಪ್ರವೇಶಿಸಿ ಗ್ಯಾಸ್ ಏಜೆನ್ಸಿ ಅವರಿಗೆ ತಿಳಿ ಹೇಳಿದ ನಂತರ ಏಕ ಸದಸ್ಯ ಪಡಿತರ ಚೀಟಿ ಹೊಂದಿದ ಕುಟುಂಬಕ್ಕೂ ಸಹ ಗ್ಯಾಸ್ ವಿತರಣೆ ಮಾಡುವುದಾಗಿ ತಿಳಿಸಿದರು. ಆಗ ಗ್ರಾಮಸ್ಥರು ಗ್ಯಾಸ್ ಏಜೆನ್ಸಿಯ ಮೇಲೆ ನಂಬಿಕೆ ಇಲ್ಲ ನೀವು ಜವಾಬ್ದಾರಿ ತೆಗೆದುಕೊಳ್ಳುತ್ತೀರಾ ಎಂದು ಹೇಳಿದಾಗ ಅವರು ಕೊಡದೆ ಇದ್ದ ಪಕ್ಷದಲ್ಲಿ ನಾನು ಜವಾಬ್ದಾರಿ ಹೊತ್ತುಕೊಂಡು ಓಡಿಸುವ ಕಾರ್ಯ ನಿಭಾಯಿಸುತ್ತೇನೆ ಎಂದು ಹೇಳಿದಾಗ ನಮ್ಮ ಸಂಕಲ್ಪ ವಿಕಾಸದ ಭಾರತ ಕಾರ್ಯಕ್ರಮ ಮುಂದುವರೆಯಿತು.   

         ಮಂಡಲಗಿರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ ನಾಯಕ ಮಾತನಾಡಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಪ್ರದೇಶದ ಜನ ಪಟ್ಟಣ ಪ್ರದೇಶಗಳತ್ತ ಗುಳೆ ಹೋಗುವುದನ್ನು ತಪ್ಪಿಸಿದ್ದು ಪ್ರತಿವರ್ಷ ಪ್ರತಿ ಕುಟುಂಬಕ್ಕೆ 100 ಮಾನವ ದಿನಗಳ ಉದ್ಯೋಗವನ್ನು ನೀಡಲು ಪಂಚಾಯಿತಿ ಹಾಗೂ ಸಹಯೋಗ ಇಲಾಖೆಗಳು ಸಿದ್ದರಾಗಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಲು ಸಿದ್ದರಾಗಿ ಎಂದು ಸೂಚಿಸಿದರು.   

     ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ಆರ್ಥಿಕ ಸಮಲೋಚಕರಾದ ಪಂಪನಗೌಡರು ಮಾತನಾಡುತ್ತ ಪ್ರಧಾನಮಂತ್ರಿಯವರು ದೇಶದ ಜನತೆಗೆ ಬಹು ಉಪಯೋಗಿ ಯೋಜನೆಗಳನ್ನು ನೀಡಿದ್ದು ಅದರಲ್ಲಿ ಸುಕನ್ಯಾ ಸಮೃದ್ಧಿ, ಮಹಿಳಾ ಸನ್ಮಾನ ಯೋಜನೆ, ಪ್ರಧಾನ ಮಂತ್ರಿ ಭೀಮಾ ಯೋಜನೆ ಕುರಿತಂತೆ ವಿವರವನ್ನು ತಿಳಿಸುತ್ತಾ ಅಟಲ್ ಪೆನ್ಷನ್ ಯೋಜನೆ ಕನಿಷ್ಠ ಸಾವಿರ ರೂಪಾಯಿದ ಗರಿಷ್ಠ ಐದು ಸಾವಿರ ರೂಪಾಯಿಗಳವರೆಗೆ 60 ವರ್ಷ ನಂತರದ ಅವಧಿಯಲ್ಲಿ ಪಿಂಚಣಿ ನೀಡುವ ಸೌಲಭ್ಯವಾಗಿದ್ದು ಪ್ರತಿಯೊಬ್ಬರು ಈ ಪಿಂಚಣಿಯ ಲಾಭ ಪಡೆದು ಸಂಧ್ಯ ಕಾಲದಲ್ಲಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಸಾರ್ವಜನಿಕರಿಗೆ ಹೇಳಿದರು.   

   ಡ್ರೋನ್  ಮೂಲಕ ಕೃಷಿ ಜಮೀನುಗಳಿಗೆ ಕೀಟನಾಶಕ ಸಿಂಪರಣೆ ಕುರಿತಂತೆ ಪ್ರಾತ್ಯಕ್ಷಿಕೆ ನೀಡಲಾಯಿತು.   ಉಜ್ಜಲ ಗ್ಯಾಸ್ ಯೋಜನೆಗೆ ಸಂಬಂಧಪಟ್ಟಂತೆ ಸೃಷ್ಟಿಯಾದ ಗೊಂದಲವನ್ನು ಬಿಟ್ಟರೆ ಕಾರ್ಯಕ್ರಮ ಬಹುತೇಕ ಯಶಸ್ವಿಯಾಗಿ ನೆರವೇರಿತು.  ಈ ಸಂದರ್ಭದಲ್ಲಿ ಪ್ರಮುಖರಾದ ಮಾರುತಿ ಹೊಸಮನಿ, ಹಂಚಾಳಪ್ಪ ತಳವಾರ, ವೆಂಕಟೇಶ ಈಳಿಗೆರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಕ್ಕ ಈಳಿಗೇರ ಹಾಗೂ ಸರ್ವ ಸದಸ್ಯರು, ಪ್ರಮುಖರಾದ ಹಂಚಾಳಪ್ಪ ತಳವಾರ,ವೀರನಗೌಡ ತೋಟಗಂಟಿ, ಹನುಮಂತಪ್ಪ ಉಪ್ಪಾರ, ಮಲ್ಲಯ್ಯ ಗದುಗಿನ, ಎಸ್ ಬಿ ಐ ಮ್ಯಾನೇಜರ್, ಕೆಜಿಬಿ ಮ್ಯಾನೇಜರ್ ರಮೇಶ ಕೋಟಮಚಗಿ, ಅಂಚೆ ಇಲಾಖೆಯ ಹುಚ್ಚಪ್ಪ ತಳವಾರ, ಆರೋಗ್ಯ ಇಲಾಖೆಯ ಸುಗುಣ ರೆಡ್ಡಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು, ಸಿದ್ದನಗೌಡ ಪೊಲೀಸ್ ಪಾಟೀಲ್, ಶರಣಯ್ಯ ಸಸಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.