ಕರ್ನಾಟಕದ ಸಮ-ಸಮಾಜದ ಸ್ಥಾಪಕ ವಿಶ್ವ ಮಾನವ ಬಸವಣ್ಣನವರು

ಲೋಕದರ್ಶನವರದಿ

ಬೆಳಗಾವಿ:  "ಶತ-ಶತಮಾನಗಳಿಂದ ಅಸಮಾನತೆ, ಅಜ್ಞಾನ, ಅಂಧ:ಕಾರಗಳನ್ನೇ ಬಿತ್ತಿ ಬೆಳೆದ ಈ ದೇಶದ ಇತಿಹಾಸದಲ್ಲಿ ಒಂಭತ್ತುನೂರು ವರ್ಷಗಳ ಮುಂಚೆಯೇ ಸ್ಥಾಪಿತ ಅವೈಜ್ಞಾನಿಕ ಹಾಗೂ ಅಮಾನವೀಯ ಅಂಧ:ಶ್ರದ್ಧೆಯನ್ನು ಪ್ರಶ್ನಿಸಿ ಧ್ವನಿಯಿರದ ತಳಸಮುದಾಯಗಳಲ್ಲಿ ಆತ್ಮ ಸ್ಥೈರ್ಯ ತುಂಬಿ ಸಮಾನತೆಯ ಹೊಸ ಸಮಾಜ ನಿಮರ್ಿಸಿದ ವಚನ ಚಳುವಳಿಯ ನೇತಾರ ಮಹಾನ್ ಮಾನವತಾವಾದಿ ಅಣ್ಣ ಬಸವಣ್ಣನವರು. ಸ್ಥಾವರದ ನಿಜರ್ಿವತೆಯ ಬಗ್ಗೆ ಜನಸಾಮಾನ್ಯರಿಗೆ ತಿಳಿ ಹೇಳಿ 'ಸ್ಥಾವರಕ್ಕಳಿವುಂಟು ; ಜಂಗಮಕ್ಕಳಿವಿಲ್ಲ ಎಂಬ ದಿವ್ಯ ಮಂತ್ರ ನೀಡಿದ ವಿಶ್ವಗುರು ಬಸವಣ್ಣನವರನ್ನೇ ಇಂದು ಸ್ಥಾವರಕ್ಕಿಳಿಸುವ ಮೂಲಕ ನಮ್ಮ ಅಜ್ಞಾನ ಮೆರೆಯುತ್ತದ್ದೇವೆ. ಆ ನಿಟ್ಟಿನಲ್ಲಿ ಬಸವ ಪರಂಪರೆಯ ಮಠಾಧೀಶರು, ಪ್ರಾಜ್ಞರು, ಸಮಾಜ ಸುಧಾರಕರು ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಇಂದಿನ ತಲೆಮಾರಿಗೆ ವಚನ ಸಿದ್ಧಾಂತವನ್ನು ಮುಟ್ಟಿಸಬೇಕಿದೆ " ಎಂದು  ಪ್ರೊ. ಅಡಿವೆಪ್ಪ ಇಟಗಿ ಅಭಿಪ್ರಾಯ ಪಟ್ಟರು.    

       ನಗರದ ಹೊರವಲಯದ ಕಣಬರಗಿಯ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಸಮತಾ ಶಾಲೆಯಲ್ಲಿ  ಜರುಗಿದ 'ಬಸವ ಜಯಂತಿ'ಯಲ್ಲಿ ಉಪನ್ಯಾಸ ನೀಡಿದ ಅವರು, "ಬಿಜ್ಜಳ ರಾಜನ ಸಂಸ್ಥಾನದ ಮಹಾಮಂತ್ರಿಯಾಗಿದ್ದರೂ ಶ್ರೀಸಾಮಾನ್ಯರೊಡನೆ ಬೆರೆತು, ಅವರೊಳಗೆ ತಾನೂ ಒಬ್ಬನೆಂಬ ಭಾವ ಅವರಲ್ಲಿ ಮೂಡುವಂತೆ ಮಾಡಿದ ದಾರ್ಶನಿಕ ಬಸವಣ್ಣ. ದೇಹವನ್ನೇ ದೇವಾಲಯವನ್ನಾಗಿಸುವ ಮೂಲಕ ಎಲ್ಲರೊಳಗಿರುವ ದೈವತ್ವವನ್ನು ಸ್ವ-ದರ್ಶನ ಮಾಡಿಸುವ ನಿಟ್ಟಿನಲ್ಲಿ ಅವರು ಸಾಗಿದ ಮಾರ್ಗದಲ್ಲಿ ಕಲ್ಲು-ಮುಳ್ಳುಗಳೇ ಹೆಚ್ಚಾಗಿದ್ದವು. 

     ಅದಾವುದಕ್ಕೂ ಧೃತಿಗೆಡದೆ ಹೊಸ ಲಿಂಗಾಯತ ಧರ್ಮ ನಿಮರ್ಿಸಿದರು. ಎಲ್ಲ ತಳ ಸಮುದಾಯದ ವಚನಕಾರರು ಅದರಲ್ಲೂ ಅನಕ್ಷರಸ್ಥರಿಗೂ ಜ್ಞಾನ-ದೀಕ್ಷೆ ಕೊಡುವ ಮೂಲಕ ಅಂದಿನ ಪರಂಪರಾಗತ ಶಾಸ್ತ್ರೀಯ ಶಿಕ್ಷಣವನ್ನು, ದೇಶೀಯ ಶಿಕ್ಷಣ ನೀತಿಯನ್ನು ಅಂದಿನ ಕಾಲದಲ್ಲೇ ಜಾರಿಗೆ ತಂದಾಗ ಅಂದಿನ ಪಟ್ಟಭದ್ರ ಹಿತಾಸಕ್ತಿಗಳು ವಿರೋಧಿಸಿದ್ದು ಇತಿಹಾಸ. ಎಲ್ಲ ವೃತ್ತಿಗಳನ್ನು ಗೌರವಿಸಿ ಸಮತೆಯ ಸಮಾಜ ನಿಮರ್ಿಸಹೊರಟ ಬಸವಾದಿ ಶರಣರು ಕೊನೆಗೆ ರಾಜ್ಯದಿಂದ ಗಡಿಪಾರಾಗುವ ಶಿಕ್ಷೆಗೊಳಗಾಗಿದ್ದು ದುರಂತ ಇತಿಹಾಸ. 

   ಅಂಥ ವಚನಕಾರರನ್ನು ನಾವಿಂದು ಜಾತಿಗೆ ಸೀಮಿತಗೊಳಿಸದೆ ಬದುಕಿದರೆ ಬಸವಾದಿ ಶರಣರಿಗೆ ಗೌರವಿಸಿದಂತಾಗುತ್ತದೆ. ಸಮಾನತೆ-ಸಮನ್ವಯತೆ ಕೇವಲ ಭಾಷಣಗಳಿಗೆ ಸೀಮಿಗೊಳಿಸದೇ ಬಸವಾದಿ ಶರಣರು ವಾಸ್ತವ ಜೀವನದಲ್ಲಿ ಅನುಷ್ಠಾನಕ್ಕೆ ತಂದರೆ ಲಿಂಗಾಯತ ಧರ್ಮಕ್ಕೆ ಮುಂಬರುವ ದಿನಗಳಲ್ಲಿ ನಿಶ್ಚಿತವಾಗಿ ಮಾನ್ಯತೆ ದೊರೆಯುತ್ತದೆ" ಎಂದು ಹೇಳಿದರು.

                ಸಂಸ್ಥೆಯ  ಅಧ್ಯಕ್ಷರಾದ ಶಂಕರ ಬಾಗೇವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, " ಜಾತಿ-ಲಿಂಗ ತಾರತಮ್ಯವಿಲ್ಲದ, ಸಮಾನತೆಯ ತಳಹದಿಯ ಮೇಲೆ ಸ್ಥಾಪಿತವಾದ ಲಿಂಗಾಯತ ಧರ್ಮವನ್ನು ಜಾತಿಯಾಗಿ ಗುರುತಿಸದೇ ಎಲ್ಲ ಶ್ರಮಿಕ ಸಮುದಾಯಗಳ ಅಸ್ಮಿತೆಯನ್ನು ಗೌರವಿಸಬೇಕಾಗಿದೆ. ವೃತ್ತಿಗಳೇ ಜಾತಿಗಳಾಗಿ ಮಾರ್ಪಟ್ಟು, ಇಂದು ಅವುಗಳಲ್ಲೇ ಜಾತೀಯತೆ ತಾಂಡವವಾಡುತ್ತಿರುವುದು ಬಸವಾದಿ ಶರಣರಿಗೆ ಮಾಡಿದ ಅವಮಾನವಾಗಿದೆ. ಹೀಗಾಗಿ ಈಗಲಾದರೂ ಅಸಮಾನತೆ-ಅಂಧ ಶ್ರದ್ಧೆ ಹೋಗಲಾಡಿಸಿ ವೈಜ್ಞಾನಿಕ ತಳಹದಿಯ ಸಮ ಸಮಾಜ ಕಟ್ಟುವತ್ತ ಬಸವ ಪರಂಪರೆಯ ಜನರೆಲ್ಲ ಸಾಗಬೇಕಾಗಿದೆ" ಎಂದರು.

                ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳು ವಚನ ಪ್ರಾರ್ಥನೆ ಮಾಡಿದರು. ರೇಣುಕಾ ಮಜಲಟ್ಟಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.