ಧಾರವಾಡ - ಹುಬ್ಬಳ್ಳಿ

ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆ  

ಧಾರವಾಡ, 05 : ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡದಲ್ಲಿ ದಿನಾಂಕ: 5.6.2025 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.  ಶ್ರೀ ಜೆ. ಬಿ. ಮಜ್ಜಿಗಿ, ತಾಲ್ಲೂಕಾ ದಂಡಾಧಿಕಾರಿಗಳು, ಹುಬ್ಬಳ್ಳಿ ಗ್ರಾಮೀಣ ಇವರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.  ಪ್ರಸಕ್ತ ವರ್ಷದ ಧ್ಯೇಯವಾಕ್ಯ: ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದಾಗಿದೆ. ಪ್ಲ್ಯಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟಲು ಸರ್ಕಾರದ ಅನೇಕ ಆದೇಶಗಳಿವೆ ಅದನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದರು. ನೈಸರ್ಗಿಕ ಸಂಪನ್ಮೂಲಗಳಾದ ಜಲ, ನೆಲ ಮತ್ತು ಗಾಳಿ ಮತ್ತು ಪ್ರಾಣಿ-ಪಕ್ಷಿ ಸಂಕುಲಗಳ ಮೇಲೆ ಪ್ಲ್ಯಾಸ್ಟಿಕ್ ಬಳಕೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತಿದೆ. ಪ್ಲ್ಯಾಸ್ಟಿಕ್ ಖರೀದಿಸುವವರು ಇರುವ ವರೆಗೆ ಪ್ಲ್ಯಾಸ್ಟಿಕ್ ತಯಾರು ಮಾಡುತ್ತಾರೆ. ನಗರ​‍್ರದೇಶಗಳಲ್ಲದೇ ಗ್ರಾಮೀಣ ಭಾಗದಲ್ಲಿಯೂ ಪ್ಲ್ಯಾಸ್ಟಿಕ್ ಬಳಕೆ ಅತೀ ಹೆಚ್ಚಾಗುತ್ತಿದೆ. ಪ್ರತಿ ರಸ್ತೆ, ಚರಂಡಿಗಳು ಪ್ಲ್ಯಾಸ್ಟಿಕ್‌ಮಯವಾಗಿವೆ. ನದಿ ತೀರ ಪ್ರದೇಶಗಳ ಒತ್ತುವರಿಯಿಂದ ನದಿಗಳು ಬತ್ತಿ ಹೋಗುತ್ತಲಿವೆ. ಮರಳು ಗಣಿಗಾರಿಕೆ ಮತ್ತು ಜಮೀನಿನಿಂದ ಮರಳು ತೆಗೆಯುತ್ತಿರುವುದು ಹೆಚ್ಚಾಗುತ್ತಿದ್ದು ಇದರಿಂದ ಮಣ್ಣು, ನೀರು ಹಾಗೂ ಗಾಳಿ ಮಾಲಿನ್ಯ ಉಂಟಾಗುತ್ತಿದೆ ಎಂದರು.  ಡಾ. ಸಂಜೀವ ಕುಲಕರ್ಣಿ, ವೈದ್ಯರು ಹಾಗೂ ಪರಿಸರವಾದಿಗಳು, ಧಾರವಾಡ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ ಕಾರ್ಯಕ್ರಮದಲ್ಲಿ ರೈತರು, ವಿದ್ಯಾರ್ಥಿಗಳು, ಇಲಾಖೆ ಅಭಿಯಂತರನ್ನು ಒಳಗೊಂಡ ಕಾರ್ಯಕ್ರಮ ಆಯೋಜಿಸಿರುವುದು ವಿಶೇಷವಾಗಿದೆ ಎಂದರು.  ಅಭಿವೃದ್ಧಿ ಹೆಸರಿನಲ್ಲಿ ಜಾಣ ಜೀವಿಯಾದ ಮನುಷ್ಯ ಜೀವ ಸಂಕುಲಕ್ಕೆ ಸಂಕಷ್ಟ ಉಂಟುಮಾಡುತ್ತಿರುವುದು ಭಯ ಹಾಗೂ ಆತಂಕದ ವಿಷಯವಾದರೆ, ಜಗತ್ತಿನ ಮೂಲೆ ಮೂಲೆ ಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಚಿಂತನೆ, ಜ್ಞಾನ ಪಡೆಯುತ್ತಿರುವುದು ಸಂತೋಷದ ವಿಷಯ ಎಂದರು. ಮಣ್ಣು, ನೀರು ಹಾಗೂ ಗಾಳಿಯ ಮಾಲಿನ್ಯದ ದುಷ್ಪರಿಣಾಮಗಳಿಂದ ಆಹಾರ ಸರಪಣಿ ಮೂಲಕ ಮನುಷ್ಯನ ದೇಹವನ್ನು ಸೇರಿ ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ಕಾರಣವಾಗಿದೆ ಎಂದರು.  5ಖ  ಮೂಲಕ 1)ಖಜಜಿಜ 2) ಖಜಜಣಛಿಜ 3) ಖಜಜ 4) ಖಜಛಿಥಿಛಿಟಜ 5) ಖಜರಜಟಿಜಡಿಚಿಣಠ  ಪ್ಲ್ಯಾಸ್ಟಿಕ ಸಮಸ್ಯೆ ಕಡಿಮೆ ಮಾಡಬಹುದಾಗಿದೆ ಎಂದರು. ಪ್ಲ್ಯಾಸ್ಟಿಕ್ ಕಸವನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಸೂಕ್ತ ವಿಲೇವಾರಿ ಮಾಡಬೇಕೆಂದರು. ಸಸ್ಯ ಸಂಪದ ಅಭಿಯಾನದ ಮೂಲಕ ಪ್ರತಿ ಮನೆಗಳಲ್ಲಿ ಉಪಯೋಗಿಸುವಂಥಹ ಓಷಧಿ ಸಸ್ಯಗಳನ್ನು ಉಚಿತವಾಗಿ ನೀಡಲಾಗುವುದು. ಪೌಷ್ಠಿಕ ಆಹಾರ ಸೇವನೆ ಮೂಲಕ ವೈದ್ಯರ ಮೇಲೆ ಅವಲಂಬನೆ ಕಡಿಮೆ ಮಾಡಿಕೊಳ್ಳೋಣ ಎಂದು ತಿಳಿಸಿದರು.  ಇಂದಿನ ಕಾರ್ಯಕ್ರಮ ಪ್ಲ್ಯಾಸ್ಟಿಕ್ ನಿಯಂತ್ರಣಕ್ಕೆ ನಾಂದಿ ಮಾತ್ರ, ಪ್ರತಿ ದಿನ ನಿಷ್ಠೆಯಿಂದ ತಪಸ್ಸಿನಂತೆ ಪಾಲನೆ ಮಾಡಿದಾಗ ಮಾತ್ರ ಮನುಕುಲಕ್ಕೆ ಉಳಿಗಾಲ ಸಾಧ್ಯ ಎಂದರು.  ಡಾ. ಗೀರೀಶ ಎನ್‌. ಮರಡ್ಡಿ, ನಿರ್ದೇಶಕರು, ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಚೀನಾ, ಯು.ಎಸ್‌.ಎ. ಮತ್ತು ಭಾರತ ಅತೀ ಹೆಚ್ಚು ಪ್ಲ್ಯಾಸ್ಟಿಕ್ ಉತ್ಪಾದಕತೆ ಮತ್ತು ಬಳಕೆ ಮಾಡುವ ರಾಷ್ಟ್ರ ಗಳಾಗಿವೆ ಎಂದರು. ಕೈಗಾರಿಕೆಗಳು, ಕೃಷಿಯಲ್ಲಿ ರಾಸಾಯನಿಕಗಳು, ಪ್ಲ್ಯಾಸ್ಟಿಕ್ ಬಳಕೆಯಿಂದ ಮಣ್ಣು, ನೀರು ಮತ್ತು ಗಾಳಿ ಕಲುಷಿತವಾಗಿ ದುಷ್ಪರಿಣಾಮಗಳನ್ನು ಬೀರುತ್ತಿವೆ ಎಂದರು. ಜಾಗತಿಕವಾಗಿ ಕೃಷಿ ಕ್ಷೇತ್ರ ಕಡಿಮೆಯಾಗುತ್ತಿದೆ. ಜನಸಂಖ್ಯೆ  ಹೆಚ್ಚಾಗುತ್ತಿದ್ದು ಆಹಾರ ಭದ್ರತೆ ನೀಡುವುದು ಅನಿವಾರ್ಯವಾಗಿದೆ. ಕೃಷಿಯಲ್ಲಿ ರಾಸಾಯನಿಕಗಳ ಬಳಕೆೆಯನ್ನು ಸೂಕ್ತ ಮಾರ್ಗೋಪಾಯಗಳಿಂದ ನಿಯಂತ್ರಿಸಬಹುದಾಗಿದೆ ಎಂದರು. ಏಕ ಬೆಳೆ ಪದ್ಧತಿಯಿಂದ ಮಣ್ಣಿನ ಫಲವತ್ತತೆ ನಶಿಸಿ, ಸವಳು-ಜವಳು ಸಮಸ್ಯೆಯನ್ನು ಮುಧೋಳ ಭಾಗದ ರೈತರು ಎದುರಿಸುತ್ತಿದ್ದಾರೆ ಎಂದರು. ಏಕ ಬೆಳೆ ಪದ್ಧತಿಯನ್ನು ಹೊರತು ಪಡಿಸಿ ಬೆಳೆ ಬದಲಾವಣೆಯನ್ನು ಅನುಸರಿಸುವುದರಿಂದಲೂ ಮಣ್ಣಿನ ಫಲವತ್ತತೆ ಸಾಧ್ಯ ಎಂದರು. ಕಬ್ಬು ಬೆಳೆಯಲ್ಲಿ ಅಲ್ಪಾವಧಿ ಅಂತರ ಬೆಳೆಗಳಿಂದ ಲಾಭದಾಯಕ ಕೃಷಿ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಅಭಿಯಂತರುಗಳು  ನೀರಾವರಿ ಜೊತೆಗೆ, ಮಣ್ಣಿನ ಗುಣಧರ್ಮ, ವಿವಿಧ ನೀರಾವರಿ ಪದ್ಧತಿಗಳು, ಬೆಳೆ ಪದ್ಧತಿ ಮತ್ತು ಹೊಸ ತಾಂತ್ರಿಕತೆಗಳ ಜ್ಞಾನ ಪಡೆದು ರೈತರಿಗೆ ಪರಿಚಯಿಸುವ ಕಾರ್ಯ ನಿರ್ವಹಿಸಬೇಕೆಂದರು.  ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಜಲ ಸಂಪನ್ಮೂಲ ಇಲಾಖೆಯ ಅಭಿಯಂತರರು, ಘಟಪ್ರಭಾ ಅಚ್ಚುಕಟ್ಟು ಪ್ರದೇಶದ ಮುಧೋಳ ತಾಲ್ಲೂಕಿನ ರೈತರು ಮತ್ತು ಮುಮ್ಮಿಗಟ್ಟಿ ಹಾಗೂ ಕುರುಬಗಟ್ಟಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.  ಶ್ರೀಮತಿ ಸುವರ್ಣ ದೊಡ್ಡಮನಿ, ಪ್ರಾಧ್ಯಾಪಕರು, ವಾಲ್ಮಿ, ಧಾರವಾಡ ಕಾರ್ಯಕ್ರಮ ಸಂಯೋಜಿಸಿದರು, ಶ್ರೀ ನಾಗರಾಜ ತಹಶೀಲ್ದಾರ, ಸಹಾಯಕ ಪ್ರಾಧ್ಯಾಪಕರು, ವಾಲ್ಮಿ, ಧಾರವಾಡ ಕಾರ್ಯಕ್ರಮ ಸಹ ಸಂಯೋಜಕರು, ಶ್ರೀ ಪ್ರದೀಪ ದೇವರಮನಿ, ಸಹ ಪ್ರಾಧ್ಯಾಪಕರು, ವಾಲ್ಮಿ, ಧಾರವಾಡ, ಶ್ರೀಮತಿ ಅನುರಾಧಾ ಮಳಗಿ ವಾಲ್ಮಿ, ಧಾರವಾಡ ಕಾರ್ಯಕ್ರಮ ನಿರೂಪಣೆ ನಡೆಸಿದರು. 


ಸುದ್ದಿ ಓದಿ