ಎಲ್ಲರ ಸಹಕಾರದಿಂದ ಸಾಹಿತ್ಯ ಸಮ್ಮೇಳನ ಯಶಸ್ವಿ:ಡಾ.ಪ್ರಭುಗೌಡ

With the cooperation of all, the literary conference was a success: Dr. Prabhu Gowda

ಎಲ್ಲರ ಸಹಕಾರದಿಂದ ಸಾಹಿತ್ಯ ಸಮ್ಮೇಳನ ಯಶಸ್ವಿ:ಡಾ.ಪ್ರಭುಗೌಡ 

ದೇವರಹಿಪ್ಪರಗಿ 05 : ಐತಿಹಾಸಿಕ ದೇವರನಾಡು ಶರಣರ ಬೀಡಾದ ಪಟ್ಟಣದಲ್ಲಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಭಾಗ್ಯ ತಾಲೂಕಿನ ಜನತೆಯ ಪಾಲಿಗೆ ಒದಗಿ ಬಂದಿತ್ತು. ಅದರಂತೆ ಜ.03ರಂದು ಎಲ್ಲರ ಸಹಕಾರದಿಂದ ಐತಿಹಾಸಿಕ ರೀತಿಯಲ್ಲಿ ಸಾರ್ಥಕ ಸಾಹಿತ್ಯ ತೇರು ಎಳೆದೆವು, ಈ ಸಾಹಿತ್ಯ ಜಾತ್ರೆಗೆ ಸಹಕಾರ ಮನೋಭಾವನೆಯಿಂದ ಕಾರ್ಯನಿರ್ವಹಿಸಿದ ಸಲಕರಿಗೂ ಅಭಿನಂದನೆಗಳು ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರಾದ ಡಾ ಪ್ರಭುಗೌಡ ಲಿಂಗದಳ್ಳಿ (ಚಬನೂರ) ಹೇಳಿದರು.ಪಟ್ಟಣದ ಬಿಎಲ್ ಡಿಇ ಸಂಸ್ಥೆಯ ಶಾಲಾ ಮೈದಾನದಲ್ಲಿ ಶುಕ್ರವಾರದಂದು ಜಿಲ್ಲಾ ಮತ್ತು ತಾಲೂಕಾ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಮ್ಮೇಳನ ಯಶಸ್ವಿಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು,ಕನ್ನಡ ಸಾಹಿತ್ಯ ಕ್ಷೇತ್ರ ಇತರ ಸಾಹಿತ್ಯಗಳಿಗಿಂತ ಉನ್ನತ ಸ್ಥಾನದಲ್ಲಿದೆ. ಅದನ್ನು ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆಯಿಂದ ಆಸ್ವಾದಿಸಬೇಕು.ಅಂತಹ ಹೃದಯ ಮುಟ್ಟುವ ಕಾರ್ಯ ತಾಲೂಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದಿದೆ. ಪ್ರತಿಯೊಬ್ಬರು ತನು,ಮನದಿಂದ ಸೇವೆ ಸಲ್ಲಿಸಿದ್ದರಿಂದಲೇ ಇದೊಂದು ಐತಿಹಾಸಿಕ ಸಮ್ಮೇಳನವಾಗಿ ಮಾರ​‍್ಪಟಟಿತು.ಇಂತಹ ಒಂದು ಅತ್ಯುತ್ತಮ ಕೆಲಸ ನಡೆಯಲು ಒಬ್ಬರಿಂದ ಸಾಧ್ಯವಿಲ್ಲ ಕನ್ನಡ ನಾಡು,ನುಡಿ,ಸಾಹಿತ್ಯದ ಬಗ್ಗೆ ಅಪಾರ ಗೌರವಿರುವವರು ತಮಗೆ ವಹಿಸಿದ ಗುರುತರ ಜವಾಬ್ದಾರಿಯನ್ನು ಅರ್ಥಗರ್ಭಿತವಾಗಿ ಕೆಗೊಂಡದ್ದರಿಂದ ಯಶಸ್ವಿಯಾಗಲು ಸಾಧ್ಯವಾಯಿತು. ಸಾಹಿತ್ಯ ಸಮ್ಮೇಳನಕ್ಕಾಗಿ ರಚಿಸಿದ್ದ ಎಲ್ಲಾ ಸಮಿತಿಗಳು ತಮ್ಮ ಕೆಲಸವನ್ನು ಚಾಚು ತಪ್ಪದೇ ನಿಷ್ಠಾವಂತತೆಯಿಂದ ಮಾಡಿವೆ. ಇನ್ನಿತರರು ಅದ್ಭುತ ಸಹಕಾರ ನೀಡಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ ಆದಿಯಾಗಿ ಎಲ್ಲಾ ಪದಾಧಿಕಾರಿಗಳು, ದೇವರಹಿಪ್ಪರಗಿ ಪಟ್ಟಣದ ಮಹಾ ಜನತೆ ಹಾಗೂ ಈ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ತಾಲೂಕಿನ ಎಲೆ ಮರೆಯ ಕಾಯಿಯಂತೆ ಸಾಕಷ್ಟು ಸಂಘ, ಸಂಸ್ಥೆ, ಪತ್ರಕರ್ತರು, ಇಲಾಖೆ ಹಾಗೂ ಕನ್ನಡ ಪರ ಸೇರಿದಂತೆ ಎಲ್ಲಾ ಸಂಘಟನೆಗಳು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಸಮ್ಮೇಳನದ ಯಶಸ್ವಿಗೆ ಕಾರಣೀಭೂತರಾದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಹೇಳಿದರು.