ಬಿ.ವೈ.ವಿಜಯೇಂದ್ರ ನೇಮಕಕ್ಕೆ ಶಿವಾನಂದ ಕಾಗಿ ಸ್ವಾಗತ

ರಬಕವಿ-ಬನಹಟ್ಟಿ : ಬಿಜೆಪಿ ರಾಜ್ಯಾಧ್ಯಕ್ಷರಾಗಿ ಶಾಸಕ ಬಿ.ವೈ. ವಿಜಯೇಂದ್ರರವರನ್ನು ನೇಮಿಸಿದ್ದು ಹರ್ಷದಾಯಕವಾಗಿದೆ. ಬಿಜೆಪಿಗೆ ಹೊಸ ಸಾರಥಿ ಸಿಕ್ಕಿದ್ದು, ಪಕ್ಷ ಬಲವರ್ಧನೆಗೆ ಸಾಕಷ್ಟು ಅನುಕೂಲವಾಗುತ್ತದೆ. ಇದರಿಂದ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿದೆ ಎಂದು ರಬಕವಿ-ಬನಹಟ್ಟಿ ಬಿಜೆಪಿಯ ಯುವ ಕಾರ್ಯಕರ್ತ ಶಿವಾನಂದ ಕಾಗಿ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ರಾಜ್ಯ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಯುವ ನಾಯಕತ್ವದ ಬಗ್ಗೆ ಬಿಜೆಪಿ ಹೈಕಮಾಂಡ ಒಲವು ವ್ಯಕ್ತಪಡಿಸಿದ್ದು, ವಿಜಯೇಂದ್ರ ಅವರಿಗೆ ಜವಾಬ್ದಾರಿ ಹೆಚ್ಚಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯುವ ಸಮುದಾಯವನ್ನು ಸೆಳೆಯುವ ನಿಟ್ಟಿನಲ್ಲಿ ವಿಜಯೇಂದ್ರ ಅವರು ಚಾಣಾಕ್ಷತನ ಹೊಂದಿದ್ದಾರೆ. ಒಗ್ಗೂಡಿಸುವ ಹಾಗೂ ಸಂಘಟನಾ ಚತುರಗೊಳಿಸುವ ವಿಜಯೇಂದ್ರರವರಿಗೆ ದೊಡ್ಡ ಶಕ್ತಿಯಿದೆ ಎಂದು ತಿಳಿಸಿದರು.

ತೇರದಾಳದ ಶಾಸಕ ಸಿದ್ದು ಸವದಿಯವರಿಗೆ ಬಿಜೆಪಿಯ ರಾಜ್ಯಮಟ್ಟದ ಪದಾಧಿಕಾರಿಗಳಲ್ಲಿ ಉನ್ನತಮಟ್ಟದ ಸ್ಥಾನ ನೀಡಿದರೆ, ಪಕ್ಷದ ಏಳ್ಗೆಗೆ ಇನ್ನಷ್ಟೂ ಅನುಕೂಲವಾಗಲಿದೆ. ನಾಲ್ಕು ಬಾರಿ ಶಾಸಕರಾಗಿ, ಸರಕಾರದ ಮುಖ್ಯ ಸಚೇತಕರಾಗಿ, ನಿಗಮ ಮಂಡಳಿಗಳ ಅಧ್ಯಕ್ಷರಾಗಿ ಹಾಗೂ ಎರಡು ಬಾರಿ ಬಾಗಲಕೋಟೆ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಶಾಸಕ ಸವದಿಯವರನ್ನು ರಾಜ್ಯ ಮಟ್ಟದ ಬಿಜೆಪಿ ವರಿಷ್ಠರು ಪಕ್ಷ ಸಂಘಟನೆಯಲ್ಲಿ ಬಳಸಿಕೊಳ್ಳುವುದರಿಂದ ಪಕ್ಷಕ್ಕೆ ಇನ್ನಷ್ಟು ಶಕ್ತಿಬಂದಂತಾಗುತ್ತದೆ. ಸವದಿಯವರು ಬಿಜೆಪಿ ಜಿಲ್ಲಾಧ್ಯಕ್ಷರಾದಗಲೆಲ್ಲ ಬಿಜೆಪಿ ಸರಕಾರ ಆಡಳಿತ ನಡೆಸಿದೆ. ಇದರಿಂದ ಪಕ್ಷಕ್ಕೆ ಅದೃಷ್ಟ ತರುವ ಜನನಾಯಕಾರಿದ್ದಾರೆ. ಮುಂಬರುವ ಲೋಕಸಭಾ, ಪಂಚಾಯತಿ ಚುನಾವಣೆಯಲ್ಲಿ ಇವರ ಅಪಾರವಾದ ಅನುಭವವನ್ನು ಪಕ್ಷದ ವರಿಷ್ಠರು ಬಳಸಿಕೊಂಡು ಉನ್ನತ ಸ್ಥಾನ ನೀಡಬೇಕೆಂದು ಕೋರುತ್ತೇನೆ ಎಂದರು