ಶಾಲಾಮಕ್ಕಳಿಂದ ನೆಗಳೂರ ಹಿರೇಮಠಕ್ಕೆ ಪಾದಯಾತ್ರೆ

ಹಾವೇರಿ11: ತಾಲೂಕಿನ ಗುತ್ತಲ ಪಟ್ಟಣದ ಡಾ.ಎಸ್ ರಾಧಕೃಷ್ಣನ್ ಕಿರಿಯ ಪ್ರಾಥಮಿಕ ಶಾಲೆಯಸುಮಾರು 50 ಮಕ್ಕಳು ಶನಿವಾರ ನೆಗಳೂರ ಗ್ರಾಮದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠಕ್ಕೆ ಪಾದಯಾತ್ರೆ ಕೈಗೊಂಡಿದ್ದರು. ಬೆಳಗ್ಗೆ 6ಗಂಟೆಗೆ ಗುತ್ತಲ ದಿಂದ ಪ್ರಾರಂಭಗೊಂಡ ಮಕ್ಕಳ ಪಾದಯಾತ್ರೆ 9 ಗಂಟೆಗೆ ನೆಗಳೂರಗ್ರಾಮದ ಹಿರೇಮಠಕ್ಕೆ ಬಂದು ತಲುಪಿದರು. ಶಾಲೆಯ ಸಂಸ್ಥಾಪಕ ಹಾಗೂ ಮುಖ್ಯ ಶಿಕ್ಷಕ ನಾಗರಾಜ ತೇಲ್ಕರ ಹಾಗೂ ಸಹ ಶಿಕ್ಷಕಿಯರು ಮಕ್ಕಳು ಗುರುಶಾಂತೇಶ್ವರ ಶಿವಾಚಾರ್ಯರ ದರ್ಶನ ಪಡೆದರು.