ವಿಜಯಪುರ: ಹೊಸ ಸರಕಾರಕ್ಕೂ ಸಂಕಷ್ಟದ ಸ್ಥಿತಿ

ಲೋಕದರ್ಶನ ವರದಿ

ವಿಜಯಪುರ 27: ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ಮುಂದುವರೆಯಲಿದೆ ಎಂದು ಹೇಳಿರುವ ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ, ನೂತನ ಸಕರ್ಾರ ಕೂಡ ಸಂಕಷ್ಟ ಅನುಭವಿಸುವುದು ತಪ್ಪಿದ್ದಲ್ಲ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತುತ ರಾಜಕೀಯ ವಿದ್ಯಮಾನವನ್ನು ವಿಶ್ಲೇಷಿಸಿದ ಅವರು, ಯಾರದೋ ಮಕ್ಕಳನ್ನು ದತ್ತಕ ಪಡೆಯುವ ದುಸ್ಥಿತಿ ರಾಜ್ಯದಲ್ಲಿ ಎದುರಾಗಿದೆ 

ಅತೃಪ್ತ ಶಾಸಕರು ಮನಪರಿವರ್ತನೆ ಹೊಂದಿ ಮರಳಿ ಪಕ್ಷಕ್ಕೆ ಬರುವುದಾದರೆ ಅವರನ್ನು ಕಾಂಗ್ರೆಸ್ ಪಕ್ಷ ಮರಳಿ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಆದರೆ ಅವರು ಪರಿವರ್ತನೆಯಾಗಬೇಕು. ಅತೃಪ್ತ ಶಾಸಕರು ವಿನಾಕಾರಣ ತಮ್ಮ ಮೊಂಡುತನ ಪ್ರದಶರ್ಿಸಿದ್ದರಿಂದ ಸಿದ್ಧರಾಮಯ್ಯ ಅವರು ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆ ಸೇರ್ಪಡೆಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆರೋಗ್ಯ ಸಚಿವನಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಂತೃಪ್ತಿ ನನಗಿದೆ. ಆರೋಗ್ಯ ಇಲಾಖೆಯ ಆಡಳಿತ ಸುಧಾರಣೆಗಾಗಿ ಸಾಕಷ್ಟು ಕ್ರಮ ಕೈಗೊಂಡಿದ್ದೇನೆ, ಆಡಳಿತ ಒತ್ತಡ ತಪ್ಪಿಸುವುದಕ್ಕಾಗಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಗಳನ್ನು ಕೇಂದ್ರಿಕರಿಸಿ ಹೆಚ್ಚುವರಿ ನಿರ್ದೇಶಕ ಹುದ್ದೆಯನ್ನು ಸೃಷ್ಟಿಸಿದ್ದೇ ಎಂದು ತಮ್ಮ ಅವಧಿಯಲ್ಲಿ ಕೈಗೊಂಡ ಕೆಲವು ಕಾರ್ಯಚಟುವಟಿಕೆಗಳನ್ನು ಸ್ಮರಿಸಿದರು.