ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆಯಾಗಿ ವಿಜಯಲಕ್ಷ್ಮಿ ಆಯ್ಕೆ
Vijayalakshmi elected as women district president of Farmers' Association
ಹೂವಿನಹಡಗಲಿ 26: ಕರ್ನಾಟಕದ ರಾಜ್ಯ ರೈತ ಸಂಘದ ವಿಜಯನಗರ ಜಿಲ್ಲೆಯ ಪದಾಧಿಕಾರಿಗಳನ್ನು ಈಚೆಗೆ ಆಯ್ಕೆ ಮಾಡಲಾಯಿತು.ರಾಜ್ಯ ಅದ್ಯಕ್ಷ ಬಿ.ಪಿ.ನಾಗೇಂದ್ರ, ಕಾರ್ಯ ಅದ್ಯಕ್ಷ ಜೆ.ಎಂ.ವೀರಸಂಗಯ್ಯ ಮತ್ತು ಮಹಿಳಾ ರಾಜ್ಯಧ್ಯಕ್ಷರಾದ ನಾಗರತ್ನಮ್ಮ ಪಾಟೀಲ್ ಇವರನೇತೃತ್ವದಲ್ಲಿ ಜಿಲ್ಲಾ ಪದಾಧಿಕಾರಿಗಳನ್ನೂ ರಚನೆ ಮಾಡಲಾಯಿತು.ವಿಜಯನಗರ ಜಿಲ್ಲೆಯ ಅಧ್ಯಕ್ಷರಾಗಿ ಎ.ಅಂಜಿನೇಯಲು ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಹೂವಿನಹಡಗಲಿ ಬಿ.ಹೆಚ್.ಎಂ..ವಿಜಯಲಕ್ಷ್ಮಿ ಮತ್ತು ಪುರುಷ ಜಿಲ್ಲಾ ಉಪಾಧ್ಯಕ್ಷರಾಗಿ ಕೆ. ಮಂಜುನಾಥ.ಪುರ ಮತ್ತು ಕೆ.ಗನಿಸಾಬ್ ಬಾವಿಹಳ್ಳಿ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ದುರುಗಪ್ಪ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಹಡಗಲಿ ತಾಲೂಕು ರೈತ ಸಂಘದ ಅದ್ಯಕ್ಷ ಸಿದ್ದಪ್ಪ ಗುಜನೂರು, ಪ್ರಧಾನ ಕಾರ್ಯದರ್ಶಿ ಶಿವರಾಜ ತಿಳಿಸಿದರು. ಇದೇ ವೇಳೆ ರೈತ ಸಂಘದ ಗೀತಾ, ಶಶಿಕಲಾ, ಸರ್ವಮಂಗಳ, ಚಂದ್ರಮ್ಮ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 