ಮಹಲಿಂಗಪುರ

ಪಿರಾ​‍್ಯಮಿಡ್ ಧ್ಯಾನ ಸಾಧಕರಿಂದ ಸಸ್ಯಾಹಾರ ಜಾಗೃತಿ ಜಾಥಾ

ಪಿರಾ​‍್ಯಮಿಡ್ ಧ್ಯಾನ ಸಾಧಕರಿಂದ ಸಸ್ಯಾಹಾರ ಜಾಗೃತಿ ಜಾಥಾ

ಮಹಾಲಿಂಗಪುರ, 11 : ಪಟ್ಟಣದಲ್ಲಿ ಪಿರಾ​‍್ಯಮಿಡ್ ಸ್ಪಿರಿಚ್ವಲ್ ಸೊಸೈಟಿ ಸಂಸ್ಥಾಪಕ ಬ್ರಹ್ಮರ್ಷಿ ಡಾ.ಸುಭಾಷ್ ಪತ್ರೀಜಿ ಜನ್ಮದಿನದ ನಿಮಿತ್ತ ಸಸ್ಯಾಹಾರ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು. ನೂರಾರು ಧ್ಯಾನ ಸಾಧಕರು ನಾನಾ ಘೋಷಣೆ ಫಲಕ ಹಿಡಿದು, ಘೋಷಣೆ ಕೂಗುತ್ತ ಇಲ್ಲಿನ ಮಾರುತೇಶ್ವರ ದೇವಸ್ಥಾನದಿಂದ ನೀಲಕಂಠೇಶ್ವರ ದೇವಸ್ಥಾನ, ಗಾಂಧೀ ವೃತ್ತ, ಅಂಬೇಡ್ಕರ ವೃತ್ತ, ಟೊಣಪಿನಾಥ ದೇವಸ್ಥಾನ, ಸಮಗಾರ ಗಲ್ಲಿ, ಚನ್ನಗಿರೇಶ್ವರ ದೇವಸ್ಥಾನ, ಗಡಾದಗಲ್ಲಿ, ಮಹಾಲಿಂಗೆಶ್ವರ ದೇವಸ್ಥಾನದ ಮೂಲಕ ಬನಶಂಕರಿ ದೇವಸ್ಥಾನದ ವರೆಗೆ ಸಸ್ಯಾಹಾರ ಜಾಗೃತಿ ರಾ​‍್ಯಲಿ ನಡೆಸಿದರು. ಇಡೀ ಮಾನವ ಜಗತ್ತೇ ಸಸ್ಯಾಹಾರಿ ಮತ್ತು ಪಿರಾ​‍್ಯಮಿಡ್ ಧ್ಯಾನಿಗಳ ಜಗತ್ತಾಗಬೇಕು ಎಂಬ ಸಂಕಲ್ಪ ಹೊಂದಿದ್ದ ಪತ್ರೀಜಿಯವರ ಜನ್ಮದಿನ ನ.11ರಂದು  ಇದ್ದು, ತನ್ನಿಮಿತ್ತ ಈ ಜಾಥಾ ಹಮ್ಮಿಕೊಳ್ಳಲಾಯಿತು.  

ಮಾಂಸಾಹಾರದಿಂದ ಮಾನವ ಮೃಗನಾಗುತ್ತಿದ್ದಾನೆ: ಬನಶಂಕರಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಪ್ರಕಾಶ ಬುರುಡ, ಎಸ್‌.ಐ.ಕುಂದಗೋಳ, ಮಲ್ಲಿಕಾರ್ಜುನ ಕಂಕಣವಾಡಿ ಮಾತನಾಡಿ, ಮನುಷ್ಯ ಜನ್ಮತಃ ಸಸ್ಯಾಹಾರಿಯಾಗಿದ್ದಾನೆ. ಮನುಷ್ಯನ ಗುಣಗಳಿಗೆ ಆತನ ಆಹಾರವೇ ಮೂಲವಾಗುತ್ತವೆ. ಪಂಚೇಂದ್ರಿಯಗಳಿಂದ ಸ್ವೀಕರಿಸುವ ಆಹಾರ, ವಿಚಾರಗಳು ಸಾತ್ವಿಕ ಮತ್ತು ಸಸ್ಯಾಹಾರವಾಗಿದ್ದರೆ ಮನುಷ್ಯಗುಣ ಬೆಳೆಯುತ್ತದೆ. ಮಾಂಸಾಹಾ ಸೇವಿಸಿದರೆ ಮೃಗದ ಗುಣ ಬೆಳೆಯುತ್ತದೆ. ಏನಾದರೂ ಆಗು ಮೊದಲು ಮಾನವನಾಗು, ಮಾನವನಾಗಲು ಮೊದಲು ಸಸ್ಯಾಹಾರಿಯಾಗು ಎಂಬ ಸಂದೇಶ ನೀಡಿದರು.  

ಪಿರಾ​‍್ಯಮಿಡ್ ಸ್ಪಿರಿಚ್ವಲ್ ಸೊಸೈಟೀಸ್ ಮೂಮೆಂಟ್ (ಪಿಎಸ್‌ಎಸ್‌ಎಂ) ವತಿಯಿಂದ ನಿಯಮಿತವಾಗಿ ಆನ್‌ಲೈನ್‌ನಲ್ಲಿ ಧ್ಯಾನ ಮಾಡುತ್ತ ಸಂಪರ್ಕದಲ್ಲಿರುವ ಧ್ಯಾನಸಾಧಕರು ವಿಶೇಷ ಸಂದರ್ಭದಲ್ಲಿ ಹೀಗೆ ಪ್ರತ್ಯಕ್ಷವಾಗಿ ಆಫ್‌ಲೈನ್ ಆಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ವಿಜಯಲಕ್ಷ್ಮೀ ಅಂಗಡಿ ಜಾಥಾ ಕಾರ್ಯಕ್ರಮ ಆಯೋಜಿಸಿದ್ದರು. ಮಂಜುಳಾ ನಾವಲಗಿಮಠ, ಪ್ರಕಾಶ ಬುರುಡ, ಎಸ್‌.ಐ.ಕುಂದಗೋಳ, ಸಂಜಯ ಧಮಾಕೆ, ಮಲ್ಲಿಕಾರ್ಜುನ ಕಂಕಣವಾಡಿ, ಕಲ್ಪನಾ ಕರಡಗಿ, ಜಯಶ್ರೀ ಹಿರೇಮಠ, ರವೀಂದ್ರ ಕಾಮಗೊಂಡ, ಸುರೇಶ ನಿಂಗಪ್ಪನವರ ಸೇರಿದಂತೆ ದೂರದ ಚಿಕ್ಕೋಡಿ, ಬನಹಟ್ಟಿ, ಕೊಡ್ಲಿವಾಡ, ಅಮೀನಗಡ, ಮುಧೋಳ ಮತ್ತು ಮಹಾಲಿಂಗಪುರದಿಂದ 140ಕ್ಕೂ ಹೆಚ್ಚು ಧ್ಯಾನ ಸಾಧಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ