ಲೋಕದರ್ಶನ ವರದಿ
ಬೆಳಗಾವಿ08: ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಮಂಗಳವಾರ, ದಿ.07ರಂದು ವಿಟಿಯು ಅಂತರವಲಯದ ಮಟ್ಟದ ಕಬಡ್ಡಿ ಪಂದ್ಯಾವಳಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆದವು.
ಬೆಂಗಳೂರಿನ ನ್ಯೂ ಹಾರಿಜೋನ್ ಇಂಜನೀಯರಿಂಗ್ ಕಾಲೇಜು ಹಾಗೂ ಮೈಸೂರಿನ ಎಮ್.ಐ.ಟಿ. ಕಾಲೇಜು ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಿತು. ತೀವ್ರ ಕುತೂಹಲದಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ನ್ಯೂ ಹಾರಿಜೋನ್ ಇಂಜನೀಯರಿಂಗ್ ಕಾಲೇಜು ವಿಟಿಯು ಅಂತರವಲಯದ ಮಟ್ಟದ ಕಬಡ್ಡಿ ಪಂದ್ಯಾವಳಿಯ ಚಾಂಪಿಯನ್ ಪಟ್ಟ ಪಡೆಯಿತು. ಮೈಸೂರಿನ ಎಮ್.ಐ.ಟಿ. ಕಾಲೇಜು ಎರಡನೆಯ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡಿತು. ಮಂಗಳೂರಿನ ಎಸ್.ಐ.ಟಿ. ಕಾಲೇಜು ಮತ್ತು ಹಾಸನದ ಎಮ್.ಸಿ.ಇ. ಕಾಲೇಜುಗಳು ಕ್ರಮವಾಗಿ ಮೂರನೆ ಹಾಗೂ ನಾಲ್ಕನೆ ಸ್ಥಾನ ಪಡೆದವು.
ಬಹುಮಾನ ವಿತರಣಾ ಸಮಾರಂಭದಲ್ಲಿ ಅಂಗಡಿ ತಾಂತ್ರಿಕ ಕಾಲೇಜಿನ ಆಡಳಿತಾಧಿಕಾರಿ ರಾಜು ಜೋಶಿ ಹಾಗೂ ಪ್ರಾಚಾರ್ಯ ಡಾ. ಸಂಜಯ ಪೂಜಾರಿ ನಾಲ್ಕೂ ತಂಡಗಳಿಗೆ ಬಹುಮಾನ ವಿತರಿಸಿ ಅಭಿನಂದಿಸುತ್ತ, ಎಲ್ಲ ಕಾಲೇಜಿನ ತಂಡಗಳು ಇದೇ ರೀತಿಯಾಗಿ ಎಲ್ಲ ಆಟಗಳಲ್ಲಿ ಭಾಗವಹಿಸಲು ಕರೆ ನೀಡಿದರು. ಜಿಮ್ಖಾನಾ ಚೇರಮನ್ ಪ್ರೊ. ಕಿರಣ ಪೋತದಾರ ಮಾತನಾಡಿ ಪಂದ್ಯಾವಳಿ ಯಶಸ್ವಿಗಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಪ್ರೊ. ಅಮರ ಬ್ಯಾಕೋಡಿ, ಬೆಂಗಳೂರಿನ ಎಸ್.ಜೆ.ಬಿ.ಐ.ಟಿ. ಕಾಲೇಜಿನ ದೈಹಿಕ ನಿದರ್ೇಶಕ ಡಾ. ರಂಗನಾಥ, ರಾಮಯ್ಯ ಇಂಜನೀಯರಿಂಗ್ ಕಾಲೇಜಿನ ದೈಹಿಕ ನಿದರ್ೇಶಕ ಭೈರಪ್ಪ, ಬಿ.ಐ.ಟಿ. ಕಾಲೇಜಿನ ದೈಹಿಕ ನಿದರ್ೇಶಕ ದಾಸೇಗೌಡ, ಆರ್.ಸಿ.ಯು. ನ ನಿವೃತ್ತ ದೈಹಿಕ ನಿದರ್ೇಶಕ ಜಿ.ಎನ್. ಪಾಟೀಲ, ದೈಹಿಕ ನಿದರ್ೇಶಕ ಹಾಗೂ ಈ ಪಂದ್ಯಾವಳಿಯ ಸಂಚಾಲಕ ವಿಶಾಂತ ದಮೋಣೆ, ಎಂ.ಎನ್. ಖೋತ ಹಾಗೂ ಎಲ್ಲ ಕಾಲೇಜುಗಳ ದೈಹಿಕ ನಿದರ್ೇಶಕರು, ಪಂದ್ಯದ ನಿಣರ್ಾಯಕರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾಥರ್ಿಗಳು ಉಪಸ್ಥಿತರಿದ್ದರು.