ಲೋಕದರ್ಶನವರದಿ
ಧಾರವಾಡ16: ನಗರದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ರಂಗಸಂಗ ಸಂಸ್ಥೆ,ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ "ಮರೆಯದ ಹಾಡು" "ಇದು ಕವಿತೆಯ ಕಥೆ" ಎಂಬ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಹಾನಂದಾ ಗೋಸಾವಿ ಮಾತನಾಡುತ್ತಾ ಸಂಗೀತವು ಸರ್ವ ರೋಗಗಳಿಗೆ ಒಂದು ಔಷಧವೂ ಹೌದು ಮತ್ತು ಅದು ಎಲ್ಲ ವರ್ಗದವರನ್ನು ಒಂದು ಕಡೆ ಸೇರಿಸಿ ಸಮಾನತೆ ಸಾರುವ ಒಂದು ಉತ್ತಮ ಮಾದ್ಯಮವೂ ಆಗಿದೆ ಹಾಗಾಗಿ ಸಂಗೀತದ ಶಕ್ತಿ ಆಗಾದವಾದದ್ದು ಎಂದು ಹೇಳಿದರು.
ಸಂಗೀತದ ಮಜಲುಗಳನ್ನು ಅರ್ಥಮಾಡಿಕೊಳ್ಳದೆ ಅರ್ಧಮರ್ಧ ಸಂಗೀತದ ಪ್ರಭಾವಕ್ಕೆ ಒಳಗಾಗಿ ಮೂಲ ಸಂಗೀತವನ್ನು ಹಾಳು ಮಾಡುತ್ತಿರುವುದು ಬೇಸರದ ಸಂಗತಿ.
ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವ ಪ್ರತಿಷ್ಠಾನದ ಕಾರ್ಯದಿಂದ ಇಂದಿನ ಯುವಕರಿಗೆ ನಮ್ಮ ಮೂಲ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಪರಿಚಯಿಸಿ ಉಳಿಸಿ ಬೆಳೆಸು ಮಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಓಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಯಗತಿಮಠ ಹೇಳಿದರು.
ಆಕಾಶವಾಣಿಯ ನಿವೃತ್ತ ನಿದರ್ೇಶಕ ಸಿಯು ಬೆಳ್ಳಕ್ಕಿ ಮಾತನಾಡಿ ಧಾರವಾಡ ಆಕಾಶವಾಣಿಯಿಂದ ಹಲವಾರು ಸಂಗೀತಗಾರರು ತಾವು ಬೆಳೆಯುವುದಲ್ಲದೆ ಧಾರವಾಡ ಸಂಗೀತವನ್ನು ಇಡೀ ಜಗತ್ತಿಗೆ ಪಸರಿಸುವಂತೆ ಮಾಡಿದ ಹಿರಿಮೆ ಇದೆ. ಅಂತಹ ಸಂಗೀತವನ್ನು ಕೇಳಲು ಕೇಳುಗರಿಲ್ಲದಿರುವುದು ಬೇಸರದ ಸಂಗತಿಯೆಂದು ಹೇಳಿದರು.
ಉಪಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ ಎಂತಹ ಒತ್ತಡವನ್ನು ಸಹ ಕಡಿಮೆ ಮಾಡಿ ಮಾನಸಿಕವಾಗಿ ನೆಮ್ಮದಿಯ ಬದುಕನ್ನು ಸಾಗಿಸಲು ಒಂದು ಉತ್ತಮ ಮಾದ್ಯಮ ಸಂಗೀತವಾಗಿದೆ.
ಇಂತಹ ಔಷಧವನ್ನು ಪ್ರತಿಷ್ಠಾನ ಮತ್ತು ರಂಗಸಂಗ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕೆ.ಎಚ್ ನಾಯಕ, ಆಕಾಶವಾಣಿಯ ಸಂಗೀತ ಸಂಯೋಜಕ ಶ್ರೀಕಾಂತ ಕುಲಕಣರ್ಿ, ಹಿರಿಯ ಕವಿಗಳಾದ ಎ ಎ ದಗರ್ಾ, ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಸ್ ಎಫ್ ಸಿದ್ದನಗೌಡರ, ನೌಕರಸಂಘದ ಮಾಜಿ ಅಧ್ಯಕ್ಷ ಎಸ್ ಕೆ ರಾಮದುರ್ಗ ವೇಧಿಕೆಯಲ್ಲಿ ಉಪಸ್ಥಿತರಿದ್ದರು. ದಾ ನಿಂಬನಗೌಡರ ನಿರೂಪಿಸಿದರು. ವಿಜಯಲಕ್ಷ್ಮೀ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೇಮಾನಂದ ಶಿಂದೆ ಪ್ರಾಥರ್ಿಸಿದರು. ಪವನ ಆದಿ ವಂದಿಸಿದರು.