ಮಹಲಿಂಗಪುರ

ಇಂದು ಭೀಮಾ ಕೋರೆಗಾಂವ ವಿಜಯೋತ್ಸವ

ಇಂದು ಭೀಮಾ ಕೋರೆಗಾಂವ ವಿಜಯೋತ್ಸವ

 

ಮಹಾಲಿಂಗಪುರ:ನಗರದಲ್ಲಿ 4ನೇ ಬಾರಿಗೆ 2008ನೇ ಭೀಮಾ ಕೋರೆಗಾಂವ ವಿಜಯೋತ್ಸವ ಕಾರ್ಯಕ್ರಮ ಶನಿವಾರ ಮುಂಜಾನೆ 10 ಗಂಟೆಗೆ ಸ್ಥಳೀಯ ಡಾ. ಬಿ.ಆರ್‌. ಅಂಬೇಡ್ಕರ್ ವೃತ್ತದಿಂದ ಆರಂಭವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. 

ಪೇಶ್ವೆಗಳ ವಿರುದ್ಧ ಸ್ವಾಭಿಮಾನದಿಂದ ಹೋರಾಡಿ ಗೆದ್ದು ಜಯಶಾಲಿಯಾದ ವೀರ ಮಹರ್ ಸೈನಿಕರಿಗೆ ಗುರು, ಹಿರಿಯರು ಮತ್ತು ಮುಖಂಡರೊಂದಿಗೆ ಠಾಣಾಧಿಕಾರಿ ಕಿರಣ ಸತ್ತಿಗೆರಿ ಪುಷ್ಪ ನಮನ ಸಲ್ಲಿಸುವರು. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಸರ್ಕಲ್ ನಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರುವ ಅಂಬೇಡ್ಕರ್ ಅಭಿಮಾನಿಗಳಿಂದ ಬೈಕ್ ರ್ಯಾಲಿ ನಡೆಯುವುದು. 

ಸಮುದಾಯದ ಶಕ್ತಿಯನ್ನು ಆಂದೋಲನದ ರೂಪಕ್ಕೆ ಕೊಂಡೋಯ್ದ ಹಿರಿಮೆ ಡಾ. ಬಿ.ಆರ್‌.ಅಂಬೇಡ್ಕರ್ ಅವರು ಸ್ಥಾಪಿಸಿದ ಮೂಕ ನಾಯಕ ಪತ್ರಿಕೆಯದ್ದು.ಇದರ ಶತಮಾನೋತ್ಸವ ಸಮಾರಂಭವು ಕೂಡ ನಡೆಯಲಿದೆ. ಇದೆ ಸಂಜೆ 6 ಗಂಟೆಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಮೂರ್ತಿಯ ಮೆರವಣಿಗೆ ಬಸವೇಶ್ವರ ಸರ್ಕಲ್ ದಿಂದ ಆರಂಭವಾಗಿ ನಡುಚೌಕಿ,ಗಾಂಧಿ ಸರ್ಕಲ್ ಮಾರ್ಗವಾಗಿ ಮರಳಿ ಬಿ.ಆರ್‌. ಅಂಬೇಡ್ಕರ್ ಸರ್ಕಲ್ ಗೆ ಆಗಮಿಸಿ, ಪ್ರಸ್ತುತ ಇರುವ ಮುಖಂಡರುಗಳಿಂದ ಭೀಮಾ ಕೋರೆಗಾಂವ ಹೋರಾಟದ ಇತಿಹಾಸ ಕುರಿತು ಭಾಷಣ ನಡೆಯಲಿದೆ. 


ಸುದ್ದಿ ಓದಿ