ಸೇತುವೆ ಕುಸಿದು ನದಿಗೆ ಉರುಳಿದ ಟಿಪ್ಪರ್ ವಾಹನ
Tipper vehicle falls into river after bridge collapses
ಸೇತುವೆ ಕುಸಿದು ನದಿಗೆ ಉರುಳಿದ ಟಿಪ್ಪರ್ ವಾಹನ
ಜಮಖಂಡಿ 02: ತಾಲ್ಲೂಕಿನ ಕಂಕಣವಾಡಿ ಗ್ರಾಮದಲ್ಲಿ ಸೇತುವೆ ಕುಸಿದು ಕಡಿ ತುಂಬಿರುವ ಟಿಪ್ಪರ್ ಕೃಷ್ಣಾ ನದಿಯ ಹಿನ್ನೀರಿಗೆ ಉರುಳಿ ಬಿದ್ದ ಬಿದ್ದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರುವುದಿಲ್ಲ.
ಸೇತುವೆ ಕುಸಿದ ಪರಿಣಾಮ ಟಿಪ್ಪರ್ ಕೃಷ್ಣಾ ನದಿಗೆ ಬಿಳುತ್ತಿದಂತೆ ಚಾಲಕ ಟಿಪ್ಪರ್ ಮೇಲೆ ಕುಳಿತುಕೊಂಡು ಕೂಗಾಟ, ಚಿರಾಟ ಮಾಡುತ್ತಿದಂತೆ ರಸ್ತೆಯಲ್ಲಿ ಹೋಗುತ್ತಿದ ಗ್ರಾಮಸ್ಥರು ಹಗ್ಗದ ಮೂಲಕ ಚಾಲಕನನ್ನು ರಕ್ಷಣೆ ಮಾಡಿದ್ದಾರೆಂದು ತಿಳಿಸಿದ್ದಾರೆ.
ಕಂಕಣವಾಡಿ ಗ್ರಾಮಸ್ಥರು ಪ್ರತಿನಿತ್ಯ ಜಮಖಂಡಿಗೆ ಶಾಲಾ-ಕಾಲೇಜು ಮಕ್ಕಳು ಹಾಗೂ ಸಂತೆಗೆ, ವ್ಯಾಪಾರಕ್ಕೆ, ಆಸ್ಪತ್ರೆಗೆ ಗ್ರಾಮಸ್ಥರು ಹೋಗಬೇಕಾದರೆ ಮುಖ್ಯ ರಸ್ತೆವಾಗಿದ್ದು. ಈ ರಸ್ತೆಯ ಮಧ್ಯಭಾಗದಲ್ಲಿ ಸೇತುವೆ ಇದ್ದ ಕಾರಣ ಗ್ರಾಮಸ್ಥರು ತಮ್ಮ ಜೀವವನ್ನು ಕೈಯಲ್ಲಿ ಹಿಡಿಕೊಂಡು ಹೋಗುವ ಪರಿಸ್ಥಿತಿ ಸುಮಾರು ವರ್ಷಗಳಿಂದ ನಡೆದಿದೆ. ಸಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಮನವಿ ಮಾಡಿದರು ಸಹ ಕ್ಯಾರೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರತಿನಿತ್ಯ ಸಾರಿಗೆ ಬಸ್‌ನಲ್ಲಿ ಶಾಲಾ ಮಕ್ಕಳನ್ನು ಹಾಗೂ ಗ್ರಾಮಸ್ಥರನ್ನು ತುಂಬಿಕೊಂಡು ಹೋಗುತ್ತದೆ. ಅದೃಷ್ಟವಶಾತ ಕೆಲವೆ ನಿಮಿಷದಲ್ಲಿ ಬಸ್ ಬರುವ ಸಮಯವಾಗಿತು. ಬಸ್ ಬಂದಿದರೆ ತುಂಬಿದ ಬಸ್ ಕೃಷ್ಣಾ ನದಿ ಹಿನ್ನೀರಿಗೆ ಬಿದ್ದ ಪರಿಣಾಮ ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ ಅನೀಲ ಬಡಿಗೇರ, ಕಂದಾಯ ನೀರೀಕ್ಷಕ ಮಂಜು ದೊಡಮನಿ, ಗ್ರಾಮೀಣ ಪೋಲಿಸರು. ಲೋಕೋಪಯೋಗಿ ಇಲಾಖೆಯ ಅಧಿಕಾರಿ ಭೇಟಿ ನೀಡಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 