ಮರೆಗುದ್ದಿ ದಿಗಂಬರೇಶ್ವರ ದೇವಸ್ಥಾನದದಲ್ಲಿ ಕಳ್ಳತನ ದೇವರ ಮೂರ್ತಿ, ಬಂಗಾರದ ವಸ್ತುಗಳು, ಹುಂಡಿ ಹಣ ಕದ್ದು ಪರಾರಿ
Theft at Digambareshwara Temple in Mareguddi, God's idol, gold items, money stolen and fled
ಮರೆಗುದ್ದಿ ದಿಗಂಬರೇಶ್ವರ ದೇವಸ್ಥಾನದದಲ್ಲಿ ಕಳ್ಳತನ ದೇವರ ಮೂರ್ತಿ, ಬಂಗಾರದ ವಸ್ತುಗಳು, ಹುಂಡಿ ಹಣ ಕದ್ದು ಪರಾರಿ
ಜಮಖಂಡಿ 29: ದೇವರನ್ನು ಬಿಡದ ಖದೀಮ ಕಳ್ಳರು. ದೇವರ ಮೂರ್ತಿ, ಕಾಣಿಕೆ ಹುಂಡಿ, ದೇವರದ ಬಂಗಾರದ ಕಣ್ಣುಬಟ್ಟುಗಳನ್ನು ಕದ್ದ ಖದೀಮ ಕಳ್ಳರ ಗ್ಯಾಂಗ್.
ತಾಲೂಕಿನ ಮರೆಗುದ್ದಿ ಗ್ರಾಮದ ಹೊರವಲಯದಲ್ಲಿರುವ ದಿಗಂಬರೇಶ್ವರ ದೇವಸ್ಥಾನದ ದೇವರ ಬೆಳ್ಳಿಯ ಮೂರ್ತಿ ಹಾಗೂ ಹುಂಡಿಯನ್ನು ದೋಚಿ ಕಳ್ಳರು ಪರಾರಿಯಾದ ಘಟನೆ ತಡರಾತ್ರಿ ನಡೆದಿದೆ.
8 ಕೆಜಿ ತೂಕದ ದೇವರ ಬೆಳ್ಳಿಯ ಮೂರ್ತಿ ಹಾಗೂ ಅಂದಾಜು ಒಂದು ಲಕ್ಷ ರುಪಾಯಿ ಇರುವ ಹುಂಡಿಯನ್ನು ದೋಚಿದ್ದಾರೆ. ಬೆಳ್ಳಿಯ ಮೂರ್ತಿಗೆ ಚಿನ್ನದ ಕಣ್ಣುಬಟ್ಟುಗಳಿಂದ ಅಲಂಕರಿಸಲಾಗಿತ್ತು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.ಮುಖ್ಯ ಪ್ರವೇಶ ದ್ವಾರದಿಂದಲೇ ಕಳ್ಳರು ದೇವಸ್ಥಾನ ಪ್ರವೇಶಿಸಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಕಳ್ಳರ ಪತ್ತೆಗೆ ಪೊಲೀಸರು ಪ್ರತ್ಯೇಕ ತಂಡ ರಚಿಸಿ ತನಿಖೆ ಕೈಗೊಂಡಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ದೇವಸ್ಥಾನದ ಅರ್ಚಕರು, ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸಿಪಿಐ ಮಲ್ಲಪ್ಪ ಮಡ್ಡಿ, ಗ್ರಾಮೀಣ ಪಿಎಸ್‌ಐ ಗಂಗಾಧರ ಪೂಜಾರಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.
ಬರುವ ಸೆ.10ರಂದು ಮರೆಗುದ್ದಿ ಗ್ರಾಮದ ದಿಗಂಬರೇಶ್ವರ ದೇವಸ್ಥಾನದ ಜಾತ್ರೆ ನಡೆಯಲಿದ್ದು, ದೇವಸ್ಥಾನದ ಪದ್ಧತಿಯಂತೆ ಜಾತ್ರೆಯ ದಿನದಂದು ವರ್ಷಕ್ಕೊಮ್ಮೆ ಹುಂಡಿ ತೆಗೆಯುವ ಸಂಪ್ರದಾಯ ಆಚರಿಸಿಕೊಂಡು ಬರಲಾಗುತ್ತಿದೆ. ವರ್ಷ ಪೂರ್ತಿ ಭಕ್ತರು ನೀಡಿದ ಕಾಣಿಕೆಯನ್ನು ಜಾತ್ರೆಯ ಸಂದರ್ಭದಲ್ಲಿ ಉಪಯೋಗಿಸಲಾಗುತ್ತಿತ್ತು ಎನ್ನಲಾಗಿದೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 