ಹುತಾತ್ಮ ಯೋಧ ಮಂಜುನಾಥ ಅವರ ಸ್ಮಾರಕ ನಿಮರ್ಿಸಲು ಬೆಳವಣಿಕಿ ಗ್ರಾಮಸ್ಥರು ಆಗ್ರಹ

ಲೋಕದರ್ಶನ ವರದಿ

ಗದಗ 23: ಹುತಾತ್ಮ ವೀರಯೋಧ ಮಂಜುನಾಥ ಸಗಣಿ ಅವರ ದೇಶಸೇವೆಯನ್ನು ಸದಾಸ್ಮರಣಿಯವಾಗಿಸಲು ಗ್ರಾಮ ಪಂಚಾಯತಿ ಆವರಣದಲ್ಲಿ  ಸ್ಮಾರಕ ನಿಮರ್ಿಸುವಂತೆ ಆಗ್ರಹಿಸಿ ಬೆಳವಣಿಕಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿ ಒತ್ತಾಯಿಸಿದರು.

ಬೆಳವಣಿಕಿ  ಗ್ರಾಮ ಪಂಚಾಯಿತಿ ಆವರಣದಲ್ಲಿರುವ ಅವರ ಸಮಾದಿಗೆ ಪೂಜೆ ಸಲ್ಲಿಸಿ  ಗ್ರಾಮಸ್ಥರು ಗ್ರಾಪಂ ಅಧ್ಯಕ್ಷರಿಗೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗ್ರಾಮದ  ಮುಖಂಡ ಯಲ್ಲಪ್ಪ ತಾಳಿ ಅವರು ಮಾತನಾಡಿ. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಹುತಾತ್ಮರಾದ ಬೆಳವಣಿಕಿ ಗ್ರಾಮದ ಮಂಜುನಾಥ ಸಗಣಿ  ಅವರ ಆದರ್ಶ, ದೇಶಪ್ರೇಮ ಇಂದಿನ ಯುವಕರಿಗೆ ಮಾದರಿಯಾಗಿದ್ದು  ಈ ನಿಟ್ಟಿನಲ್ಲಿ ಬೆಳವಣಿಕಿ ಗ್ರಾಮಕ್ಕೆ ಹಾಗೂ ಯುವಕರಿಗೆ ದೇಶಪ್ರೇಮದ ಬಗ್ಗೆ ಒಲವು ಮೂಡಲು  ಅವರ ಸ್ಮಾರಕ ಅಗತ್ಯವಾಗಿದ್ದು ಅದಕ್ಕೆ ಎಲ್ಲರೂ ಕೈಜೋಡಿಸಿ ಸ್ಮಾರಕ ನಿಮರ್ಾಣ ಮಾಡಬೇಕೆಂದು ಒತ್ತಾಯಿಸಿದರು.

ಯುವ ಮುಖಂಡರಾದ ಚಿದಾನಂದ  ಬಿಂಗಿ ಅವರು ಮಾತನಾಡಿ,  ದೇಶಸೇವೆ ಮಾಡುತ್ತಾ ಪ್ರಾಣತ್ಯಾಗ ಮಾಡಿದ  ಮಂಜುನಾಥ ಸೆಗಣಿ ಅವರು ಬೆಳವಣಿಕಿ ಗ್ರಾಮದ ಹುತಾತ್ಮ ಯೋಧ ಎನ್ನುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಅವರಂತೆಯೇ ದೇಶಕ್ಕಾಗಿ ಸೇವೆ ಸಲ್ಲಿಸಲು ಯುವಕರು ಮುಂದೆ ಬರುವದಕ್ಕಾಗಿ ಯುವಕರಿಗೆ ಪ್ರೇರಣೆ  ನೀಡಲು ಬೆಳವಣಿಕಿ ಗ್ರಾಮದಲ್ಲಿ ಸ್ಮಾರಕ  ಹಾಗೂ ಅವರ ಹೆಸರಿನಲ್ಲಿ  ಭವನ ನಿಮರ್ಿಸಬೇಕು. ಅದಕ್ಕಾಗಿ ಮುಂಬರುನ ಜ.26 ರ ಒಳಗೆ ಭೂಮಿಪೂಜೆ ಕೈಗೊಂಡು ಕಾಮಗಾರಿ ಆರಂಭಿಸಬೇಕು. ಅಲ್ಲದೇ  ಮುಂದಿನ ದಿನಗಳಲ್ಲಿ ಹುತಾತ್ಮ ಯೋಧನ ಹೆಸರನ್ನು ಚಿರಸ್ಥಾಯಿಯಾಗಿ ಹಲವಾರು ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯತ ಅಧ್ಯಕ್ಷ ಎಚ್. ಕೆ. ಸೈದಾಪುರ ಮನವಿ ಸ್ವೀಕರಿಸಿ ಮಾತನಾಡಿ, ದೇಶಕ್ಕೆ ಹೆಮ್ಮೆ ತರುವ ಕೆಲಸ ಮಾಡಿದ ಗ್ರಾಮದ ಹುತಾತ್ಮ ವೀರಯೋಧ ಮಂಜುನಾಥ ಸಗಣಿ ಅವರ ಹೆಸರನ್ನು ಅಜರಾಮರ ಗೊಳಿಸಲು ಹಾಗೂ ಅವರ ಸ್ಮಾರಕವನ್ನು ನಿಮರ್ಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರಲ್ಲದೇ ಇಂದಿನ ಯುವಕರು ದುಶ್ಚಟಗಳನ್ನು ದೂರಮಾಡಿ ಸೇನೆಯಲ್ಲಿ ಸೇವೆ ಸಲ್ಲಿಸುವ  ಮೂಲಕ ಗ್ರಾಮದ ಕೀತರ್ಿಯನ್ನು ದೇಶದ ಉದ್ದಗಲಕ್ಕೂ ಹೆಚ್ಚಿಸಬೇಕೆಂದು ಮನವಿ ಮಾಡಿದರು.

ಗ್ರಾಮ ಪಂಚಾಯತ ಸದಸ್ಯರಾದ ಡಿ. ವಿ. ಮಂಟೂರ, ಎಂ.ಎನ್. ಮದ್ರಿ,  ಹನುಮಂತ ತಾಳಿ, ಮೈಲಾರಿ ಮಾದರ,  ಚಂದ್ರು ಕುರಿ, ಮಾರುತಿ ಸಗಣಿ, ಕೆ.ಎಚ್.ಮಾಡೊಳ್ಳಿ,  ಭೀಮರೆಡ್ಡಿ ಹಳ್ಳಿಕೇರಿ, ಉಮೇಶ ಸಗಣಿ ಹಾಗೂ ಊರಿನ ಮುಖಂಡರಾದ ಷಣ್ಮುಕ ಕುರಿ, ಮಹೇಶ ಬಿಂಗಿ, ಸುರೇಶ ಸಗಣಿ, ಮುತ್ತು ನಂದಿ, ಶಂಕರ ಅರಹುಣಸಿ, ಚಂದಪ್ಪ ಯತ್ನಟ್ಟಿ, ನಾಗರಾಜ ಹುಳ್ಳಿ, ಕಿರಣ ಜೋಗಿ, ಮಂಜುನಾಥ ಜಕ್ಕಳವರ, ಪ್ರವೀಣ ಮಡಿವಾಳರ, ಶಂಕರ ಅರಹುಣಸಿ, ಈರಣ್ಣ ಕುರಿ, ಗಣೇಶ ಹಡಪದ, ಚಂದಪ್ಪ ಯತ್ನಟ್ಟಿ, ಶಿವಾನಂದ ನಾಯ್ಕರ, ಮರತಯ್ಯ ಸುಣಗದ, ಪ್ರಕಾಶ ಗೌಡರ, ಮಹೇಶ ಸಗಣಿ, ಶರಣಪ್ಪ ತಟ್ಟಿ,   ಸಚಿನ್ ಮಲ್ಲಾಪುರ, ಪ್ರಶಾಂತ ನೋಟಗಾರ, ಅಭಿಕ್ಷ ಅವರಾದಿ, ಕರಿಯಪ್ಪ ಸಗಣ,ಿ ಮಹಾಂತೇಶ ಜಗಾಪುರ, ಬಸಪ್ಪ ತಟ್ಟಿ, ಬಸವರಾಜ ಸಗಣಿ, ಷಣ್ಮುಖ ಕುರಿ, ಅಕ್ಷಯ್ ಶಿವರೆಡ್ಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು