ಸ್ಲಂ ನಿವಾಸಿಗಳಿಗೆ ಭೂ ಒಡೆತನ ನೀಡಲು ಕ್ರಮ: ಯು.ಟಿ ಖಾದರ್

ಲೋಕದರ್ಶನ ವರದಿ

ಗದಗ 21: ರಾಜ್ಯದಲ್ಲಿರುವ ಸ್ಲಂ ನಿವಾಸಿಗಳ ಅಭಿವೃದ್ಧಿಗಾಗಿ ಬಜೆಟ್ನಲ್ಲಿ ಪಾಲು ಮತ್ತು  ಕನರ್ಾಟಕ ಕೊಳಗೇರಿ ಅಭಿವೃದ್ಧಿ ಕಾಯ್ದೆ 2018 ಹಾಗೂ ರಾಜ್ಯದಲ್ಲಿ ಸಮಗ್ರ ವಸತಿ ಹಕ್ಕು ಕಾಯ್ದೆ ಜಾರಿಗಾಗಿ ಆಗ್ರಹಿಸಿ ಸ್ಲಂ ಜನಾಂದೋಲನ ಕನರ್ಾಟಕ ಸಂಘಟನೆಯ ನೇತೃತ್ವದಲ್ಲಿ  ಬೆಳಗಾವಿಯ ಸುವರ್ಣ ಸೌಧದ ಮುಂದೆ ರಾಜ್ಯದ ಸಾವಿರಾರು ಸ್ಲಂ ನಿವಾಸಿಗಳು ಪ್ರತಿಭಟನಾ ಧರಣಿಯನ್ನು ನಡೆಸಿ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ ಸಚಿವರಾದ ಯು.ಟಿ.ಖಾದರ ಅವರಿಗೆ ಮನವಿಯನ್ನು ಸಲ್ಲಿಸಿದರು.

ಸ್ಲಂ ಜನಾಂದೋಲನ ಕನರ್ಾಟಕದ ರಾಜ್ಯ ಸಂಚಾಲಕರಾದ ಎ. ನರಸಿಂಹಮೂತರ್ಿ ಮಾತನಾಡಿ ಕನರ್ಾಟಕ ರಾಜ್ಯದಲ್ಲಿ ಸರಿಸುಮಾರು 5800 ಕೊಳಚೆ ಪ್ರದೇಶಗಳಿದ್ದು, ಸಕರ್ಾರದಿಂದ 2802 ಕೊಳಚೆ ಪ್ರದೇಶಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಹಾಗೂ 2011ರ ಜನಗಣತಿಯಂತೆ ನಗರ ಜನಸಂಖ್ಯೆಯಲ್ಲಿ ಶೇ23% ಜನರು ಕೊಳಗೇರಿಯಲ್ಲಿ ವಾಸವಾಗಿದ್ದು 70 ಲಕ್ಷದಷ್ಟು ಜನರು ಇಂದು ರಾಜ್ಯದಲ್ಲಿರುವ ಕೊಳಚೆ ಪ್ರದೇಶದಲ್ಲಿ ಮಾನವ ವಾಸಮಾಡಲು ಸಾಧ್ಯವಿಲ್ಲದ್ಧಂತಹ ಅನೈರ್ಮಲ್ಯಯುತ ವಾತವರಣದಲ್ಲಿ ವಾಸ ಮಾಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ 80 ಲಕ್ಷಕ್ಕೂ ಮೇಲ್ಪಟ್ಟು ಕೊಳಗೇರಿ ನಿವಾಸಿಗಳ ಜನಸಂಖ್ಯೆ ಇದ್ದು ಇದರಲ್ಲಿ ಕನಿಷ್ಟ ನೂರು ಜನ ಶಾಸಕರುಗಳು ಆಯ್ಕೆ ಆಗುತ್ತಿದು, ಯಾವೊಬ್ಬ ಶಾಸಕರು ಅಧಿವೇಶನದಲ್ಲಿ ಸ್ಲಂ ನಿವಾಸಿಗಳ ಸಮಸ್ಯೆಗಳ ಬಗ್ಗೆ ಚಚರ್ೆ ಮಾಡದಿರುವುದು. 

2018ರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ನೀಡಿದ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿರುವ ಕೊಳಗೇರಿ ಸಮಸ್ಯೆಗಳ ಪರಿಹಾರಕ್ಕೆ ಮತ್ತು ನಗರ ಪ್ರದೇಶದ ವಸತಿ ರಹಿತರ ಸಮಸ್ಯೆಗಳ ಪರಿಹಾರಕ್ಕೆ ಭರವಸೆ ನೀಡಿದ್ದು ಅದರಂತೆ ಈಗೀನ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಮೈತ್ರಿಯ ಸಮಿಶ್ರ ಸಕರ್ಾರ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಘೋಷಣೆ ಮಾಡಿದ ಲ್ಯಾಂಡ್ ಬ್ಯಾಂಕ್ ಯೋಜನೆ ಮತ್ತು ಕನರ್ಾಟಕ ಕೊಳಗೇರಿ ಅಭಿವೃದ್ಧಿ ಕಾಯಿದೆ 2018 ಕಾರ್ಯ ರೂಪಕ್ಕೆ ತರುವುದರ ಜೊತೆಗೆ ಇಡೀ ದೇಶಕ್ಕೆ ಮಾದರಿಯಾಗಿ ಸರ್ವರಿಗೂ ವಸತಿ ಹಕ್ಕು ಖಾತ್ರಿ ಮಾಡುವ ಕಾಯ್ದೆಯನ್ನು ರೂಪಿಸಬೇಕೆಂದು ಒತ್ತಾಯಿಸಿದ್ದರು ಮತ್ತು ರಾಜ್ಯದಲ್ಲಿರುವ ಸ್ಲಂ ನಿವಾಸಿಗಳಿಗೆ ಭೂ ಒಡೆತನ ನೀಡಲು ರಾಜ್ಯ ಸರಕಾರ ಬದ್ಧತೆ ಪ್ರದಶರ್ಿಸಬೇಕೆಂದು ಆಗ್ರಹಿಸಿದ್ದರು. 

ರಾಜ್ಯ ನಗರಾಭಿವೃದ್ಧಿ ಹಾಗೂ ವಸತಿ ಇಲಾಖೆ ಸಚಿವಾರಾದ ಯು.ಟಿ.ಖಾದರ ಸಕರ್ಾರದ ಪರವಾಗಿ ಮನವಿ ಸ್ವಿಕರಿಸಿ ಮಾತನಾಡಿ ಸಮಾಜದ ಕಟ್ಟಕಡೆಯ ಶ್ರಮ ಜೀವಿಗಳು ಇಂದು ಕೊಳಚೆ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದು ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ ಅವಧಿಯಲ್ಲಿ ರೂಪಿಸಿದ ಸ್ಲಂ ಅಭಿವೃದ್ಧಿ ಕಾಯ್ದೆ 2018ಅನ್ನು ಮತ್ತು ಸ್ಲಂ ನಿವಾಸಿಗಳ ಮತ್ತು ಬಡವರ ಘನತೆಯಿಂದ ಬದುಕಲು ರಾಜ್ಯದಲ್ಲಿ ವಸತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲು ಅಧಿವೇಶನ ಮುಗಿದ ನಂತರ ಸ್ಲಂ ಜನಾಂದೋಲನ ಕನರ್ಾಟಕದ ಸಂಘಟನೆಯ ಸದಸ್ಯರೊಂದಿಗೆ ಸಭೆ ಕರೆದು ಸಾಧಕ ಬಾಧಕಗಳ ಬಗ್ಗೆ ಚಚರ್ಿಸಿ ಅಂತಿಮಗೊಳಿಸಲಾಗುವುದು ಇನ್ನೂ ಸ್ಲಂ ನಿವಾಸಿಗಳಿಗೆ ಭೂ ಒಡೆತನ ನೀಡಲು ಕ್ರಮ ಕೈಗೊಳ್ಳಲಾಗುವುದು ಅತೀ ಶೀಘ್ರವಾಗಿ ನಗರ ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿರುವ ರಾಜ್ಯದ 1184 ಕೊಳಚೆ ಪ್ರದೇಶಗಳಿಗೆ ಹಕ್ಕು ಪತ್ರ ನೀಡಲು ಸೂತ್ತೋಲೆ ಹೊರಡಿಸಲಾಗುವುದು ಹಾಗೂ ಕೊಳಚೆ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು 2019-2020ರ ಬಜೆಟ್ ನಲ್ಲಿ 1 ಸಾವಿರ ಕೋಟಿ ಬಜೆಟ್ ನಿಗದಿಗೊಳಿಸಲು ಪೂರ್ವ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು ಸಮಿಶ್ರ ಸರಕಾರ ಸ್ಲಂ ನಿವಾಸಿಗಳ ಪರವಾಗಿದೆ ಎಂದು ತಿಳಿಸಿದ್ದರು. ಪ್ರತಿಭಟನಾ ಧರಣಿಯ ನೇತೃತ್ವವನ್ನು ಸ್ಲಂ ಜನಾಂದೋಲನ ಕನರ್ಾಟಕದ ರಾಜ್ಯ ಸಂಘಟನಾ ಸಂಚಾಲಕರಾದ ಇಮ್ತಿಯಾಜ್ ಆರ್ ಮಾನ್ವಿ, ಜನಾರ್ಧನ್ ಹಳ್ಳಿಬೆಂಚಿ, ಚಂದ್ರಮ್ಮ, ಫಕೀರಪ್ಪ ತಳವಾರ್, ಶೋಭಾ ಕಮತರ, ರೇಣುಕಾ ಸರಡಗಿ, ರಸೂಲ್ ನದಾಫ್, ರೇಣುಕಾ ಯಲ್ಲಮ್ಮ, ಕೆ. ಮಂಜಣ್ಣ, ದೀಪಿಕ, ಶೆಟ್ಟಳಯ್ಯ, ಗಣೇಶ್ ಕಾಂಬ್ಳೆ, ಶೇಖರ್ ಬಾಬು, ಗದಗ ಜಿಲ್ಲಾ ಸ್ಲಂ ಸಮಿತಿಯ ಪ್ರಧಾನ ಕಾರ್ಯದಶರ್ಿ ಅಶೋಕ ಕುಸಬಿ, ಸಂಘಟನಾ ಕಾರ್ಯದಶರ್ಿಯಾದ ಪರವೀನಬಾನು ಹವಾಲ್ದಾರ, ಮಹಿಳಾ ಸಂಚಾಲಕರಾದ ಮೆಹರುನಿಸಾ ಢಾಲಾಯತ, ಯುವ ಸಮಿತಿ ಸಂಚಾಲಕರಾದ ಉಸ್ಮಾನ ಚಿತ್ತಾಪೂರ, ಸಂಘಟನಾ ಸಂಚಾಲಕ ರಫೀಕ ಧಾರವಾಡ, ಮಮ್ತಾಜ ಮಕಾನದಾರ, ಅಬುಬಕರ ಮಕಾನದಾರ, ನಜೀರಅಹ್ಮದ ಹಾವಗಾರ, ನಜಮುನಿಸಾ ಮುರಗೋಡ, ವಿಶಾಲಕ್ಷಿ ಹಿರೇಗೌಡ್ರ, ಕಮಲವ್ವ ಬಿದರೂರು, ಮದರ್ಾನಬಿ ಬಳ್ಳಾರಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರೂ ಸ್ಲಂ ನಿವಾಸಿಗಳು ಮತ್ತು ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಂಡಿದ್ದರು.