ಲೋಕದರ್ಶನವರದಿ
ಬೆಳಗಾವಿ22: ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ. ಓದು ಮನುಷ್ಯನ ದೊಡ್ಡ ಆಸ್ತಿಯಿದ್ದಂತೆ. ಜೀವನ ಮಾಡಲು ಹಣ ಬೇಕು ಆದರೆ ಹಣ ಗಳಿಸುವುದೇ ಶಿಕ್ಷಣದ ಮುಖ್ಯ ಗುರಿಯಾಗಿರಬಾರದು. ಮಕ್ಕಳಾದ ನೀವು ಸ್ವತಂತ್ರ ವಿಚಾರಶಕ್ತಿಯನ್ನು ಬೆಳೆಸಿಕೊಳ್ಳಿ ಹಾಗೂ ಆ ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿ ಎಂದು ಕೆ.ಎಲ್.ಎಸ್. ದ ಆಯ್.ಎಮ್.ಇ.ಆರ್. ಗೌನರ್ಿಂಗ್ ಬಾಡಿ ಚೇರಮನ್ರಾದ ರಾಜ ಬೆಳಗಾಂವಕರ ಇಂದಿಲ್ಲಿ ಹೇಳಿದರು.
ನಗರದ ತಿಳಕವಾಡಿಯ ಎರಡನೇ ರೇಲ್ವೆಗೇಟ್ ಹತ್ತಿರವಿರುವ ವರೇಕರ್ ನಾಟ್ಯ ಸಂಘ ಸಭಾಗೃಹದಲ್ಲಿ ಹಮ್ಮಿಕೊಂಡಿರುವ ಸೃಜನಾ ಕಲಾ ಶಿಬಿರವನ್ನು ಉದ್ಘಾಟಿಸಿದ ರಾಜ ಬೆಳಗಾಂವಕರ ಮೇಲಿನಂತೆ ಅಭಿಪ್ರಾಯ ಪಟ್ಟ ಅವರು ಬೇಸಿಗೆ ಶಿಬೀರಗಳ ಅವಶ್ಯಕತೆಯಿದ್ದು. ಇದರಿಂದ ಮಕ್ಕಳ ಕ್ರಿಯಾಶೀಲತೆ ಬೆಳೆಯುತ್ತದೆ ಅಲ್ಲದೇ ಬೆಸಿಗೆ ರಜೆ ಅನವಶ್ಯಕವಾಗಿ ಹಾಳಗದೆ ಸದುಪಯೋಗ ಮಾಡಿಕೊಂಡಂತಾಗುತ್ತದೆ. ಆ ಕೆಲಸವನ್ನು ಡಾ. ಎ. ಎಲ್. ಕುಲಕಣರ್ಿಯವರು ತುಂಬ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಜಿ.ಎಸ್.ಎಸ್. ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ನಾಗರಾಜ ಹೆಗಡೆಯವರು ಇಂದಿನ ಶಿಕ್ಷಣ ಅಂಕಗಳಾಧಾರಿತವಾಗಿದೆ. ಹೆಚ್ಚಿಗೆ ಅಂಕಗಳನ್ನು ತೆಗೆದುಕೊಂಡು ಪಾಸಾಗುವವನಿಗೆ ಮಾತ್ರ ಗೌರವ ದೊರೆಯುತ್ತಲಿದೆ.
ಸಾಹಿತ್ಯ, ಸಂಗೀತ, ಚಿತ್ರಕಲೆ, ಕ್ರೀಡೆಗಳ ಕುರಿತಂತೆ ಸಮಾಜದಲ್ಲಿ ಗೌರವವೇ ಇಲ್ಲದಂತಾಗಿರುವುದು ಖೇದದ ಸಂಗತಿ ಎಂದ ಅವರು ಭಾರತೀಯ ಜೀವವಿಮಾ ನಿಗಮದಲ್ಲಿ ಅತ್ಯುನ್ನತ ಹುದ್ದೆಯಲ್ಲಿ ನಿವೃತ್ತಿ ಹೊಂದಿರುವ ಡಾ. ಅರವಿಂದ ಕುಲಕಣರ್ಿಯವರು. ಇನ್ನಷ್ಟು ಹಣ ಗಳಿಸುವ ದಾರಿಯನ್ನು ಹುಡುಕಿಕೊಳ್ಳಬಹುದಾಗಿತ್ತು ಆದರೆ ಅವರು ಸಮಾಜಮುಖಿ ಕೆಲಸವನ್ನು ಆಯ್ದುಕೊಂಡರು. ಸೃಜನ ಕಲಾ ಬೇಸಿಗೆ ಶಿಬಿರಗಳನ್ನು ನಡೆಸುವುದರ ಮೂಲಕ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತಿರುವ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಡಾ. ಅರವಿಂದ ಕುಲಕಣರ್ಿ, ಪಾಲಕರು ಇಂದು ಅನವಶ್ಯಕ ಮಾನಸಿಕ ಒತ್ತಡವನ್ನು ಮಕ್ಕಳ ಮೇಲೆ ಹೇರುತ್ತಿದ್ದಾರೆ. ಮಕ್ಕಳಲ್ಲಿ ಅಡಗಿರುವ ಕ್ರಿಯಾಶೀಲತೆಯನ್ನು ಉಳಿಸುವಲ್ಲಿ ಬೆಳೆಸುವಲ್ಲಿ ಸೋಲುತ್ತಿದ್ದಾರೆ. ಮಕ್ಕಳಿಗೆ ಸ್ವತಂತ್ರವಾಗಿ ವಿಚಾರ ಮಾಡಲು ಸ್ವತಂತ್ರ ನಿಧರ್ಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನೇ ನೀಡುತ್ತಿಲ್ಲ.
ಆ ಕೆಲಸವನ್ನು ನಮ್ಮ ಸೃಜನಾ ಕಲಾ ಶಿಬಿರ ಮಾಡುತ್ತಿದೆ. ಇಲ್ಲಿ ಮಕ್ಕಳು ಆಟವಾಡುತ್ತವೆ, ಕತೆ ಹೇಳುತ್ತವೆ, ಬರೆಯುತ್ತವೆ, ಸಂಗೀತ, ನೃತ್ಯ, ಯೋಗಾ ಹೀಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಯತ್ತ ಗಮನ ಹರಿಸುತ್ತೇವೆ. ಎಂದು ಹೇಳಿದರು.
ಸಂಗೀತ, ನೃತ್ಯ, ನಾಟಕ ಕ್ರೀಡೆ, ಚಿತ್ರಕಲೆ ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿರವ ಸೃಜನಾ ಕಲಾ ಶಿಬಿರದ ಮಕ್ಕಳಾದ ರಮಣಿ ಹಂಗಿರಗೆಕರ, ಪ್ರಾಚಿ ಕದಮ, ಇವಾನಾ ವಾಸ, ಇಶನ್ ಕರಗುಪ್ಪಿಕರ, ವೆಂಕಟೇಶ ಡೊಂಗ್ರೆ, ವಷರ್ಿಣಿ ದೇಶಪಾಂಡೆ, ರುತುಜಾ ಹೇರೆಕರ, ಪ್ರಸಾದ ಹೇರೆಕರ ಇವರನ್ನು ವೇದಿಕೆಗೆ ಕರೆದು ಸನ್ಮಾನಿಸಿ ಗೌರವಿಸಲಾಯಿತು.
ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಶಿರೀಷ ಜೋಶಿ(ನಾಟಕ) ವಿನಾಯಕ ಮೊರೆ(ಸಂಗೀತ), ಗಾಯತ್ರಿ ಜೈನಾಪೂರ(ನೃತ್ಯ ನಿದರ್ೇಶನ), ಜಯಾ ಜೋಶಿ(ನಾಟಕ), ಕವಿತಾ ಗಂಗೂರ(ಯೋಗ), ರಾಹಿ ಕುಲಕಣರ್ಿ(ಕ್ರಾಫ್ಟ್), ವಂದನಾ ಮಾಳಗಿ(ಕ್ರಾಫ್ಟರ್), ಯಶಶ್ರೀ ರಾಯಕರ(ನಾಟಕ), ಜಿತೆಂದ್ರ ರೇಡೆಕರ(ಮರಾಠಿ ನಾಟಕ). ಮುಕುಂದ ನಿಂಗಣ್ಣವರ(ನಾಟಕ)ಇವರನ್ನು ಪುಷ್ಪ ನೀಡಿ ಗೌರವಿಸಲಾಯಿತು.
ಪದ್ಮಾ ಕುಲಕಣರ್ಿ ಸ್ವಾಗತಿಸಿದರು. ಗುರುನಾಥ ಕುಲಕಣರ್ಿ ವಂದಿಸಿದರು ಕು. ರಮಣಿ ಹಂಗಿರಗೆಕರ ನಿರೂಪಿಸಿದರು.